ಹೊಸದೆಹಲಿ –
ಹೊಸದಿಲ್ಲಿ: ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಕಳೆದ ರಾತ್ರಿ ದಿಲ್ಲಿ-ಎನ್ ಸಿ ಆರ್ ನ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್-19 ಪಾಸಿಟಿವ್ ಆಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಂದಕುಮಾರ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿ ದ್ದರು. ಚೌಹಾಣ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.
ಖಾಂಡ್ವಾ ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನದಿಂದ ದುಃಖಿತನಾಗಿರುವೆ. ಸಂಸದೀಯ ಪ್ರಕ್ರಿಯೆಗಳು, ಸಂಘಟನಾ ಕೌಶಲ್ಯ ಗಳು, ಮಧ್ಯಪ್ರದೇಶದಾದ್ಯಂತ ಬಿಜೆಪಿ ಯನ್ನು ಬಲಗೊಳಿಸಲು ಅವರು ಪಟ್ಟಿರುವ ಪ್ರಯತ್ನದ ಮೂಲಕ ಸದಾ ಕಾಲ ನೆನಪಿನಲ್ಲಿ ಉಳಿಯುತ್ತಾರೆ.