BRC ಅಮಾನತು – ಕರ್ತವ್ಯ ಲೋಪ ಹಿನ್ನಲೆ ಅಮಾನತು ಆದೇಶ…..

Suddi Sante Desk
BRC ಅಮಾನತು – ಕರ್ತವ್ಯ ಲೋಪ ಹಿನ್ನಲೆ ಅಮಾನತು ಆದೇಶ…..

ಬೆಂಗಳೂರು  –

ರಾಜ್ಯದಲ್ಲಿ ಜಾತಿಗಣತಿಗೆ ಹಾಜರಾಗದ ಶಿಕ್ಷಕನಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಅಮಾನತು ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವು ಪ್ರಗತಿಯಲ್ಲಿರುತ್ತದೆ. ಹೊಸನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಸದರಿ ಹುದ್ದೆಯಲ್ಲಿ ಶ್ರೀಮತಿ ಚೇತನ, ಮುಖ್ಯ ಶಿಕ್ಷಕರು ಪ್ರಭಾರದಲ್ಲಿ ಕಾರ್ಯನಿರ್ವ ಹಿಸುತ್ತಿರುತ್ತಾರೆ. ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿ ಕಾರಿಗಳು, ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನೋಡಲ್ ಅಧಿಕಾರಿಯನ್ನಾಗಿ ಉಲ್ಲೇಖ (2)ರಂತೆ ನೇಮಿಸಲಾಗಿರುತ್ತದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಗಳಿಗೆ ಮೇಲ್ವಿಚಾರಕರ ಹಾಗೂ ಗಣತಿದಾರರ ನೇಮಕ ಮಾಡುವ ಕಾರ್ಯ ವನ್ನು ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಇವರಿಗೆ ನಿರ್ವಹಿಸಲು ಸೂಚಿಸಿದ್ದರೂ ಸಹ ಮೇಲಾಧಿ ಕಾರಿಗಳ ಅಧಿಕೃತ ಪೂರ್ವಾನುಮತಿಯನ್ನು ಪಡೆಯದೇ ರಜೆ ಅರ್ಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾ ಲಯದ ಟಪಾಲು ವಿಭಾಗಕ್ಕೆ ನೀಡಿ ತೆರಳಿದ್ದು, ದೂರ ವಾಣಿ ಕರೆಗೂ ಸ್ಪಂದಿಸದೇ ಉದ್ದಟತನದಿಂದ ವರ್ತಿಸಿ ರುವುದರಿಂದ ಸದರಿಯವರಿಗೆ ತಹಶೀಲ್ದಾರ್, ಹೊಸನಗರ ತಾಲ್ಲೂಕು ಇವರು ಉಲ್ಲೇಖ(3)ರಂತೆ ಕಾರಣ ಕೇಳಿ ತಿಳುವಳಿಕೆಯನ್ನು ಜಾರಿಗೊಳಿಸಿರುತ್ತಾರೆ.

ಸದರಿ ಸಮೀಕ್ಷೆಗೆ ಗಣತಿದಾರರಾಗಿ ಶಿಕ್ಷಕರುಗಳನ್ನು ನೇಮಕ ಮಾಡಲು ಬಾಕಿ ಇದ್ದು ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಇವರು ಅನಧಿಕೃತವಾಗಿ ಗೈರು ಹಾಜರಾಗಿರುವುದರಿಂದ ದಲ್ಲಿ ಶಿಕ್ಷಕರುಗಳನ್ನು ಗಣತಿದಾರರಾಗಿ ನೇಮಕ ಮಾಡಲು ಸಾಧ್ಯವಾಗಿರು ವುದಿಲ್ಲ.

ಮೇಲ್ವಿಚಾರಕರ ಹಾಗೂ ಗಣತಿದಾರರ ನೇಮಕ ಮಾಡುವಲ್ಲಿ ಹಲವು ಗೊಂದಲಗಳಾಗಿದ್ದು, ಸದರಿ ನೌಕರರು ಮೇಲಾಧಿಕಾರಿಗಳ ದೂರವಾಣಿ ಕರೆಗೂ ಸ್ಪಂದಿಸದೇ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಹೊಸನಗರ ತಾಲ್ಲೂಕಿನ ಪ್ರಗತಿ ಕುಂಠಿತವಾಗಲು ನೇರವಾಗಿ ಕಾರಣರಾಗಿರುತ್ತಾರೆ

ಮತ್ತು ಕಾರಣಕೇಳಿ ತಿಳುವಳಿಕೆಗೆ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಿದ್ದರೂ ಸಹ ಸದರಿಯವರು ಯಾವುದೇ ಉತ್ತರವನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಸದರಿ ನೌಕರರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್, ಹೊಸನಗರ ತಾಲ್ಲೂಕು ಇವರು ಉಲ್ಲೇಖ (4)ರಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದು ಮತ್ತು ಸರ್ಕಾರಿ ಸೇವೆಯಲ್ಲಿ ಉದ್ದಟತನದಿಂದ ವರ್ತಿಸಿ ಸರ್ಕಾರಿ ಸೇವೆಯಲ್ಲಿ ನಿರ್ಲಕ್ಷ್ಯತನ ತೋರಿರುವುದು. ಅಲ್ಲದೇ ಮೇಲಾಧಿಕಾರಿಯವರ ಆದೇಶವನ್ನು ನಿರ್ವಹಿಸದೇ ಬೇಜವಬ್ದಾರಿತನ ತೋರಿಸಿರುವ ಆರೋಪದ ಹಿನ್ನೆಲೆ ಯಲ್ಲಿ ಅಮಾನತು ಮಾಡಲಾಗಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.