ಪರವಾನಿಗೆ ಇಲ್ಲದೇ ಬ್ಯಾನರ್ ಬಂಟಿಂಗ್ಸ್ ಭಿತ್ತಿಚಿತ್ರ ಹಾಕಿದರೆ ಕೇಸ್ ಧಾರವಾಡ DC ಖಡಕ್ ಎಚ್ಚರಿಕೆಯ ಸಂದೇಶ…..

Suddi Sante Desk
ಪರವಾನಿಗೆ ಇಲ್ಲದೇ ಬ್ಯಾನರ್ ಬಂಟಿಂಗ್ಸ್ ಭಿತ್ತಿಚಿತ್ರ ಹಾಕಿದರೆ ಕೇಸ್ ಧಾರವಾಡ DC ಖಡಕ್ ಎಚ್ಚರಿಕೆಯ ಸಂದೇಶ…..

ಧಾರವಾಡ

ಪರವಾನಗಿ ಪಡೆಯದೆ ಬ್ಯಾನರ್ಸ್, ಪ್ಲೆಕ್ಸ್, ಬಂಟಿಂಗ್ಸ್, ಹೋರ್ಡಿಂಗ್ಸ್,ವಾಲ್ ಪೆಂಟಿಂಗ್ ಮತ್ತು ಪೋಸ್ಟರ್ ಅಂಟಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶವನ್ನು ಮಾಡಿದ್ದಾರೆ.

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ನೇದ್ದಕ್ಕೆ ಸಂಬಂಧಿಸಿದಂತೆ, ಅನುಮತಿ ಪಡೆಯದೇ ಅನಧಿಕೃತವಾಗಿ ಅಳವಡಿ ಸಲಾದ ಬ್ಯಾನರ್ಸ್,ಪ್ಲೆಕ್ಸ್,ಬಂಟಿಂಗ್ಸ್, ಹೋರ್ಡಿಂಗ್ಸ್, ವಾಲ್ ಪೆಂಟಿಂಗ್, ಮತ್ತು ಪೋಸ್ಟರ್ ಇತ್ಯಾದಿಗಳನ್ನು 24 ಗಂಟೆಯೊಳ ಗಾಗಿ ತೆರವುಗೊಳಿಸುವ ಕುರಿತು ಸಂಭಂದಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಚುನಾವ ಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳು, ಅನುಮತಿ ಪಡೆಯದೇ ಅನಧಿಕೃತವಾಗಿ ಬ್ಯಾನರ್, ಪ್ಲೆಕ್ಸ್, ಬಂಟಿಂಗ್ಸ್, ಹೋರ್ಡಿಂಗ್ಸ್, ವಾಲ್ ಪೇಂಟಿಂಗ್ ಮತ್ತು ಪೋಸ್ಟರ್ ಇತ್ಯಾದಿ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವು ದನ್ನು

ಧಾರ್ಮಿಕ ಸ್ಥಳಗಳನ್ನು ರಾಜಕೀಯ ಉದ್ದೇಶಗಳಿ ಗಾಗಿ ಉಪಯೋಗಿ ಸುವುದನ್ನು,ಕೋಮು ಸೌಹಾ ರ್ದತೆಯನ್ನು ಕದಡುವಂತ ಹೇಳಿಕೆಗಳನ್ನು ನೀಡು ವುದು, ಮತದಾರರನ್ನು ಪ್ರಚೋದಿಸುವಂತಹ ಸ್ಟಿಕರ್ಸ್‍ಗಳನ್ನು ವಾಹನಗಳಿಗೆ ಅಂಟಿಸುವುದು ಮುಂತಾದ ಕೃತ್ಯಗಳನ್ನು The Karnataka Open Places (Prevention of Disfigurement) Act, 1981; The Representation of People Act, 1951; The Religious Institutions (Prevention of Misuse) Act, 1988

ಹಾಗೂ ಮಾನ್ಯ ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ:437:6:ECI: INST:FUNCT:MCC:2022 ದಿನಾಂಕ:11-10-2022 ನೇದ್ದವುಗಳಲ್ಲಿ ನಿಷೇಧಿಸಲಾಗಿದೆ.

ಕಾರಣ ಇಂಥಹ ಕೃತ್ಯಗಳಲ್ಲಿ ತೋಡಗದಂತೆ ಸಾರ್ವಜನಿಕರಿಗೆ ಈ ಮೂಲಕ ಸೂಚನೆಯನ್ನು ನೀಡಲಾಗುತ್ತಿದೆ. ಆದಾಗ್ಯೂ ಸಹ ಇಂತಹ ಕೃತ್ಯಗಳಲ್ಲಿ ತೊಡಗುವ ವ್ಯಕ್ತಿ, ಸಂಘಟನೆಗಳ ಮೇಲೆ ಕಾನೂನು ಪ್ರಕಾರ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.