ಬೆಂಗಳೂರು –
ಕರೋನ ಮಹಾಮಾರಿ ಆತಂಕದ ನಡುವೆ ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳು ಆರಂಭವಾಗುತ್ತಿದ್ದು ಇನ್ನೂ ಸೋಮವಾರ ಮತ್ತೊಂದು ಹಂತದಲ್ಲಿ 1 ರಿಂದ 5 ನೇಯ ತರಗತಿ ವರೆಗೆ ಶಾಲೆಗಳು ಆರಂಭವಾಗಲಿದ್ದು ಮಕ್ಕಳಿಗೆ ಬಿಸಿಯೂಟ ನೀಡಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿ ಶಾಲೆಗಳು ಪುನರಾರಂಭಗೊಳ್ಳುತ್ತಿವೆ.ಅರ್ಧ ಪ್ರಮಾಣದಲ್ಲಿ ಶಾಲೆಗಳು ಆರಂಭಗೊಳ್ಳುತ್ತಿರೋದ್ರಿಂದ ಬಿಸಿಯೂಟ ನೀಡೋದು ಬೇಡವೆಂದು ತೀರ್ಮಾನಿಸಲಾಗಿತ್ತು.ಆದ್ರೇ ಮಕ್ಕಳು ಶಾಲೆಗೆ ಆಗಮಿಸುತ್ತಿರೋ ಕಾರಣ ಸೋಮವಾರದಿಂದಲೇ ಎಲ್ಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ ಯಡಿ ಊಟ ನೀಡಲಾಗುತ್ತದೆ ಎಂದರು.
ಇನ್ನೂ ಶಿಕ್ಷಕರ ಕೊರತೆ ಕುರಿತು ಮಾತನಾಡಿ 6 ರಿಂದ 8ನೇ ತರಗತಿ ಮಕ್ಕಳ ಬೋಧನೆಗಾಗಿ ಶಿಕ್ಷಕರ ಕೊರತೆ ಇರೋದು ನಿಜ.ಈ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ನೀಡುವ ಮೂಲಕ ಯಾವುದೇ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.