ಬೆಂಗಳೂರು –
ಬೆಳಗ್ಗೆ ವಿಡಿಯೋ ರಿಲೀಸ್ ಮಾಡಿ ಹೇಳಿಕೆ ನೀಡಿದ್ದ ಸಿಡಿ ಲೇಡಿ ಕೊನೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮಧ್ಯಾಹ್ನದ ವೇಳೆ ಪೊಲೀಸ ರಿಗೆ ದೂರು ತಲುಪಿಸಿದ್ದಾರೆ.ಲೇಡಿ ತಮ್ಮ ವಕೀಲ ರೊಬ್ಬರ ಮೂಲಕ ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಯುವತಿಯ ತನ್ನದೇಯಾದ ಕೈ ಬರಹದ ಮೂಲಕ ದೂರನ್ನು ಬರೆದು ವಕೀಲ ಜಗದೀಶ್ ಮೂಲಕ ಬೆಂಗಳೂರು ಪೊಲೀಸ್ ಕಮಿಷನರ್ ಕಮಲಪಂತ್ ಗೆ ದೂರು ನೀಡಲಾಗಿದೆ.

ದೂರಿನಲ್ಲಿ ಮಾಜಿ ಸಚಿವರ ರಮೇಶ್ ಜಾರಕಿಹೊಳಿ ಸಾಕಷ್ಟು ಆರೋಪ ಹೊರಿಸಲಾಗಿದೆ.ಇಲ್ಲೂ ಕೂಡಾ ಮತ್ತೆ ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ನನ್ನನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡಿ ದ್ದಾರೆಂದು ದೂರಿದ್ದಾರೆ.

ರಮೇಶ್ ಜಾರಕಿಹೊಳಿ ಹೇಗೆ ಪರಿಯಚವಾದ್ರೂ, ನನ್ನೊಂದಿಗೆ ಲೈಂಗಿಕ ಸಂಪರ್ಕ ಬಳಿಕ ಕೆಲಸ ಕೊಡಿಸದೆ ಹೆದರಿಸಿದ್ರು. ಬಳಿಕ ಮಾಧ್ಯಮಗಳಿಗೆ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡಿದ್ರು. ಇದೀಗ ನಮ್ಮ ಕುಟುಂಬಕ್ಕೆ ಹಾಗೂ ನನಗೆ ಸಹಾಯ ಮಾಡಲು ಬಂದ ಕುಟುಂಬಕ್ಕೆ ತೊಂದರೆ ಕೊಡುತ್ತಿ ದ್ದಾರೆ ಎಂದು ಉಲ್ಲೇಖ ಮಾಡಿ ದೂರನ್ನು ನೀಡಿದ್ದಾರೆ.
ತಮ್ಮ ಪ್ರಭಾವ ಬಳಸಿ ಪೊಲೀಸರಿಗೆ ದೂರು ನೀಡಲು ಬಿಡದಂತೆ ಮಾಡುತ್ತಿದ್ದಾರೆಂದು ದೂರಿದ್ದಾರೆ.ಒಟ್ಟಾರೆ ಬೆಳಿಗ್ಗೆ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದ ಸಿಡಿ ಲೇಡಿ ಮಾಜಿ ಸಚಿವರ ವಿರುದ್ಧ ದೂರನ್ನು ನೀಡಿದ್ದು ಮುಂದೇನು ಆಗುತ್ತದೆ ಎಂಬುದನ್ನು ಕಾದು ನೋಡಬೇಕು.