ಬೀದರ್ –

ಹಿಜಬ್
ಕೇಸರಿ
ನೀಲಿ
ಶಾಲುಗಳ
ಧರ್ಮಾಂಧ ಘೋಷಣೆ ಮೊಳಗುತಿದೆ ವಿದ್ಯಾಮಂದಿರಗಳಲ್ಲಿ…
ಸರ್ವ ಜನಾಂಗದ
ಶಾಂತಿಯ ತೋಟದಲ್ಲಿ
ಅಶಾಂತಿಯು ಮೂಡಿದೆ.
ಜಾತ್ಯತೀತತೆ
ಭ್ರಾತೃತ್ವ ಕುಸಿಯುತ್ತಲಿದೆ..
ಟಿವಿಗಳಲ್ಲಿ ಮತ್ತೆ
ಕೊರೊನ ಮಾಯವಾಗಿದೆ
ಧರ್ಮದ ಘೋಷಣೆಗೆ
ಹೆದರಿ ಓಡಿ ಹೋಗಿದೆ
ವಿಷ ಬೀಜಗಳ
ಬಿತ್ತುವಿಕೆ ಅವ್ಯಾಹತವಾಗಿ
ಮುಂದುವರಿದಿದೆ..
ಜಾಗೃತಿ ಮೂಡಿಸುವ
ಕಾಯಕ ನಮ್ಮ ಮುಂದಿದೆ
ಶಿಕ್ಷಕರಾದ ನಾವು
ಮಾನವೀಯತೆಯ
ಪಾಠ ಗಟ್ಟಿಯಾಗಿ ಹೇಳಿಕೊಡಬೇಕಿದೆ
ಸಹೋದರತೆಯ ಭಾವನೆ
ಕಲಿಸಬೇಕಾಗಿದೆ
ಸಮಾಜಕ್ಕೆ ಚಿಕಿತ್ಸೆ
ನೀಡಲೇಬೇಕಾಗಿದೆ
✍️ಮಾಲತೇಶ್ ಬಬ್ಬಜ್ಜಿ
9008856669