ಬೆಂಗಳೂರು –
ಸಿಡಿ ಲೇಡಿ ಬೆಳ್ಳಂ ಬೆಳಿಗ್ಗೆ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾಳೆ ಹೌದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾಳೆ.

ಹೌದು ಸಿಡಿ ಪ್ರಕರಣದಲ್ಲಿ ಯುವತಿ ಉಲ್ಟಾ ಹೊಡೆದಿದ್ದಾರೆ ಎಂಬ ಮಾತುಗಳು ನಿನ್ನೆಯಿಂದ ಕೇಳಿ ಬಂದಿದ್ದವು. ಆದರೆ ಇಂದು ಅವುಗಳಿಗೆ ಯುವತಿ ತೆರೆ ಎಳೆದಿದ್ದಾಳೆ. ಇವೆಲ್ಲ ಶುದ್ಧ ಸುಳ್ಳು. ಕೆಲವು ಸಾಕ್ಷ್ಯಗಳನ್ನು ನೀಡುವಕ್ಕೆ ಎಸ್ ಐಟಿ ಅಧಿಕಾರಿಗಳ ಬಳಿ ಹೋಗಿದ್ದೆ. ಅಷ್ಟರಲ್ಲಿ ಅದು ಬೇರೆ ಹಾದಿ ಹಿಡಿಯಿತು. ನಾನು ಅಧಿಕಾರಿಗಳಿಗೆ ಎವಿಡೆನ್ಸ್ ನೀಡಿದ್ದೇನೆಯೇ ಹೊರತು, ಯಾವುದೇ ಪೇಪರ್ ಗಳಿಗೆ ಸಹಿ ಮಾಡಿಲ್ಲ ಎಂದಿದ್ದಾರೆ.
ತಂದೆ – ತಾಯಿ ಜೊತೆ ಮಾತನಾಡಿದ್ದೇನೆ. ಅವರು ಎಷ್ಟೇ ಮನವೊಲಿಸಿದರೂ ಸತ್ಯವನ್ನೇ ಹೇಳಬೇಕಾ ಗುತ್ತದೆ. ಒಟ್ಟಾರೆ ನ್ಯಾಯಾಧೀಶರ ಮುಂದೆ ದಾಖಲಿಸಿರುವ ನನ್ನ ಹೇಳಿಕೆಗೆ ನಾನು ಬದ್ಧಳಾಗಿದ್ದೇ ನೆ ಎಂದು ಹೇಳಿದ್ದಾರೆ.

ನನ್ನ ಕುಟುಂಬ ಹಾಗೂ ಗೆಳೆಯ ಆಕಾಶ್ ನನ್ನು ಸಹ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ ನಮ್ಮ ಸಂಬಂಧಿಗಳಿಗೂ ನೊಟೀಸ್ ನೀಡ ಲಾಗುತ್ತಿದೆ. ಆದರೆ, ಪ್ರಕರಣದ ಪ್ರಮುಖ ಆರೋಪಿ ಯನ್ನು ಕೋವಿಡ್ ನೆಪ ಹೇಳಿ ವಿಚಾರಣೆ ಮಾಡುವು ದರಿಂದ ಹಿಂದೆ ಸರಿಯಲಾಗಿದೆ ಎನ್ನುತ್ತಾ ಪತ್ರವೊಂದನ್ನು ಬರೆದಿದ್ದಾಳೆ.

ಇನ್ನೂ ಮೊದಲು ಆರೋಪಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಿ. ಅವರ ಮನೆಯವರಿಗೂ ಎಸ್ ಐಟಿ ನೊಟೀಸ್ ನೀಡಲಿ ಎಂದು ಸಂತ್ರಸ್ತೆ ಒತ್ತಾಯಿಸಿದ್ದಾರೆ