ಬೆಂಗಳೂರು –
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕರ್ನಾಟಕ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಅವರ ಆಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳುವಕೋಶಾಧ್ಯಕ್ಷರು ಮತ್ತು ರಾಜ್ಯ ಪರಿಷತ್ ಸದಸ್ಯರು ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚಿಸಿದ ದಪ್ರಮುಖ ವಿಷಯಗಳು
👉ಈ ವರ್ಷದ ಅಂತ್ಯದೊಳಗೆ ಕೇಂದ್ರ ಮಾದರಿ ವೇತನ ಪಡೆಯುವುದು
(ಆರ್ಥಿಕ ಇಲಾಖೆ ಜೊತೆ ಒಂದು ಸುತ್ತಿನ ಮಾತುಕತೆ ಆಗಿದ್ದು ಈ ತಿಂಗಳ 16 ನೇ ತಾರೀಖಿನೊಳಗೆ 2 ನೇ ಸುತ್ತಿನ ಸಭೆ ಜರುಗುವುದು)
👉ಕೇಂದ್ರ ಮಾದರಿ ವೇತನ ಪಡೆದ ತಕ್ಷಣ NPS ಹೋರಾಟ ತೀವ್ರ ಗೊಳಿಸುವುದು.
👉ಆರೋಗ್ಯ ಭಾಗ್ಯ ಯೋಜನೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುತ್ತಿದೆ.
👉ಪ್ರತಿ ವರ್ಷ ತಾಲ್ಲೂಕು ಹಂತದಲ್ಲಿಯೇ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳೊವುದು.
👉ಸಂಘದ ಲೆಕ್ಕ ಪತ್ರ ಸರಿಯಾಗಿದ್ದರೆ ಮಾತ್ರ ಆಯಾ ಜಿಲ್ಲೆಯ ಹಾಗೂ ತಾಲ್ಲೂಕಿನ ಪಾಲಿನ ಸದಸ್ಯತ್ವದ ಹಣದ ಚೆಕ್ ನೀಡಲಾಗುವುದು.
👉ಸರಕಾರದ ಮುಂದಿರುವ ಸಂಘದ ಇನ್ನಿತರ ಪ್ರಮಖ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಷಡಕ್ಷರಿ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.