ಬೆಂಗಳೂರು –
ಕರೋನಾ ಮಧ್ಯೆ ಕಳೆದ ಹಲವು ದಿನಗಳಿಂದ ಶಾಂತ ವಾಗಿದ್ದು ಸಿಡಿ ಲೇಡಿ ಪ್ರಕರಣ ಮತ್ತೊಂದು ಮೇಘಾ ಟ್ವೀಸ್ಟ್ ಪಡೆದುಕೊಂಡಿದೆ. ಹೌದು ಕೊರೊನಾ ಮದ್ಯೆ ಸದ್ದಿಲ್ಲದೆ ನಡೆತಿದೆ ಮಾಜಿ ಸಚಿವರ ಸಿಡಿ ಕೇಸ್ ನ ತನಿಖೆ.ಕಬ್ಬನ್ ಪಾರ್ಕ್ ನಲ್ಲಿ ಯುವತಿ ನೀಡಿದ್ದ ರೇಪ್ ಕೇಸ್ ರೋಚಕ ಟ್ವಿಸ್ಟ್ ನ್ನು ಪಡೆದು ಕೊಂಡಿದ್ದು ಇಷ್ಟು ದಿನ ಸಿಡಿ ನಖಲಿ ಆ ಯುವತಿ ಯಾರು ಅಂತ ಗೊತ್ತಿಲ್ಲ ಅಂತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿರೇಪದ ಕೇಸ್ ಕುತ್ತಿಗೆ ಬರೋ ಹೊತ್ತಲ್ಲಿ ಯೂಟರ್ನ್ ಹೊಡೆದಿದ್ದಾರೆ.

ಸಿಡಿಯಲ್ಲಿರೋದು ನಾನೇ ಆ ಹುಡುಗಿ ಕೂಡ ನನಗೆ ಪರಿಚಯ ಎಂದಿದ್ದಾರಂತೆ ಜಾರಕಿಹೋಳಿ.ಪ್ರಾಜೆಕ್ಟ್ ವರ್ಕ್ ಅಂತ ಯುವತಿ ನನ್ನ ಪರಿಚಯ ಮಾಡಿಕೊಂ ಡಿದ್ಳು ಅವಳು ನನ್ನ ನಂಬರ್ ಪಡೆದು ಆಗಾಗ ಫೋನ್ ಮಾಡ್ತಿದ್ಳು ತುರ್ತು ಸಂದರ್ಭದಲ್ಲಿ ಆಕೆ ಯನ್ನು ನನ್ನ ಅಪಾರ್ಟ್ಮೆಂಟ್ ಗೆ ಕರೆಸಿದ್ದೆ ಎಂದು ಹೇಳಿದ್ದಾರಂತೆ.ಆ ಸಂದರ್ಭದಲ್ಲಿ ಆಕೆಯ ಸಮ್ಮತಿ ಯೊಂದಿಗೆ ಅವಳ ಜೊತೆ ಸೇರಿದ್ದೆ ನಾನು ಅತ್ಯಾ ಚಾರ ಮಾಡಿಲ್ಲ ಎಂದು ಯೂ ಟರ್ನ್ ಹೊಡೆದಿ ದ್ದಾರೆ.

ವಿಡಿಯೋ ರಿಕಾರ್ಡ್ ಹೇಗೆ ಮಾಡಿದ್ರು ಹೇಗೆ ಆಯಿ ತು ಅಂತಾ ಗೊತ್ತಿಲ್ಲ ನಾನು ಯುವತಿಗೆ ಯಾವುದೇ ಆಮಿಷ ವೊಡ್ಡಿಲ್ಲ ಎಂದು ಹೇಳಿದ್ದಾರಂತೆ.ತೀವ್ರ ಕುತೂಹಲ ಕೆರಳಿಸಿದ ಜಾರಕಿಹೋಳಿ ಯವರ ಈ ಒಂದು ಹೇಳಿಕೆ.ಇನ್ನೂ ತನಿಖಾಧಿಕಾರಿ ಎಸಿಪಿ ಕವಿತಾ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾರೆ ರಮೇಶ್ ಜಾರಕಿಹೋಳಿ.ಇಷ್ಟು ದಿನೆ ಮಾರ್ಫೇಜ್ ಸಿಡಿ. ಆಕೆ ಯಾರೂ ಏನ್ನುವುದೆ ಗೊತ್ತಿಲ್ಲ ಎಂದಿದ್ದ ಜಾರಕಿಹೋಳಿ ಇಂದು ಹೊಡೆದ ಈ ಒಂದು ಯೂ ಟರ್ನ್ ನಿಂದ ಕೇಸ್ ಕ್ಲೋಸ್ ಆಗೋ ಸಾಧ್ಯತೆ ಕಂಡು ಬರುತ್ತಿದೆ.

ಇವೆಲ್ಲದರ ನಡುವೆ ಈಗ ಮತ್ತೊಂದು ಟ್ವೀಸ್ಟ್ ನ್ನು ಈ ಒಂದು ಪ್ರಕರಣ ಪಡೆದುಕೊಂಡಿದ್ದು ಹೀಗಾಗಿ ಇನ್ನೂ ಅತ್ತ ಸಿಡಿ ಲೇಡಿ ಮತ್ತೇನು ಹೇಳಿಕೆ ನೀಡು ತ್ತಾರೆ ಇನ್ನೇನು ಹೊಸ ಬಾಂಬ್ ಹಾಕುತ್ತಾರೆ ಈ ಪ್ರಕರಣ ಮತ್ತೆ ಇನ್ನೂ ಎಲ್ಲೇಲ್ಲಿಗೆ ಹೊಗುತ್ತದೆ ಎಂಬುದನ್ನು ಕಾದು ನೋಡಬೇಕು.