ಕೇಂದ್ರ ಸರ್ಕಾರದ ಮಾದರಿ ವೇತನ ವಿಚಾರಕ್ಕೆ BSY ಭೇಟಿಯಾದ CM – ರಾಜ್ಯ ಸರ್ಕಾರದ ನೌಕರರ ಉತ್ತಮ ಸೇವೆಯಿಂದ ರಾಜ್ಯಕ್ಕೆ ಒಳ್ಳೇಯ ಹೆಸರು ಬಂದಿದೆ ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ ಯಡಿಯೂರಪ್ಪ…..

Suddi Sante Desk

ಬೆಂಗಳೂರು –

ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವೇತನ ಹಾಗೂ ಅನುಷ್ಠಾನಕ್ಕಾಗಿ ಅಧಿಕಾರಿಗಳ ವೇತನ ಸಮಿತಿಯನ್ನು ಬಜೆಟ್‌ ನಲ್ಲಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದು ಒತ್ತಾಯಿಸಿದ ಬೆನ್ನಲ್ಲೇ CM ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಮನೆಗೆ ತೆರಳಿ ಭೇಟಿಯಾಗಿ ಅವರನ್ನು ಸುಧೀರ್ಘ ವಾಗಿ ಚರ್ಚೆಯನ್ನು ಮಾಡಿ ಜಾರಿಗೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಹೌದು ಈ ಸಂಬಂಧ ಸಿಎಂ ಬೊಮ್ಮಾಯಿಗೆ ಅವರಿಗೆ ಯಡಿಯೂರಪ್ಪ ಅವರು ಪತ್ರ ಬರೆದಿದ್ದು ಕೇಂದ್ರ ಹಾಗೂ ಇತರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡುವ ಅಗತ್ಯ ವಿದೆ. ಹೀಗಾಗಿ ಅದರ ಪರಾಮರ್ಶೆ ಮತ್ತು ಅನುಷ್ಠಾನ ಕ್ಕಾಗಿ ನಾಳಿನ ಬಜೆಟ್ ನಲ್ಲಿ ಅಧಿಕಾರಿಗಳ ವೇತನ ಸಮಿತಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.ಕೇಂದ್ರ ಸರ್ಕಾರ 2016ರಲ್ಲಿ ಏಳನೆ ವೇತನ ಆಯೋಗದ ಶಿಫಾರ ಸುಗಳನ್ನಾಧರಿಸಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿದೆ.ದೇಶದ 28 ರಾಜ್ಯಗಳಲ್ಲೂ ಈಗಾಗಲೇ 25 ರಾಜ್ಯಗಳಲ್ಲಿ ಈ ಮಾದರಿ ಜಾರಿಯಲ್ಲಿದೆ ಎಂದು ಮನವ ರಿಕೆ ಮಾಡಿದರು

ದೇಶದ ಜಿಎಸ್ಡಿುಪಿ ಯನ್ನು ಅವಲೋಕಿಸಿದರೆ ರಾಜ್ಯ ಸರ್ಕಾರವು ಅಭಿವೃದ್ಧಿ ಪ್ರಗತಿ ಹಾಗೂ ಆರ್ಥಿಕ ಬೆಳವಣಿ ಗೆಯಲ್ಲಿ ರಾಷ್ಟ್ರದಲ್ಲಿ ಆರನೇ ಸ್ಥಾನದಲ್ಲಿದೆ. ಈ ಪ್ರಗತಿಗೆ ಸರ್ಕಾರಿ ನೌಕರರ ಸೇವೆ ಹಾಗೂ ಅವರ ಪಾತ್ರವು ಪ್ರಮುಖವಾಗಿದೆ ಎಂದು ಹೇಳಿದ್ದಾರೆ.ಸರ್ಕಾರಿ ನೌಕರರು ಈ ಹಿಂದೆ ಕೋವಿಡ್ ಮೊದಲನೆ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ತಮ್ಮ ಕುಟುಂಬ ಹಾಗೂ ಜೀವದ ಹಂಗು ತೊರೆದು ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿ ದ್ದಾರೆ. ಅವರ ದಕ್ಷತೆ ಹಾಗೂ ನಿಸ್ವಾರ್ಥ ಸೇವೆಯಿಂದಲೇ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯವಾ ಯಿತು.ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಿದ್ದು, ಲಸಿಕೆ ವಿತರಣೆ, ಸೋಂಕಿತರಿಗೆ ಚಿಕಿತ್ಸೆ ನಿರ್ವಹಣೆ ಸೇರಿದಂತೆ ಪ್ರತಿಯೊಂದರಲ್ಲೂ ಅವರ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ.ಇದರ ಪರಿಣಾಮವೇ ರಾಜ್ಯಕ್ಕೆ ದೇಶದಲ್ಲೇ ಉತ್ತಮ ಹೆಸರು ಬಂದಿದೆ ಎಂದು ಪ್ರಶಂಸಿಸಿದ್ದಾರೆ. ಆರೋಗ್ಯ ಸೇವೆ ಸೇರಿದಂತೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಈಗ ವೇತನ ಪರಿಷ್ಕರಣೆ ಅಗತ್ಯವಾಗಿರುವುದರಿಂದ ನಾಳಿನ ಬಜೆಟ್ನಸಲ್ಲಿ ನೌಕರರ ಸಂಘದ ಮನವಿಯಂತೆ ವೇತನ ಸಮಿತಿಯನ್ನು ರಚಿಸಬೇಕೆಂದು ಬಿ ಎಸ್ ವೈ ಸಿಎಂಗೆ ಮನವಿ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.