ಬೆಂಗಳೂರು
ರಾಜ್ಯದಲ್ಲಿ ನಡೆದ ಒಂದು ಲೋಕಸಭಾ, ಎರಡು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬೆಳಗಾವಿ, ಬಸವಕಲ್ಯಾಣದಲ್ಲಿ ಬಿಜೆಪಿ ಗೆದ್ದರೇ ಕಾಂಗ್ರೆಸ್ ಮಸ್ಕಿಯಲ್ಲಿ ಜಯ ಸಾಧಿಸಿದೆ. ಇದರ ಮಧ್ಯೆ ಬಸವಕಲ್ಯಾಣದ ಗೆಲುವಿನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಚರ್ಚೆಗಿಂತ ಗೆಲುವಿನ ರೂವಾರಿಯ ಕುರಿತು ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣ ವಸತಿ ಸಚಿವ ವಿ.ಸೋಮಣ್ಣ.
ಹೌದು..! ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಬಸವಕಲ್ಯಾಣ ಉಪಚುನಾವಣೆಯ ಉಸ್ತುವಾರಿ ಯನ್ನ ನೀಡಲಾಗಿತ್ತು. ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ಕೂಡ ಅಖಾಡಕ್ಕೆ ಇಳಿದಿದ್ದು, ಸಾಮಾನ್ಯ ವಾಗಿಯೇ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿತ್ತು. ಅಂತಿಮವಾಗಿ ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಚುನಾವಣೆಯಲ್ಲಿ ವಿ.ಸೋಮಣ್ಣ ಅವರ ತಂತ್ರಗಾ ರಿಕೆಗೆ ಫಲ ಸಿಕ್ಕಿದೆ. ರಾಜಕೀಯ ಎದುರಾಳಿಗಳ ಜೊತೆಗೆ ಪಕ್ಷದಲ್ಲಿದ್ದ ತೊಡಕುಗಳನ್ನ ಸರಿಮಾಡಿ ಕೊಂಡು ಬಸವಕಲ್ಯಾಣದಲ್ಲಿ ವಿ ಸೋಮಣ್ಣ ಕೇಸರಿ ಪತಾಕೆ ಹಾರಿಸಿದ್ದಾರೆ. ಇದು ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.ಯಾಕೆಂದ್ರೆ ರಾಜ್ಯ ಬಿಜೆಪಿಯ ಶಿಸ್ತಿನ ಸಿಪಾಯಿ ವಿ.ಸೋಮಣ್ಣ ಈ ರೀತಿ ಚುನಾವಣಾ ಉಸ್ತುವಾರಿ ವಹಿಸಿಕೊಂಡು ಪಕ್ಷಕ್ಕೆ ಗೆಲುವು ತಂದುಕೊಟ್ಟಿರುವುದು ಮೊದಲೇನಲ್ಲ.
ತುಮಕೂರು ಲೋಕಸಭಾ ಎಲೆಕ್ಷನ್ 2019- ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಜಿ.ಎಸ್. ಬಸವರಾಜ್ ಗೆಲುವು ಸಾಧಿಸಿದ್ದರು. ಆಗ ಚುನಾವ ಣೆಯ ಉಸ್ತುವಾರಿ ವಹಿಸಿಕೊಂಡಿದ್ದು ವಿ. ಸೋಮ ಣ್ಣ ಅವರು
- ಚಿಂಚೋಳಿ ಬೈ ಎಲೆಕ್ಷನ್ – 2019 – ಅವಿನಾಶ್ ಜಾಧವ್ ಗೆದ್ದಾಗಲೂ ಉಸ್ತುವಾರಿ ವಹಿಸಿಕೊಂಡಿದ್ದು ಸಚಿವ ವಿ. ಸೋಮಣ್ಣನವರು.
- ದೇವದುರ್ಗ ಬೈ ಎಲೆಕ್ಷನ್ – 2016 – ಶಿವಣ್ಣ ಗೌಡ ನಾಯಕ ಜಯ ಗಳಿಸಿದ್ದರು. ಆಗಲೂ ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.
- ಚನ್ನಪಟ್ಟಣ ಬೈ ಎಲೆಕ್ಷನ್ – 2011- ಸಿ.ಪಿ. ಯೋಗಿಶ್ವರ್ ಗೆಲುವು ಸಾಧಿಸಿದ್ದರು. ಆಗಲೂ ವಿ. ಸೋಮಣ್ಣನವರು ಉಪ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
- ಕಡೂರು ಬೈ ಎಲೆಕ್ಷನ್ – 2010 – ಡಾ. ವೈ.ಸಿ. ವಿಶ್ವನಾಥ್ ಗೆಲುವು ಸಾಧಿಸಿದ್ದರು. ಉಪ ಚುನಾವಣೆಯ ಪೂರ್ತಿ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.
- ಕೊಪ್ಪಳ ಬೈ ಎಲೆಕ್ಷನ್ – 2011 – ಕೆ.ಎಸ್. ಅಮರಪ್ಪ ಅವರಿಗೆ ಜಯ. ಉಸ್ತುವಾರಿ ವಹಿಸಿಕೊಂಡಿದ್ದು ಚಾಣಕ್ಷ ನಾಯಕ ವಿ. ಸೋಮಣ್ಣನವರು.
- ಬೆಂಗಳೂರು ದಕ್ಷಿಣ ಲೋಕಸಭಾ – 2009, 2014, 2018- 2009, 2014ರಲ್ಲಿ ಅನಂತ್ ಕುಮಾರ್ ಮತ್ತು 2018ರಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.
-ತುಮಕೂರು ಲೋಕಸಭಾ ಎಲೆಕ್ಷನ್ – 2009ರಲ್ಲೂ ವಿ. ಸೋಮಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು. - 2015ರ ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ 11 ಸ್ಥಾನಗಳನ್ನು ಗೆಲ್ಲುವಲ್ಲಿ ವಿ. ಸೋಮಣ್ಣನವರ ಪಾತ್ರ ಮಹತ್ವದ್ದಾಗಿತ್ತು.
2010 ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 16 ಸ್ಥಾನಗಳನ್ನು ಗೆದ್ದಿದ್ದು ಕೂಡ ವಿ. ಸೋಮಣ್ಣನನವರ ವರ್ಚಸ್ಸಿನಿಂದಲೇ.
2019 ಬಿಬಿಎಂಪಿ ಕಾವೇರಿಪುರ ಬೈ ಎಲೆಕ್ಷನ್ ನಲ್ಲಿ ಪಲ್ಲವಿ ಚಿನ್ನಪ್ಪ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.
ಒಟ್ಟಿನಲ್ಲಿ ಸ್ಥಳೀಯ ನಾಯಕರು, ಮತ್ತು ಕಾರ್ಯಕರ್ತರ ವಿಶ್ವಾಸ ಗಳಿಸಿಕೊಂಡು ಪಕ್ಷವನ್ನು ಬೇರುಮಟ್ಟದಲ್ಲಿ ಗಟ್ಟಿಗೊಳಿಸಿ ಯಶ ಸಾಧಿಸುವ ಜಾಣ್ಮೆ ವಿ. ಸೋಮಣ್ಣನವರಲ್ಲಿದೆ. ಹೀಗಾಗಿ ಯಾವುದೇ ಚುನಾವಣೆ ಇರಲಿ, ಎಷ್ಟೇ ಸವಾಲೇ ಇರಲಿ, ಅದನ್ನು ದಿಟ್ಟವಾಗಿ ಎದುರಿಸಿಕೊಂಡು ಯಶ ಸಾಧಿಸುವುದರಲ್ಲಿ ವಿ. ಸೋಮಣ್ಣನವರು ನಿಸ್ಸೀಮರು. ಇದು ಪ್ರತಿ ಬಾರಿಯೂ ಸಾಬೀತಾಗುತ್ತಿದೆ. ಸದ್ದಿಲ್ಲದೆ ತನ್ನ ಕಾರ್ಯ ಸೈಲೆಂಟ್ ಕಿಲ್ಲರ್ ನಂತೆ ಪೂರ್ಣಗೊಳಿಸುವ ಜಾಣ್ಮೆ, ಚಾಣಕ್ಷತನ ಮತ್ತು ಮಾಸ್ಟರ್ ಮೈಂಡ್ ಸೋಮಣ್ಣನವರದ್ದಾಗಿದೆ.