ಬೆಂಗಳೂರು –
ಬೆಂಗಳೂರಿನಲ್ಲಿ ಸ್ಪೋಟ ಗಂಭೀರವಾಗಿ ಗಾಯಗೊಂಡಿರುವ ಒಂಬತ್ತು ಜನರು ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಗೊಂಡ ನಿಗೂಢ ವಸ್ತು ಸ್ತಳದಲ್ಲೇ NIA ಟೀಮ್ ನೊಂದಿಗೆ ಪೊಲೀಸರು ಹೌದು
ಶಾಂತವಾಗಿದ್ದ ಬೆಂಗಳೂರಿನಲ್ಲಿ ನಿಗೂಢ ವಸ್ತುವೊಂದು ಸ್ಪೋಟಗೊಂಡಿದ್ದು ಒಂಬತ್ತು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.ಹೌದು ನಗರದ ಹೆಸರಾಂತ ರಾಮೇಶ್ವರಂ ಕೆಫೆಯಲ್ಲಿ ಈ ಒಂದು ಸ್ಪೋಟಗೊಂಡಿದ್ದು ಇನ್ನೂ ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ. ಮೂವರು ಕೆಫೆಯ ಸಿಬ್ಬಂದಿಗಳಾಗಿದ್ದರೆ ಇನ್ನೂಳಿ ದಂತೆ ಸಾರ್ವಜನಿಕರು ಗಾಯಗೊಂಡಿದ್ದು ನಗರದ ಬೇರೆ ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನೂ ವ್ಯಕ್ತಿಯೊಬ್ಬರು ವಸ್ತುವನ್ನು ತಗೆದು ಕೊಂಡು ಬಂದು ಕೆಫೆಯಲ್ಲಿನ ಸಿಂಕ್ ಬಳಿ ಇಟ್ಟು ತೆರಳಿದ್ದಾರಂತೆ ನಂತರ ಇದು ಸ್ಪೋಟಗೊಂಡಿದ್ದು ಎರಡು ಬಾರಿ ಅಂತರದಲ್ಲಿ ಸ್ಪೋಟಗೊಂಡಿದೆ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿ ದ್ದಾರೆ.ಇದೊಂದು ನಿಗೂಢವಾದ ವಸ್ತುವಾಗಿದ್ದು ಸ್ಥಳಕ್ಕೆ ಪೊಲೀಸರೊಂದಿಗೆ ಎನ್ ಐಎ ಟೀಮ್ ಭೇಟಿ ನೀಡಿ ಪರಿಶೀಲನೆ ಮಾಡ್ತಾ ಇದ್ದಾರೆ.
ಇದರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿ ಗಳು ಕೂಡಾ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಇತ್ತ ಗಾಯಾಳುಗಳನ್ನು ನಗರದ ಬೇರೆ ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಒಟ್ಟಾರೆ ಶಾಂತವಾಗಿದ್ದ ಬೆಂಗಳೂರಿನ ಹೆಸರಾಂತ ರಾಮೇಶ್ವರಂ ಕೆಫೆಯಲ್ಲಿನ ನಿಗೂಢ ವಾದ ಸ್ಪೋಟ ಪ್ರಕರಣ ದೊಡ್ಡದಾದ ಚರ್ಚೆಗೆ ವೇದಿಕೆಯಾಗಿದ್ದು ಸ್ಪೋಟಗೊಂಡಿದ್ದು ಏನು ಕಾರಣ ಏನು ಈ ಎಲ್ಲಾ ವಿಚಾರ ಕುರತಂತೆ ತನಿಖೆ ನಡಿತಾ ಇದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..