ಬೆಂಗಳೂರು –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಅಜ್ಞಾತ ಸ್ಥಳದಲ್ಲೇ ಕುಳಿತುಕೊಂಡು ಒಂದರ ಮೇಲೊಂದು ವಿಡಿಯೋ ರಿಲೀಸ್ ಮಾಡುತ್ತಿರುವ ಸಿಡಿ ಲೇಡಿ ಕೊನೆಗೂ ಮಾಜಿ ಸಚಿವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಹೌದು ಕಳೆದ 24 ದಿನಗಳಿಂದ ತೀವ್ರ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಕ್ಕೆ ಇದೀಗ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದೆ.

ರಮೇಶ ಜಾರಕಿಹೊಳಿ ವಿರುದ್ಧ ಇಂದೇ ಪ್ರಕರಣ ದಾಖಲಿಸಲು ಸಿಡಿಯಲ್ಲಿರುವ ಯುವತಿ ನಿರ್ಧರಿ ಸಿದ್ದು, ವಕೀಲ ಜಗದೀಶ್ ಎನ್ನುವವರ ಮೂಲಕ ಮಧ್ಯಾಹ್ನ ದೂರು ದಾಖಲಿಸಲಿದ್ದಾರೆ. ಒಬ್ಬ ಪ್ರಭಾವಿ ರಾಜಕಾರಣಿ ವಿರುದ್ಧ ದೂರು ದಾಖಲಿಸು ವುದು ಸುಲಭವಲ್ಲ. ಪೊಲೀಸರು ಹೇಗೆ ತೆಗೆದು ಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಈ ಮೊದಲು ದೂರು ದಾಖಲಿಸಲು ಸಾಧ್ಯವಾಗಿರಲಿಲ್ಲ ಎಂದು ವಕೀಲ್ ಜಗದೀಶ್ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.ಈ ಬೆಳವಣಿಗೆ ಯಿಂದಾಗಿ ರಮೇಶ ಜಾರಕಿಹೊಳಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು ಅವರ ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದೆ.