ರಾಜ್ಯದ ಸರ್ಕಾರಿ ನೌಕರರಿಗೆ ಬಿಗ್ ಶಾಕ್ – ಆರ್ಥಿಕ ಇಲಾಖೆಯಿಂದ ಹೊರಬಿತ್ತು ಅಧಿಕೃತವಾದ ಆದೇಶ…..

Suddi Sante Desk
ರಾಜ್ಯದ ಸರ್ಕಾರಿ ನೌಕರರಿಗೆ ಬಿಗ್ ಶಾಕ್ – ಆರ್ಥಿಕ ಇಲಾಖೆಯಿಂದ ಹೊರಬಿತ್ತು ಅಧಿಕೃತವಾದ ಆದೇಶ…..

ಬೆಂಗಳೂರು

ರಾಜ್ಯ ಸರ್ಕಾರವು ರಾಜ್ಯದ ನೌಕರ’ರಿಗೆ ಬಿಗ್ ಶಾಕ್ ನ್ನು ನೀಡಿದೆ ಹೌದು ಹೆಚ್ಚವರಿ ವೇತನ ಭತ್ಯೆ ಹಣ ಮರುಪಾವತಿಸಲು ಆದೇಶವನ್ನು ಪುನಃ ಮಾಡಲಾಗಿದೆ.ರಾಜ್ಯ ಸರ್ಕಾರಿ ನೌಕರರಿಗೆ ತಪ್ಪಾಗಿ ಹೆಚ್ಚುವರಿಯಾಗಿ ಪಾವತಿಸಲಾದ ವೇತನ ಮತ್ತು ಭತ್ಯೆಗಳನ್ನು ಮರುಪಾವತಿಸಿಕೊಳ್ಳುವಂತೆ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.

ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನ್ನು ನೀಡಲಾಗಿದೆ.ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು ಸರ್ಕಾರಿ ನೌಕರರ ನೇಮಕಾತಿ, ವರ್ಗಾವಣೆ, ವೃಂದ ಬದಲಾವಣೆ, ನಿಯೋಜನೆ, ಮುಂಬಡ್ತಿ, ವೇತನ ಶ್ರೇಣಿ ಬದ ಲಾವಣೆ ಮತ್ತು ವಾರ್ಷಿಕ ವೇತನ ಬಡ್ತಿ, ಕಾಲ ಬದ್ಧ ಬಡ್ತಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ವೇತನ ನಿಗಧೀಕರಣ ಅಥವಾ ಮರುನಿಗಧೀಕ ರಣ ಸನ್ನಿವೇಶಗಳು ಉಂಟಾಗುತ್ತವೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಅಧಿಕಾರಿ ನೌಕರರಿಂದ ಕಣ್ತಪ್ಪಿನಿಂದ ನೌಕರರ ಅರ್ಹತೆಗಿಂತ ಹೆಚ್ಚುವರಿ ಆರ್ಥಿಕ ಸೌಲಭ್ಯವನ್ನು ಮಂಜೂರು ಮಾಡಲಾ ಗಿದೆ. ಸಾಕಷ್ಟು ಸಮಯ ಕಳೆದ ನಂತ್ರ ಅಥವಾ ಸಂಬಂಧಿತ ನೌಕರರು ನಿವೃತ್ತಿ ಅಂಚಿನಲ್ಲಿದ್ದಾಗ ಅಥವಾ ನಿವೃತ್ತರಾದ ನಂತ್ರ ಹೆಚ್ಚುವರಿಯಾಗಿ ಪಾವತಿಸಿದ ಮೊಬಲಗಿನ ವಸೂಲಾತಿಯನ್ನು ಪರಿಗಣಿಸುವ ಸನ್ನಿವೇಶಗಳು ಒದಗಿಬರುತ್ತವೆ ಎಂದು ತಿಳಿಸಿದ್ದಾರೆ.

ಸರ್ಕಾರಿ ನೌಕರರಿಗೆ ಹೆಚ್ಚಿಗೆ ಪಾವತಿ ಮಾಡಲಾದ ವೇತನ ಭತ್ಯೆಗಳ ಮೊತ್ತವನ್ನು ಸರ್ಕಾರದ ಇಲಾಖೆಯ ಹಂತದಲ್ಲಿಯೇ ಮನ್ನಾ ಮಾಡುತ್ತಿ ರುವುದು ಸರ್ಕಾರದ ಗಮನಕ್ಕೆ ಬಂದಿದೆ. ಎಲ್ಲಾ ಇಲಾಖೆಗಳು ತಮ್ಮ ಅಧೀನ ಸಿಬ್ಬಂದಿಗಳಿಂದ ವೇತನ ನಿಗಧೀಕರಣ ಅಥವಾ ಭತ್ಯೆ ಮಂಜೂ ರಾತಿ ಮಾಡುವಾಗ ಕಡ್ಡಾಯವಾಗಿ ಮೂರು ಹಂತದಲ್ಲಿ ಮೇಲ್ವಿಚಾರಣೆ ಮಾಡತಕ್ಕದ್ದು ಎಂದು ಸೂಚಿಸಿದ್ದಾರೆ.

ಐದು ವರ್ಷಗಳಿಗಿಂತ ಹಿಂದಿನ ಅವಧಿಯಲ್ಲಿ ಪಾವತಿಸಲಾದ ಹೆಚ್ಚಿಗೆ ಮೊತ್ತವನ್ನು ವಸೂಲು ಮಾಡುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲ ಯವು ತಿಳಿಸಿರುವುದರಿಂದ ಪ್ರತಿ ನಾಲ್ಕು ವರ್ಷ ಗಳಿಗೊಮ್ಮೆ ಸರ್ಕಾರಿ ನೌಕರರ ವೇತನ ನಿಗಧೀ ಕರಣವನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳು ಪರಾಮರ್ಶಿಸುವುದು ಎಂದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.