This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

ಬೆಂಗಳೂರು ನಗರ

ಡಿಸೆಂಬರ್ 17 ರಂದು ಶಾಲಾ ಕಾಲೇಜು ಬಂದ್ ಗೆ ಕರೆ – ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂದ್ ಗೆ ಕರೆ

ಡಿಸೆಂಬರ್ 17 ರಂದು ಶಾಲಾ ಕಾಲೇಜು ಬಂದ್ ಗೆ ಕರೆ –  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂದ್ ಗೆ ಕರೆ
WhatsApp Group Join Now
Telegram Group Join Now

ಬೆಂಗಳೂರು –

ಡಿಸೆಂಬರ್ 17 ರಂದು ರಾಜ್ಯದ ಶಾಲಾ ಕಾಲೇಜು ಗಳ ಬಂದ್ ಗೆ ಕಾಂಗ್ರೇಸ್ ಪಕ್ಷದ ವಿದ್ಯಾರ್ಥಿಗಳ ಘಟಕ ಎನ್ ಎಸ್ ಯುಐ ಘಟಕವು ಕರೆ ನೀಡಿದೆ ಹೌದು ಶೈಕ್ಷಣಿಕ ವರ್ಷದ ಅವಧಿ ಮುಕ್ತಾಯವಾ ಗುತ್ತಾ ಬಂದರು ಕೂಡಾ ಈವರೆಗೆ ರಾಜ್ಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೆಲವೊಂ ದಿಷ್ಟು ಸೌಲಭ್ಯಗಳನ್ನು ನೀಡದ ಹಾಗೇ ಇದ್ದ ವ್ಯವಸ್ಥೆಯನ್ನು ಬಂದ್ ಮಾಡಿರುವ ವಿಚಾರ ಕುರಿತಂತೆ

ಹಾಗೇ ವಿದ್ಯಾರ್ಥಿ ವೇತನ,ಉಚಿತ ಬಸ್ ಪಾಸ್, ಸಾರಿಗೆ ವ್ಯವಸ್ಥೆ, ಫಲಿತಾಂಶ ವಿಳಂಬ ಸರಿಪಡಿಸು ವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 17 ರಂದು ಶಾಲಾ-ಕಾಲೇಜು ಬಂದ್ ಗೆ ಕರೆ ನೀಡಲಾಗಿದೆ.ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್.ಎಸ್.ಯು.ಐ.ಘಟಕವು ಈ ಒಂದು ಕರೆ ನೀಡಿದ್ದು ಎನ್.ಎಸ್.ಯು.ಐ. ಅಧ್ಯಕ್ಷ ಕೀರ್ತಿ ಗಣೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಕುರಿತೆಂತ ಮಾಹಿತಿಯನ್ನು ನೀಡಿದರು.

ಈ ಹಿಂದೆ ವಿವಿಧ ವಿಶ್ವವಿದ್ಯಾಲಯ ಪರೀಕ್ಷೆಗಳ ಫಲಿತಾಂಶ ನಿಗದಿತ ಅವಧಿಗಿಂತ ಕೆಲವು ದಿನ ಮೊದಲು ಅಥವಾ ತಡವಾಗಿ ಬರುತ್ತಿದ್ದವು. ಈಗ ವರ್ಷವೇ ಕಳೆದರೂ ಫಲಿತಾಂಶ ಪ್ರಕಟಿಸಿಲ್ಲ. ಒಬ್ಬರ ಮೇಲೆ ಒಬ್ಬರು ಆರೋಪಿಸುತ್ತಿದ್ದಾರೆ. ಎನ್‌ಇಪಿ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲವಾಗಿದೆ ಎಂದು ದೂರಿದ್ದಾರೆ.

ಸರ್ಕಾರಿ ಕಾಲೇಜ್ ಗಳಲ್ಲೂ ಶುಲ್ಕ ಏರಿಕೆ ಮಾಡಲಾಗುತ್ತಿದೆ. ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ ಹೀಗಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 17ರಂದು ಶಾಲಾ, ಕಾಲೇಜು ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.


Google News

 

 

WhatsApp Group Join Now
Telegram Group Join Now
Suddi Sante Desk