This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಾಲಾ ಮಕ್ಕಳಿಗೆ ಬಿಸಿಯೂಟ ಆರಂಭ ಮಾಡಿದ್ದು ಮಾಜಿ CM SM ಕೃಷ್ಟ – ಯೋಜನೆಯ ಆರಂಭದ ಹಿಂದೆ ಇದೆ SMK ಕನಸು…..

ಶಾಲಾ ಮಕ್ಕಳಿಗೆ ಬಿಸಿಯೂಟ ಆರಂಭ ಮಾಡಿದ್ದು ಮಾಜಿ CM SM ಕೃಷ್ಟ – ಯೋಜನೆಯ ಆರಂಭದ ಹಿಂದೆ ಇದೆ SMK ಕನಸು…..
WhatsApp Group Join Now
Telegram Group Join Now

ಬೆಂಗಳೂರು

ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ SM ಕೃಷ್ಣರ ನಿರ್ಧಾರದ ಹಿಂದಿತ್ತು ಅದೊಂದು ಕಾರಣ ಹೌದು
ದೇಶ ಕಂಡ ಸಜ್ಜನ ರಾಜಕಾರಣಿ, ಕರ್ನಾಟಕದ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸದಾಶಿವನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ಎಸ್‌ಎಂ ಕೃಷ್ಣ ಅವರು ತಮ್ಮ ರಾಜಕೀಯ ಜೀವನದು ದ್ದಕ್ಕೂ ಸಜ್ಜನಿಕೆಯಿಂದ ನಡೆದುಕೊಂಡವರು

ಪ್ರಜಾಸಮಾಜವಾದಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಅವರು ಅಲ್ಲಿ ಶಾಸಕರಾಗಿ ನಂತರ ಕಾಂಗ್ರೆಸ್‌ಗೆ ಸೇರಿ ಮುಂದೆ ತಮ್ಮ ಜೀವನದ ಶೇಕಡಾ 90ರಷ್ಟು ಭಾಗ ಅಂದರೆ 43 ವರ್ಷಗಳ ಕಾಲ ರಾಜಕೀಯ ಸೇವೆಯನ್ನು ಕಾಂಗ್ರೆಸ್‌ನಲ್ಲಿ ನಡೆಸಿದ್ದರು. ನಂತರ ಕೊನೆಗಾಲದಲ್ಲಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ ದಲ್ಲಿ ಹಣಕಾಸು ಇಲಾಖೆ, ವಿದೇಶಾಂಗ ಇಲಾಖೆ, ಕರ್ನಾಟಕದ ಸಿಎಂ ಸೇರಿದಂತೆ ಅನೇಕ ಹುದ್ದೆಗಳನ್ನು ಅಲಂಕರಿಸಿ ಆ ಸ್ಥಾನಗಳಿಗೆ ಘನತೆ ತಂದುಕೊಟ್ಟಿದ್ದರು.

2020ರ ಜನವರಿ 4ರಂದು ಎಸ್‌ಎಂ ಕೃಷ್ಣ ಅವರ ಆತ್ಮಕತೆ ‘ಸ್ಮೃತಿ ವಾಹಿನಿ’ ಬಿಡುಗಡೆಯಾಗಿತ್ತು. ಈ ಆತ್ಮಕಥೆಯಲ್ಲಿ ಎಸ್‌ಎಂ ಕೃಷ್ಣ ಅವರ ರಾಜಕೀಯ ಜೀವನ, ವೈಯಕ್ತಿಕ ಜೀವನ ಸೇರಿದಂತೆ ತಮ್ಮ ಬದುಕಿ ನಲ್ಲಿ ಘಟಿಸಿದ ಬಹುತೇಕ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

ಕರ್ನಾಟಕ ರಾಜಕೀಯ, ದೇಶದ ರಾಜಕೀಯ ಸೇರಿ ದಂತೆ ರಾಜಕೀಯ ಆಸಕ್ತರು ನೆನಪಿಡಬೇಕಾದ ಘಟನೆಗಳನ್ನು ಸ್ಮೃತಿ ವಾಹಿನಿ ಪುಸ್ತಕದಲ್ಲಿ ಬರೆದಿದ್ದಾರೆ. ಅವುಗಳಲ್ಲಿ ಕೆಲವೊಂದು ಅಂಶಗಳನ್ನು ನೋಡೊದಾ ದರೆ .ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟ ಮೊದಲ ಬಾರಿಗೆ ಬಿಸಿಯೂಟವನ್ನು ಪರಿಚಯಿಸಿದವರು ಎಸ್‌ಎಂ ಕೃಷ್ಣ ಅವರು.

ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆ ಯನ್ನು ಪ್ರಾರಂಭಿಸಿದ್ದರು. ಈ ಯೋಜನೆಯ ಹಿಂದೆ ಹಸಿವು ನೀಗಿಸುವ ಉದ್ದೇಶ ಇದ್ದರೂ ಬಡತನದ ಹಿನ್ನೆಲೆಯ ಮಕ್ಕಳನ್ನು ಶಾಲೆಗೆ ಕರೆತರುವ ಮಹತ್ವಾ ಕಾಂಕ್ಷೆ ಇತ್ತು

ಎಂದು ಆಗಿನ ಕಾಲದಲ್ಲೂ ವಿಮರ್ಶೆ ಮಾಡಲಾಗಿತ್ತು. ಆದರೆ ಎಸ್‌ಎಂ ಕೃಷ್ಣ ಅವರು ತಮ್ಮ ಆತ್ಮಕಥೆ ಸ್ಮೃತಿ ವಾಹಿನಿಯಲ್ಲಿ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿ ದ್ದಾರೆ.’ಉತ್ತರ ಕರ್ನಾಟಕಕ್ಕೆ ಪ್ರವಾಸ ಹೋಗಿದ್ದೆ. ನನ್ನ ಜೊತೆಗೆ ಒಂದಿಬ್ಬರು ಮಿತ್ರರು ಇದ್ದರು. ಸಂಜೆ ಇಳಿ ಹೊತ್ತು ಶಾಲೆಯಿಂದ ಹೆಣ್ಣುಮಕ್ಕಳು ನಡೆದುಕೊಂಡು ಬರುತ್ತಿದ್ದರು.

ಅವರನ್ನು ನಿಲ್ಲಿಸಿ ಅವರು ಮನೆಬಿಟ್ಟ ಸಮಯ ಹಾಗೂ ಶಾಲೆಯಲ್ಲಿ ಏನಾದರೂ ತಿನ್ನಲಿಕ್ಕೆ ಕೊಟ್ಟರಾ, ನೀವು ಎಷ್ಟೊತ್ತಿಗೆ ಮನೆಗೆ ಹೋಗುತ್ತೀರಾ ಮುಂತಾದ ವಿಷಯ ಗಳನ್ನು ವಿಚಾರಿಸಿಕೊಂಡೆ. ಬೆಳಿಗ್ಗೆ ಒಂದಿಷ್ಟು ಊಟ ಮಾಡಿದ ಮಕ್ಕಳು ಸಂಜೆ 6 ಗಂಟೆಯ ತನಕ ಹಸಿದಿರ ಬೇಕಾಗುತ್ತದೆ. ಹಸಿದ ಮಕ್ಕಳಿಗೆ ವಿದ್ಯೆಯ ಜೊತೆಗೆ ಹೊಟ್ಟೆಗೂ ಸಮಜಾಯಿಶಿ ಹೇಳಬೇಕೆಂಬುದು ನನ್ನ ಕನಸಾಗಿತ್ತು.

ಈ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರ ಕೊಡಬೇಕು ಎಂದುಕೊಂಡೆ. ಹಿಂದೆ ಅಂಥ ಪ್ರಯತ್ನ ಗಳು ನಡೆದು ವಿಫಲವಾಗಿದ್ದವು. ಅಕ್ಷರ ದಾಸೋಹ ಕಾರ‍್ಯಕ್ರಮದ ಹೊರೆ ಹೊರಲು ಕಷ್ಟ ಎಂದು ಆರ್ಥಿಕ ಇಲಾಖೆ ಹೇಳಿತು. ಕೊನೆಗೆ ಶಿಕ್ಷಣ ಇಲಾಖೆಗೆ ಸಾಕಷ್ಟು ಸಂಪನ್ಮೂಲ ಒದಗಿಸಿ ಅಕ್ಷರ ದಾಸೋಹ ಕಾರ‍್ಯಕ್ರಮ ಆರಂಭಿಸಿದೆ’ ಎಂದು ಎಸ್‌ಎಂ ಕೃಷ್ಣ ಸ್ಮೃತಿ ವಾಹಿನಿ ಯಲ್ಲಿ ನೆನಪಿಸಿದ್ದಾರೆ.ಸಧ್ಯ ಈಗಲೂ ಕೂಡಾ ರಾಜ್ಯದ ಶಾಲೆೆೆಗಳಲ್ಲಿ ಯೋಜನೆ ಯಶಸ್ವಿಯಾಗಿ ಹತ್ತಾರು ಸಮಸ್ಯೆ ಗಳ ನಡೆದುಕೊಂಡು ಹೋಗುತ್ತಿದ್ದು ಶಾಲೆಯ ಶಿಕ್ಷಕರಿಗೆ ಇದೊಂದು ದೊಡ್ಡ ತಲೆನೋವಿನ ವಿಷಯ ವಾಗಿದೆ‌.ಶೈಕ್ಷಣಿಕ ಚಟುವಟಿಕೆ ಗಳ ಬದಲಿಗೆ ಇದೆ ದೊಡ್ಡ ಕೆಲಸವಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk