ಹುಬ್ಬಳ್ಳಿ –
ಇಲ್ಲದ ಸಿಗ್ನಲ್ ನಲ್ಲಿ ಸಿಗ್ನಲ್ ಜಂಪ್ ನೊಟೀಸ್ ನೀಡಿದ BRTS ಅಧಿಕಾರಿಗಳು – BRTS ಅಧಿಕಾರಿಗಳ ಎಡವಟ್ಟು…..ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ಎಡವಟ್ಟು ಮಾಡಿದ ಅಧಿಕಾರಿಗಳು
ಹುಬ್ಭಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿ ರುವ ಚಿಗರಿ ಬಸ್ ಪರಸ್ಥಿತಿ ದಿನದಿಂದ ಹದಗೆಡುತ್ತಿರು ವುದು ಒಂದೆಡೆಯಾದರೆ ಇನ್ನೂ ಸರಿಯಾದ ನಿರ್ವಹಣೆ ಇಲ್ಲ ಸರಿಯಾಗಿ ಇರದಿದ್ದರೂ ಕೂಡಾ ಚಾಲಕರು ಏನೇಲ್ಲಾ ಕಷ್ಟಪಟ್ಟು ಡೂಟಿ ಮಾಡ್ತಾ ಇದ್ದಾರೆ.ಇದೇಲ್ಲಾ ಒಂದೆಡೆಯಾದರೆ ಇನ್ನೂ ಇದರ ನಡುವೆ ಚಾಲಕರಿಗೆ ಅಧಿಕಾರಿಗಳಿಂದ ಕಿರುಕುಳ ಆಗುತ್ತಿದ್ದು ಎನ್ನೊದಕ್ಕೆ ಇಲಾಖೆಯಲ್ಲಿ ಅಧಿಕಾರಿಗಳು ಮಾಡುತ್ತಿರುವ ಎಡವಟ್ಟುಗಳೇ ಸಾಕ್ಷಿ
ಹೌದು ಯಾವ ಬಸ್ ಗಳು ಎಲ್ಲಿ ನಿಂತುಕೊಳ್ಳುತ್ತವೆ ನಿಂತುಕೊಳ್ಳೊದಿಲ್ಲ ಎಂಬ ಮಾಹಿತಿ ಇಲ್ಲದ ಅಧಿಕಾರಿ ಗಳು ಪ್ರಯಾಣಿಕರಿಂದ ದೂರು ಬಂದಿದೆ ಎಂದು ಕೊಂಡು ಚಾಲಕರಿಗೆ ವಿನಾಕಾರಣ ನೊಟೀಸ್ ನೀಡುತ್ತಿ ದ್ದಾರೆ.ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಇದರ ಮುಜುಗರನ್ನು ತಪ್ಪಿಸಿಕೊಳ್ಳಲು ಸಧ್ಯ ಮತ್ತೊಂದು ಎಡವಟ್ಟನ್ನು ಅಧಿಕಾರಿಗಳು ಮಾಡಿದ್ದಾರೆ. ಎಸ್ ನಿಲುಗಡೆ ಇಲ್ಲದ ನಿಲ್ದಾಣಕ್ಕೆ 100 ಬಸ್ ನಿಂತುಕೊಳ್ಳ ಲಿಲ್ಲ ಎಂದುಕೊಂಡು ಈಗಾಗಲೇ ಅಧಿಕಾರಿಗಳು ಚಾಲಕರಿಗೆ ನೊಟೀಸ್ ನೀಡಿದ್ದಾರೆ.
ನೊಟೀಸ್ ಬರುತ್ತಿದ್ದಂತೆ ಚಾಲಕರು ಸಿಡಿದೆದ್ದಿದ್ದು ಈ ಒಂದು ಎಡವಟ್ಟಿನಿಂದ ಮತ್ತೆ ಈ ಒಂದು ತಪ್ಪನ್ನು ಮುಚ್ಚಿಕೊಳ್ಳಲು ಸಧ್ಯ ಅಧಿಕಾರಿಗಳು ಇದೇ ನೊಟೀಸ್ ನ್ನು ಕೈಯಿಂದ ತಿದ್ದಿ ಮಾರ್ಪಾಡು ಮಾಡಿ ಸಿಗ್ನಲ್ ಸ್ಕಿಪ್ ಎಂದು ಬರೆದು ನೊಟೀಸ್ ನೀಡಿದ್ದಾರೆ.ಕೆಎ 25 ಎಫ್ 3535 ಸಂಖ್ಯೆಯ ಚಿಗರಿ ಬಸ್ 11-10-2024 ರಂದು ಕೆಎಮ್ಎಫ್ 1 ನಿಲ್ದಾಣದಲ್ಲಿನ ಸಿಗ್ನಲ್ ನಲ್ಲಿ ಬಸ್ ನಿಂತುಕೊಳ್ಳಲಿಲ್ಲ ಎಂದುಕೊಂಡು ನೊಟೀಸ್ ನೀಡಿ ದ್ದಾರೆ.ಈ ಹಿಂದೆ ನೀಡಿದ ಪತ್ರದಲ್ಲಿಯೇ ನಿಂತುಕೊಂ ಡಿಲ್ಲ ಎಂಬ ಶಬ್ದದ ಮೇಲೆ ಗೀಟು ಹಾಕಿ ಕೈಯಿಂದ ಸಿಗ್ನಲ್ ಜಂಪ್ ಎಂದು ಬರೆದು ಅದೇ ಚಾಲಕರಿಗೆ ನೀಡಿದ್ದಾರೆ.
ಅಲ್ಲಿ ಸಿಗ್ನಲ್ ಇದೇ ಇಲ್ಲ ಎಂಬೊದನ್ನು ಹಿಂದೆ ಮುಂದೆ ನೋಡದ ಅಧಿಕಾರಿಗಳು ಸಧ್ಯ ಇಲ್ಲದ ಸಿಗ್ನಲ್ ನಲ್ಲಿ ಬಸ್ ನಿಂತುಕೊಂಡಿಲ್ಲ ಸಿಗ್ನಲ್ ಜಂಪ್ ಮಾಡಿದೆ ಎಂದುಕೊಂಡು ನೊಟೀಸ್ ನೀಡಿ ಎಡವಟ್ಟು ಮಾಡಿ ದ್ದಾರೆ.ಯಾವ ನಿಲ್ದಾಣದಲ್ಲಿ ಯಾವ ಬಸ್ ನಿಂತು ಕೊಳ್ಳುತ್ತದೆ ನಿಂತುಕೊಳ್ಳೊದಿಲ್ಲ ಎಲ್ಲಿ ಸಿಗ್ನಲ್ ಇದೆ ಇಲ್ಲ ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದ ಅಧಿಕಾರಿಗಳು ಚಾಲಕರ ಮೇಲೆ ಹೇಗೆ ದರ್ಪ ತೋರುತ್ತಿದ್ದಾರೆ ಕಿರುಕುಳ ನೀಡುತ್ತಿದ್ದಾರೆ ಎಂಬೊದಕ್ಕೆ ಈ ಒಂದು ಚಿತ್ರಣವೇ ಸಾಕ್ಷಿಯಾಗಿದ್ದು
ಡಿಸಿಯವರೇ ಇದ್ಯಾವುದು ನಿಮ್ಮ ಗಮನಕ್ಕೆ ಬರೊದಿಲ್ವಾ ಏನು ಚಾಲಕರು ಮಾಡದೇ ಇರುವ ತಪ್ಪುಗಳನ್ನು ಹುಡುಕುತ್ತಿರುವ ನಿಮಗೆ ನಿಮ್ಮ ಕೈಕೆಳಗಿನ ಅಧಿಕಾರಿಗಳು ಹೇಗೆ ಎಡವಟ್ಟು ಮಾಡ್ತಾ ಇದ್ದಾರೆ ಎಂಬೊದನ್ನು ಒಮ್ಮೆ ನೋಡಿ ವಿನಾಕಾರಣ ಪದೇ ಪದೇ ಚಾಲಕರ ಮೇಲೆ ಒತ್ತಡ ಹಾಕುತ್ತಿರುವ ನಿಮ್ಮ ಕಾರ್ಯ ವೈಖರಿ ಇಂತಹ ಘಟನೆಗಳಿಂದ ಬೇಸತ್ತಿದ್ದು ಮೊದಲು ಬಸ್ ಗಳ ನ್ನು ಸುಧಾರಣೆ ಮಾಡಿ ಕಿರಿಕಿರಿ ತಪ್ಪಿಸಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..