ಬೆಂಗಳೂರು –
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಸವರಾಜ ಬೊಮ್ಮಾ ಯಿ ನೇತ್ರತ್ವದಲ್ಲಿನ ಸಚಿವ ಸಂಪುಟವನ್ನು ನಾನು ಯಾವುದೇ ಕಾರಣಕ್ಕೂ ಸೇರ್ಪಡೆಯಾಗೊದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.ಬೆಂಗಳೂರಿನಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು ಸಧ್ಯ ನಾನೊಬ್ಬ ಹಿರಿಯ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಹೀಗಾಗಿ ನಾನು ಯಾವುದೇ ಕಾರಣಕ್ಕೂ ಈ ಬಾರಿ ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗೊದಿಲ್ಲವೆಂದರು.

ಇನ್ನೂ ಈ ಒಂದು ವಿಚಾರಕ್ಕೆ ಆಡಿಯೋ ಪ್ರಕರಣ ಕಾರಣವಲ್ಲವೆಂದರು. ಇನ್ನೂ ಈವರೆಗೆ ಪಕ್ಷದಲ್ಲಿನ ಯಾವುದೇ ವಿಚಾರ ಕುರಿತಂತೆ ಏನೇ ಕೇಳಿದರು ಕೂಡಾ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತೇವೆ ಎನ್ನುತ್ತಿದ್ದರು ಆದರೆ ಜಗದೀಶ್ ಶೆಟ್ಟರ್ ತಾವೇ ಹೀಗೆ ಬಹಿರಂಗವಾಗಿ ಮಾತನಾಡಿ ದ್ದಾರೆ ಇನ್ನೂ ಇತ್ತ ಈ ಒಂದು ವಿಚಾರ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾ ಡಿ ಈ ಒಂದು ಮಾಹಿತಿ ನನಗೆ ಇಲ್ಲ ಈ ಕುರಿತಂತೆ ಜಗದೀಶ್ ಶೆಟ್ಟರ್ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಇವೆಲ್ಲದರ ನಡುವೆ ಒಟ್ಟಾರೆ ಈವರೆಗೆ ಪಕ್ಷದ ವಿಚಾರ ಕುರಿತಂತೆ ಏನೇ ಕೇಳಿದರು ಪಕ್ಷದ ಚೌಕಟ್ಟಿ ನಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳುತ್ತಿದ್ದ ಜಗದೀಶ್ ಶೆಟ್ಟರ್ ಅವರು ಈಗ ಬಹಿರಂಗವಾಗಿ ಮಾತನಾಡಿದ್ದನ್ನು ನೊಡಿದರೇ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.