ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತಗಡೆಗಟ್ಟಲು ಬರುತ್ತಿದೆ ವಿಧೇಯಕ – ಸಾರ್ವಜನಿಕ ಪರೀಕ್ಷೆಗಳಲ್ಲಿನ ಸಾಲು ಸಾಲು ಅಕ್ರಮಗಳಿಂದ ಎಚ್ಚೇತ್ತುಕೊಂಡ ರಾಜ್ಯ ಸರ್ಕಾರದಿಂದ ಬರಲಿದೆ ಹೊಸದೊಂದ ವಿಧೇಯಕ…..

Suddi Sante Desk
ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತಗಡೆಗಟ್ಟಲು ಬರುತ್ತಿದೆ ವಿಧೇಯಕ – ಸಾರ್ವಜನಿಕ ಪರೀಕ್ಷೆಗಳಲ್ಲಿನ ಸಾಲು ಸಾಲು ಅಕ್ರಮಗಳಿಂದ ಎಚ್ಚೇತ್ತುಕೊಂಡ ರಾಜ್ಯ ಸರ್ಕಾರದಿಂದ ಬರಲಿದೆ ಹೊಸದೊಂದ ವಿಧೇಯಕ…..

ಬೆಳಗಾವಿ

ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತಗಡೆಗಟ್ಟಲು ಬರುತ್ತಿದೆ ವಿಧೇಯಕ – ಸಾರ್ವ ಜನಿಕ ಪರೀಕ್ಷೆಗಳಲ್ಲಿನ ಸಾಲು ಸಾಲು ಅಕ್ರಮ ಗಳಿಂದ ಎಚ್ಚೇತ್ತುಕೊಂಡ ರಾಜ್ಯ ಸರ್ಕಾರದಿಂದ ಬರಲಿದೆ ಹೊಸದೊಂದ ವಿಧೇಯಕ ಹೌದು

ಇತ್ತೀಚಿಗೆ ಸರ್ಕಾರಿ ಹುದ್ದೆಗಳ ಪರೀಕ್ಷೆಗಳೆಂದರೆ ಬರೇ ಅಕ್ರಮಗಳದ್ದೇ ಸುದ್ದಿ ಎಂಬಂತಾಗಿದೆ. ಏನೇಲ್ಲಾ ಕಟ್ಟು ನಿಟ್ಟಿನಲ್ಲಿ ಪೊಲೀಸ್ ಭದ್ರತೆಯ ನಡುವೆ ಪರೀಕ್ಷೆಗಳನ್ನು ಮಾಡಿದರು ಕೂಡಾ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಪ್ರತಿಭಾವಂತರಿಗೆ ಸಾಕಷ್ಟು ತೊಂದರೆ ಆತಂಕ ಎದುರಾಗಿದ್ದು ಪರೀಕ್ಷೆಗಳನ್ನು ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೂ ಕೂಡಾ ಇದೊಂದು ಕೆಟ್ಟ ಕಳಂಕ ಎಂಬಂತಾಗಿದ್ದು

ಹೀಗಾಗಿ ಇದರಿಂದ ಎಚ್ಚೇತ್ತುಕೊಂಡ ರಾಜ್ಯ ಸರ್ಕಾರ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ತಡೆಗಟ್ಟಲು ಮುಂದಾಗಿದ್ದು ಈ ಒಂದು ಕುರಿತಂತೆ ವಿಧೇಯ ಕವೊಂದನ್ನು ತರಲು ಮುಂದಾಗಿದೆ.ಸರಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ತಡೆಗಟ್ಟ ಲು ವಿಧೇಯಕ ಮಂಡನೆಯಾಗಿದೆ.ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ಗಳಲ್ಲಿ ಅನುಚಿತ ವಿಧಾನ ಬಳಕೆಯನ್ನು ನಿರ್ಬಂ ಧಿಸಲು ಮುಂದಾಗಿರುವ ರಾಜ್ಯ ಸರಕಾರವು ಮಹತ್ವದ ಕರ್ನಾಟಕ ಸಾರ್ವಜನಿಕ ಪರೀಕ್ಷೆ

(ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮ ಗಳು)ವಿಧೇಯಕ-2023 ಅನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದ ವಿಧಾನಸಭೆಯಲ್ಲಿ ಮಂಡಿಸಿದೆ ಪರೀಕ್ಷಾ ಅಕ್ರಮ ನಡೆಸುವವರಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ 10 ಕೋಟಿ ರೂ. ವರೆಗೆ ದಂಡ ಸ್ವತ್ತು ಮುಟ್ಟುಗೋಲು ಹಾಕಿಕೊ ಳ್ಳಲು ಹಾಗೂ ಅಂತಹ ಅಪರಾಧಗಳ ವಿಚಾರ. ಣೆಗಾಗಿ

ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸುವ ವಿಧೇಯಕ ಇದಾಗಿದೆ.ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವ ಅಭ್ಯರ್ಥಿಗೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸುವುದು ಮತ್ತು ಒಳಸಂಚು ನಡೆಸು  ವವರಿಗೆ 8 ರಿಂದ 12 ವರ್ಷಗಳ ಕಠಿಣ ಶಿಕ್ಷೆ ಮತ್ತು 15 ಲಕ್ಷ ರೂ.ಗಳಿಂದ 10 ಕೋಟಿ ರೂ.ಗಳವರೆಗೆ ದಂಡ ವಿಧಿಸಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.