ಚಾಮರಾಜನಗರ –
ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ರಾಶಿ ರಾಶಿಯಾಗಿ ಚಿಟ್ಟೆಗಳು ಕಂಡು ಬಂದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಎಂದಿನಂತೆ ಶಾಲೆಯಲ್ಲಿ ಇಂದು ಮಧ್ಯಾಹ್ನ ಮಕ್ಕಳು ಊಟ ಮಾಡಲು ಮುಂದಾಗಿದ್ದಾರೆ ಈ ಒಂದು ಸಮಯದಲ್ಲಿ ಅನ್ನದಲ್ಲಿ ಚಿಟ್ಟೆಗಳು ಕಂಡು ಬಂದಿವೆ.
ಹೀಗಾಗಿ ಮಕ್ಕಳು ಆತಂಕಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರದ ಜೆ ಎಸ್ ಎಸ್ ಶಾಲೆಯ ಮದ್ಯಾಹ್ನದ ಬಿಸಿ ಊಟದಲ್ಲಿ ಚಿಟ್ಟೆಗಳು ಕಂಡು ಬಂದಿವೆ.ಇದರಿಂದಾಗಿ ಮಕ್ಕಳಿಗೆ ಭಯಗೊಂಡಿದ್ದು ಇತ್ತ ಪೋಷಕರಲ್ಲೂ ಆತಂಕ ಉಂಟಾಗಿದೆ.ಹನೂರು ತಾಲ್ಲೂಕಿನ ರಾಮಾಪುರದ ಜೆಎಸ್ ಎಸ್ ಶಾಲೆಯಲ್ಲಿ ನಡೆದಂತಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಕ್ಕಿಯನ್ನು ತೊಳೆಯದೆ ಅನ್ನ ಬೇಯಿಸಿ ಊಟ ಬಡಿಸಿ ದ್ದಾರೆ ಎಂಬ ಆರೋಪ ಪೋಷಕರಿಂದ ಕೇಳಿ ಬಂದಿದೆ.ಈ ಬಗ್ಗೆ ಮಕ್ಕಳು ಹಲವಾರು ಭಾರಿ ತಮ್ಮ ಪೋಷಕರಿಗೆ ದೂರಿದ್ದಾರೆ ಎನ್ನಲಾಗಿದೆ.ಬಿಸಿ ಊಟದ ಅವ್ಯವಸ್ಥೆಯ ಬಗ್ಗೆ ದೂರುತ್ತಿದ್ದರು ಎನ್ನಲಾಗಿದೆ ಖುದ್ದಾಗಿ ಪರಿಶೀಲಿ ಸೋಣ ಎಂದು ಶಾಲೆಗೆ ಬೇಟಿ ನೀಡಿದಂತಹ ಪೋಷಕರಿಗೆ ಶಾಕ್ ಕಾದಿತ್ತು ಕಂಡು ಬಂದಿತು.
ಬಿಸಿ ಊಟದಲ್ಲಿ ರಾಶಿಯಾಗಿ ಚಿಟ್ಟೆಗಳನ್ನು ಪೋಷಕರು ಕಂಡು ಹೌಹಾರಿದ್ದಾರೆ ಅಲ್ಲಿನ ಶಿಕ್ಷಕರು ಹಾಗೆ ಸಿಬ್ಬಂದಿಗಳ ಜೊತೆ ವಾಕ್ಸಮರ ನಡೆಸಿದ ಪ್ರಸಂಗವು ಶಾಲೆಯಲ್ಲಿ ನಡೆ ದಿದ್ದು ಕಂಡು ಬಂದಿತು.ಶಾಲೆಯಲ್ಲಿ ನೂರಾರು ಮಕ್ಕಳು ತಿನ್ನುವ ಅಹಾರದಲ್ಲಿ ಈ ಅವ್ಯವಸ್ಥೆಯಾದರೆ ಹೇಗೆ ನಮ್ಮ ಮಕ್ಕಳ ಆರೋಗ್ಯದ ಗತಿ ಏನು ಎಂಬುದು ಪೋಷಕರ ಆರೋಪವಾಗಿದ್ದು
ಶಿಕ್ಷಕರೊಂದಿಗೆ ಮಾತಿನ ಚಕಮಕಿ ಯನ್ನು ಮಾಡಿದ್ರು ಹಾಗೇ ಅವ್ಯವಸ್ಥೆಯ ಬಗ್ಗೆ ಕಂಡು ಕಾಣದಂತೆ ಇರುವ ಶಾಲೆಯ ಶಿಕ್ಷಕರು ಮತ್ತು ವಿರುದ್ದ ಕ್ರಮವನ್ನು ತೆಗೆದು ಕೊಳ್ಳುವಂತೆ ಪೋಷಕರು ಆಗ್ರಹ ವ್ಯಕ್ತಪಡಿಸಿದ್ದಾರೆ