ಹುಬ್ಬಳ್ಳಿಯಲ್ಲಿ ದೊಡ್ಡ ಕ್ರಿಕೆಟ್ ಬೆಟ್ಟಿಂಗ್ ಜಾಲ ಭೇಧಿಸಿದ ಸಿಸಿಬಿ ಪೋಲೀಸರು – ಖಡಕ್ ಪೊಲೀಸ್ ಅಧಿಕಾರಿ ಮಾರುತಿ ಗುಳ್ಳಾರಿ ಮತ್ತು ಟೀಮ್ ನೇತ್ರತ್ವದಲ್ಲಿ ಮುಂದುವರೆದ ಭರ್ಜರಿ ಕಾರ್ಯಾಚರಣೆ…..

Suddi Sante Desk
ಹುಬ್ಬಳ್ಳಿಯಲ್ಲಿ ದೊಡ್ಡ ಕ್ರಿಕೆಟ್ ಬೆಟ್ಟಿಂಗ್ ಜಾಲ ಭೇಧಿಸಿದ ಸಿಸಿಬಿ ಪೋಲೀಸರು – ಖಡಕ್ ಪೊಲೀಸ್ ಅಧಿಕಾರಿ ಮಾರುತಿ ಗುಳ್ಳಾರಿ ಮತ್ತು ಟೀಮ್ ನೇತ್ರತ್ವದಲ್ಲಿ ಮುಂದುವರೆದ ಭರ್ಜರಿ ಕಾರ್ಯಾಚರಣೆ…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ದೊಡ್ಡ ಕ್ರಿಕೆಟ್ ಬೆಟ್ಟಿಂಗ್ ಜಾಲ ಭೇಧಿಸಿದ ಸಿಸಿಬಿ ಪೋಲೀಸರು – ಖಡಕ್ ಪೊಲೀಸ್ ಅಧಿಕಾರಿ ಮಾರುತಿ ಗುಳ್ಳಾರಿ ಮತ್ತು ಟೀಮ್ ನೇತ್ರತ್ವದಲ್ಲಿ ಮುಂದುವರೆದ ಭರ್ಜರಿ ಕಾರ್ಯಾಚರಣೆ. ಹೌದು

ಇತ್ತ ದೇಶದಲ್ಲಿ ವಿಶ್ವಕಪ್ ಕ್ರಿಕೇಟ್ ಜ್ವರ ಕಾವೇ ರುತ್ತಿದ್ದು ಮತ್ತೊಂದೆಡೆ ತೆರೆ ಮರೆಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ದಂಧೆ ಕೂಡಾ ನಡೆಯುತ್ತಿದೆ.ವಿಶ್ವಕಪ್ ಆರಂಭ ದಿನದಿಂದ ಈವರೆಗೆ ಪ್ರತಿದಿನ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯ ಮೇಲೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮತ್ತು ಟೀಮ್ ಹದ್ದಿನ ಕಣ್ಣು ಇಟ್ಟಿದೆ.

ಈ ಒಂದು ನಿಟ್ಟಿನಲ್ಲಿ ಪ್ರತಿದಿನ ಒಂದೊಂದು ಬೆಟ್ಟಿಂಗ್ ಪ್ರಕರಣಗಳು ಹೊರ ಬರುತ್ತಿದ್ದು ಇದರ ನಡುವೆ ಪೊಲೀಸ್ ಆಯುಕ್ತರ ಸಂದೇಶದ ನಡುವೆ ಈ ಒಂದು ಬೆಟ್ಟಿಂಗ್ ದಂಧೆಯನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಇನ್ಸ್ಪೆಕರ್ ಮಾರುತಿ ಗುಳ್ಳಾರಿ ನೇತ್ರತ್ವದಲ್ಲಿನ ಟೀಮ್ ಭರ್ಜ ರಿಯಾದ ಕಾರ್ಯಾಚರಣೆಯನ್ನು ಮಾಡುತ್ತಿದ್ದು ಸಧ್ಯ ಈ ಒಂದು ಟೀಮ್ ಹುಬ್ಬಳ್ಳಿಯಲ್ಲಿ ಮತ್ತೊಂದು ಕ್ರಿಕೆಟ್ ಬೆಟ್ಟಿಂಗ್ ದಂಧೆಯ ದೊಡ್ಡ ಜಾಲವನ್ನು ಪತ್ತೆ ಮಾಡಿದೆ.

ಹೌದು ನಗರದಲ್ಲಿ ಮುಂದುವರೆದ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಮತ್ತೊಂದು ದೊಡ್ಡ ಜಾಲವನ್ನು ಈ ಒಂದು ಸಿಸಿಬಿ ಟೀಮ್ ಪತ್ತೆ ಮಾಡಿದ್ದು ದಕ್ಷಿಣ ಆಫ್ರಿಕಾ ಮತ್ತು ನೆದಲ್ಯಾಂಡ್ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಜೂಜಾಟ ನಡೆಸಿದ್ದ ದೊಡ್ಡ ಜಾಲವೊಂದನ್ನು ಸಿಸಿಬಿ ಪೋಲೀಸರು ಭೇದಿಸಿದ್ದಾರೆ.ಹುಬ್ಬಳ್ಳಿಯ ಕಮರೀಪೇಟೆಯ ಹತ್ತಿರ ಡಾಕಪ್ಪ ಸರ್ಕಲ್ ದ ಬಳಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ಮಾರುತಿ ಗುಳ್ಳಾರಿ ಮತ್ತು ಟೀಮ್ ನೇತ್ರತ್ವ ದಲ್ಲಿನ ಟೀಮ್ ದಾಳಿ ಮಾಡಿ ಮೂವರು ಬೆಟ್ಟಿಂಗ್ ಕಿಂಗ್ ಪಿಂಗ್ ಗಳನ್ನು ಬಂಧಿಸಿದ್ದು ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿ ದ್ದಾರೆ.

ನವೀನ ಗಣಪತಿಸಾ ಜಿತೂರಿ,ಮಹ್ಮದ ಯರಗಟ್ಟಿ ಪವನ.ತಪ್ಪಣ್ಣ ಇರಕಲ್ ಹೀಗೆ ಮೂವರು ಬಂಧಿ ತರಾಗಿದ್ದು ಸಂತೋಷ ಕುರ್ಡೇಕರ್ ,ಗಿರೀಶ ಎಂಬುವರು ದಾಳಿಯ ಸಮಯದಲ್ಲಿ ಪರಾರಿ ಯಾಗಿದ್ದು ಇವರೇ ಪ್ರಮುಖ ಬುಕ್ಕಿ ಎನ್ನಲಾಗಿದೆ ಬಂಧಿತರಿಂದ ಎರಡು ಲಕ್ಷಕ್ಕೂ ಅಧಿಕ ನಗದು ಹಣ ಬೆಟ್ಟಿಂಗ್ ಗಾಗಿ ಬಳಕೆ ಮಾಡಿದ್ದ ಮೂರು ಮೊಬ್ಯೆಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರುತಿ ಗುಳ್ಳಾರಿ ಮತ್ತು ಟೀಮ್ ನೇತ್ರತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದ್ದು ಕಮರಿ ಪೇಟೆ ಪೋಲೀಸ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಕೆ ಕೈಗೊಂಡಿದ್ದಾರೆ.ಇನ್ನೂ ದೊಡ್ಡ ಕ್ರಿಕೇಟ್ ಬೆಟ್ಟಿಂಗ್ ಜಾಲವನ್ನು ಪತ್ತೆ ಮಾಡಿದ ಸಿಸಿಬಿ ಇನ್ಸ್ಪೆಕರ್ ಮಾರುತಿ ಗುಳ್ಳಾರಿ ಮತ್ತು ಟೀಮ್ ಕಾರ್ಯಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಡಿಸಿಪಿ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.