ಕಾರು ಅಪಘಾತ ವಿವಿ ಕುಲಸಚಿವ ಸಾವು – ರಸ್ತೆ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು…..

Suddi Sante Desk

ಕಲಬುರಗಿ –

ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ವಿಶ್ವ ವಿದ್ಯಾಲಯದ ಕುಲಸಚಿವ ರೊಬ್ಬರು ಸಾವಿಗೀಡಾದ ಘಟನೆ ಕಲಬುರಗಿ ಯಲ್ಲಿ ನಡೆದಿದೆ.

ಹೌದು ಕಾರಿನ ಅಪಘಾತದಲ್ಲಿ ಶರಣಬಸವ ವಿವಿ ಕುಲಸಚಿವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಇದು ಖಾಸಗಿ ವಿಶ್ವ ವಿದ್ಯಾಲಯ ಆಗಿದ್ದು ಕುಲಸಚಿವ ಲಿಂಗರಾಜ್ ಶಾಸ್ತ್ರಿ ದುರ್ಮರಣಕ್ಕಿಡಾದವರಾಗಿ ದ್ದಾರೆ‌.

ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಶ್ವ ವಿದ್ಯಾ ಲಯದ ಕುಲಸಚಿವರಾಗಿದ್ದಾರೆ.ಬೀದರ್ ಜಿಲ್ಲೆ ಬಸವ ಕಲ್ಯಾಣದ ಹಣಮಂತವಾಡಿ ಬಳಿ ಈ ಒಂದು ಘಟನೆ ನಡೆದಿದೆ.

ವೇಗವಾಗಿದ್ದ ಕಾರು ರಸ್ತೆ ತಿರುವಿನಲ್ಲಿ ನಿಯಂತ್ರಣ ವನ್ನು ತಪ್ಪಿದೆ ಹೀಗಾಗಿ ಮರಕ್ಕೆ ಕಾರು ಡಿಕ್ಕಿಯಾಗಿ ಈ ಒಂದು ಅವಘಡ ಸಂಭವಿಸಿದೆ.ಮುಡಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.