ಬೆಂಗಳೂರು –
ಧಾರವಾಡದ ನೂತನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ವಿಚಾರ ಕುರಿತು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರಿಗೆ ರೈತರು ವ್ಯಾಪಾರಸ್ಥರು ಹಲವು ಬಾರಿ ಗಮನಕ್ಕೆ ತಗೆದುಕೊಂಡು ಬಂದಿದ್ದರು

ಈ ಒಂದು ವಿಚಾರ ಕುರಿತು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಶಾಸಕರು ಬರೆದ ಪ್ರಶ್ನೆಗೆ ಸರ್ಕಾರದಿಂದಲೇ ತಪ್ಪು ಉತ್ತರ ಬಂದಿತ್ತು. ತಪ್ಪು ಉತ್ತರ ಬರುತ್ತಿದ್ದಂತೆ ಇಂದು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಈ ಒಂದು ಕುರಿತು ಅಧಿವೇಶನದಲ್ಲಿ ಪ್ರಶ್ನೆ ಕೇಳಿದರು.

ಧಾರವಾಡದ ನೂತನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೂಲಭೂತ ಸೌಲಭ್ಯಗಳ ವಿಚಾರ ಕುರಿತು ರಾಜ್ಯ ಬಿಜೆಪಿ ಸರ್ಕಾರ ಬಿಜೆಪಿ ಯ ಶಾಸಕರಿಗೆ ತಪ್ಪು ಮಾಹಿತಿ ನೀಡಿದ್ದನ್ನು ಸ್ವತಃ ಶಾಸಕರೇ ಅಧಿವೇಶ ನದಲ್ಲಿ ಗಮನಕ್ಕೆ ತಗೆದುಕೊಂಡು ಬಂದರು

ಇಂದು ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಈ ಕುರಿತು ಶಾಸಕ ಅಮೃತ ದೇಸಾಯಿ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದು ತಪ್ಪು ಮಾಹಿತಿ ನೀಡಿದ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳನ್ನು ಸಚಿವರ ಗಮನಕ್ಕೆ ತಗೆದುಕೊಂಡು ಬಂದರು.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಎಲ್ಲವನ್ನೂ ಒದಗಿಸಲಾಗಿದೆ ಎಂದು ತಪ್ಪು ತಪ್ಪು ಮಾಹಿತಿ ನೀಡಿರುವ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸದನದಲ್ಲಿ ಸಿಡಿದೆದ್ದ ಶಾಸಕ ಅಮೃತ ದೇಸಾಯಿ ಸದನದಲ್ಲಿ ತಪ್ಪಾಗಿ ಮಾಹಿತಿ ನೀಡಿದವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯವನ್ನು ಮಾಡಿದರು

ಇವೆಲ್ಲದರ ನಡುವೆ ಒರ್ವ ಶಾಸಕರಿಗೆ ಹೀಗೆ ತಪ್ಪು ಮಾಹಿತಿ ನೀಡಿದರೆ ಇನ್ನೂ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂದು ಶಾಸಕ ಅಮೃತ ದೇಸಾಯಿ ಸದನದಲ್ಲಿ ಪ್ರಶ್ನಿಸಿದರು.