ಕೊಪ್ಪಳ –
ಹತ್ತಾರು ದಾನಮಾಡುವ ಶ್ರೇಷ್ಠ ಕೈಗಳಿಂದ ಒಂದು ಸುಂದರ ಸುಸಜ್ಜಿತ ಡಿಜಿಟಲ್ ಕೊಠಡಿ ನಿರ್ಮಾಣ
GHPS ಚಿಕ್ಕ ಸೂಳಿಕೇರಿ ಶಾಲೆಯಲ್ಲಿ. ಹೌದು ಕೊಪ್ಪಳ
ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕ ಸೂಳಿಕೇರಿ ಮಕ್ಕಳ ಬಹು ದಿನದ ಆಸೆ ಈಡೇರಿದ ಕ್ಷಣ ಕಂಡು ಬಂದಿತು.ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದ ವರು ಸದಾ ನೀಡುವ ಪ್ರೋತ್ಸಾಹ,ಊರಿನ ಗುರು ಹಿರಿ ಯರ ಯುವಕ ಮಿತ್ರರ ಸಹಕಾರ ಬಾಲ್ಯದ ಸ್ನೇಹಿತರು ಹಾಗೂ ಆತ್ಮೀಯ ಸ್ನೇಹಿತರು ಶ್ರೇಷ್ಠ ಕೈಗಳಿಂದ ನೀಡಿರುವ ದೇಣಿಗೆ ಇದೆಲ್ಲದರ ಜೊತೆಗೆ ಶಾಲೆಯ ಮುಖ್ಯ ಮಕ್ಕಳ ಪ್ರೀತಿಯ ಹಾರೈಕೆಯಿಂದ ಇಂದು ನಮ್ಮ ಶಾಲೆಯಲ್ಲಿ ಒಂದು ಸುಂದರ ಡಿಜಿಟಲ್ ಕೊಠಡಿ ನಿರ್ಮಾಣವಾಗಿದೆ.

ಇನ್ನೂ ಡಿಜಿಟಲ್ ಕೊಠಡಿ ನಿರ್ಮಾಣವಾಗಲು ಸಹಾಯ ಮಾಡಿದ ಎಲ್ಲಾ ಆತ್ಮೀಯರಿಗೆ ನಮ್ಮ ಮುಖ್ಯ ಗುರುಗಳು, ಸಿಬ್ಬಂದಿ ವರ್ಗದವರು ಹಾಗೂ ಮುದ್ದುಮಕ್ಕಳ ವತಿ ಯಿಂದ ಸರ್ವರಿಗೂ ತುಂಬು ಹೃದಯದ ಧನ್ಯವಾದ ಗಳನ್ನು ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ GHPS ಚಿಕ್ಕ ಸೂಳಿಕೇರಿ ಯಿಂದ ಹೇಳಲಾಗಿದೆ

