ಇಬ್ಬರು ಶಾಲಾ ವಿದ್ಯಾರ್ಥಿಗಳನ್ನು ಬಲಿ ತಗೆದುಕೊಂಡ ಕಾರು – ತಂಗಿಯೊಂದಿಗೆ ಮನೆಗೆ ಹೋರಟಿದ್ದ ಇಬ್ಬರಿಗೆ ಡಿಕ್ಕಿಯಾದ ಕಾರು ಸ್ಥಳದಲ್ಲಿ ಸಾವು

Suddi Sante Desk
ಇಬ್ಬರು ಶಾಲಾ ವಿದ್ಯಾರ್ಥಿಗಳನ್ನು ಬಲಿ ತಗೆದುಕೊಂಡ ಕಾರು – ತಂಗಿಯೊಂದಿಗೆ ಮನೆಗೆ ಹೋರಟಿದ್ದ ಇಬ್ಬರಿಗೆ ಡಿಕ್ಕಿಯಾದ ಕಾರು ಸ್ಥಳದಲ್ಲಿ ಸಾವು

ಸುಳ್ಯ

 

ತಂಗಿಯನ್ನು ಕರೆದುಕೊಂಡು ಮನೆಯತ್ತ ಹೊರಟಿದ್ದ ಅಣ್ಣ ತಂಗಿಯರಿಬ್ಬರಿಗೆ ಕಾರೊಂದು ಡಿಕ್ಕಿಯಾದ ಘಟನೆ ಸುಳ್ಯ ದಲ್ಲಿ ನಡೆದಿದೆ. ನಿಶಾಂತ್,ಮೋಕ್ಷಾ ಮೃತರಾದವರಾಗಿದ್ದು ಸುಳ್ಯ ತಾಲೂಕಿನ ಎಲಿಮಲೆ ಸಮೀಪದ ‌ಜಬಳೆಯಲ್ಲಿ ಕಾರೊಂದು ಢಿಕ್ಕಿ ಹೊಡೆದಿದ್ದು ಪರಿಣಾಮ ಅಣ್ಣ ತಂಗಿ ಇಬ್ಬರೂ ಮೃತಪಟ್ಟಿದ್ದಾರೆ.

 

ಬಾಜಿನಡ್ಕದ ನಿಶಾಂತ್ ಹಾಗೂ ಆತನ ಸಹೋದರಿ ಮೋಕ್ಷಾ ಎಂಬವರೇ ಮೃತರಾಗಿದ್ದು ನಿಶಾಂತ್ ತನ್ನ ತಂಗಿಯನ್ನು ಕರೆದುಕೊಂಡು ಎಲಿಮಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಸುಳ್ಯ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಒಂದು ಅಪಘಾತ ಸಂಭವಿಸಿದೆ.

 

ಅಪಘಾತದಲ್ಲಿ ರಸ್ತೆ ಪಕ್ಕದಲ್ಲಿಯೇ ಗಂಭೀರ ಗಾಯಗೊಂಡು ನಿಶಾಂತ್ ಮೃತಪಟ್ಟರೆ ತೀವ್ರ ಗಾಯಗೊಂಡ ನಿಶಾಂತ್‌ನ ತಂಗಿ ಮೋಕ್ಷರನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಅವರೂ ಮೃತಪಟ್ಟಿದ್ದು ಸಧ್ಯ ಈ ಕುರಿ ತಂತೆ ಪೊಲೀಸರು ದೂರನ್ನು ದಾಖಲು ಮಾಡಿ ಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.