ರಾಮನಗರ –
ಶಿಕ್ಷಕರ ಸಮಸ್ಯೆ ವಿಚಾರದಲ್ಲಿ ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಬಿಜೆಪಿ ಯ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ಹೇಳಿದ್ದಾರೆ.ರಾಮನಗರ ದಲ್ಲಿ ಮಾತನಾಡಿದ ಅವ ರು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ವಿಚಾ ರದಲ್ಲಿ ಸರ್ಕಾರ ಕುರುಡನಂತೆ ವರ್ತಿಸುತ್ತಿದೆ.ಈ ಧೋರಣೆ ಬದಲಿಸಿಕೊಳ್ಳದೇ ಹೋದಲ್ಲಿ ರಾಜೀ ನಾಮೆಗೂ ಸಿದ್ಧನಿದ್ದೇನೆ ಎಂದರು.ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಿಕ್ಷಕರಿಗೆ ಈ ಬಾರಿಯ ಆರ್ಥಿಕ ಪ್ಯಾಕೇಜ್‌ನಲ್ಲಿ ಯಾವುದೇ ಪರಿ ಹಾರ ನೀಡದ ಕುರಿತು ಅಸಮಾಧಾನಗೊಂಡಿರುವ ಇವರು ಪದೇ ಪದೇ ಮನವಿ ಮಾಡಿಕೊಂಡಾಗ್ಯೂ ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರ ನೋವಿಗೆ ಸ್ಪಂದಿಸಿಲ್ಲ.ಹೀಗಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾ ದವರು ರಾಜೀನಾಮೆ ನೀಡಬೇಕು ಎಂದು ಸಾಮಾ ಜಿಕ ಜಾಲತಾಣಗಳಲ್ಲಿ ಒತ್ತಡ ಹೆಚ್ಚಾಗುತ್ತಿದೆ. ನಾನೂ ಈ ಬಗ್ಗೆ ಚಿಂತನೆ ನಡೆಸಿದ್ದೇನೆ ಎನ್ನುತ್ತಾ ಅಸ ಮಾಧಾನವನ್ನು ಹೊರಹಾಕಿದರು.

ಇನ್ನೂ ಈ ಒಂದು ಸರ್ಕಾರದ ಬಗ್ಗೆ ಭಾರಿ ನಿರೀಕ್ಷೆ ಇತ್ತು.ಆದರೆ, ನಮ್ಮ ಬೇಡಿಕೆಗಳ ಬಗ್ಗೆ ಸ್ಪಂದಿಸುತ್ತಿಲ್ಲ ಖಾಸಗಿ ಶಾಲೆಗಳಿಗೆ ಇನ್ನೂ ಆರ್‌ಟಿಇ ಶುಲ್ಕ ಬಿಡುಗ ಡೆ ಮಾಡಿಲ್ಲ.ಮತ್ತೊಂದೆಡೆ ಶಿಕ್ಷಣ ಸಚಿವರು ಅರ್ಧ ವರ್ಷ ಮುಂಚೆಯೇ ಎಲ್ಲ ವಿದ್ಯಾರ್ಥಿಗಳೂ ಪಾಸ್ ಎಂದು ಘೋಷಿಸುತ್ತಾರೆ. ಹೀಗಿರುವಾಗ ಯಾವ ಪೋಷಕರು ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟುತ್ತಾರೆ ಎಂದು ಪ್ರಶ್ನಿಸಿದರು.

ಇನ್ನೂ ಪ್ರಮುಖವಾಗಿ ಸರ್ಕಾರ ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳವರನ್ನು ಮಾತ್ರ ಶಿಕ್ಷಕ ರು ಎಂದು ಭಾವಿಸಿದೆ. ಖಾಸಗಿ ಶಾಲೆಗಳ ನೂರಾರು ಶಿಕ್ಷಕರು ಕೋವಿಡ್‌ನಿಂದ ಸತ್ತಿದ್ದಾರೆ. ಆ ಸಾವು ಅವ ರಿಗೆ ಲೆಕ್ಕಕ್ಕಿಲ್ಲ. ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಸಂಬಳ ಪಾವತಿಸುವ ಸ್ಥಿತಿಯಲ್ಲಿ ಇಲ್ಲ ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸರ್ಕಾರ ಸಮಸ್ಯೆ ಬಗೆಹರಿಸಬೇಕು.ವಿಮಾ ಯೋಜನೆಯನ್ನು ಖಾಸಗಿ ಶಿಕ್ಷಕರಿಗೂ ವಿಸ್ತರಿಸಬೇಕು. ಬಡತನ ರೇಖೆ ಗಿಂತ ಕೆಳಗಿರುವ ಖಾಸಗಿ ಶಿಕ್ಷಕರು ಮತ್ತು ಸಿಬ್ಬಂದಿಗೆ ಆಹಾರದ ಕಿಟ್‌ಗಳನ್ನು ವಿತರಿಸಬೇಕೆಂದು ಒತ್ತಾಯ ಮಾಡಿದರು

ಇನ್ನೂ ಇತ್ತ ಶಿಕ್ಷಣ ಇಲಾಖೆ ಗೊಂದಲದ ಗೂಡಾ ಗಿದೆ.ಕಡ್ಡಾಯ ವರ್ಗಾವಣೆ ರದ್ದು ಮಾಡಿ ಶಿಕ್ಷಕ ಸ್ನೇಹಿ ವರ್ಗಾವಣೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿಕೊಂಡೇ ಸರ್ಕಾರ ಎರಡು ವರ್ಷ ಕಳೆದಿದೆ ಎನ್ನುತ್ತಾ ತಮ್ಮಲ್ಲಿನ ಅಸಮಾಧಾನವನ್ನು ಹೇಳಿ ಕೊಂಡು ರಾಜೀನಾಮೆಯ ಮಾತು ಹೇಳಿದರು