ಬೆಂಗಳೂರು –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಗಂಟೆಗೊಂದು ತಿರುವು ಪಡೆದುಕೊಳ್ಳುತ್ತದೆ. ತನಿಖೆ ಆರಂಭಿಸಿರುವ SIT ಅಧಿಕಾರಿಗಳಿಗೆ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.ಹೌದು ಸಿಡಿ ಲೇಡಿ ಇಬ್ಬರು ಮಾಜಿ ಸಚಿವರಿಬ್ಬರ ಜೊತೆಯಲ್ಲಿ ಸುದೀರ್ಘವಾದ ಸಂಪರ್ಕವನ್ನು ಹೊಂದಿದ್ದರು ಎನ್ನಲಾಗಿದೆ.ಹಾವೇರಿ ಮತ್ತು ತುಮಕೂರಿನ ಈ ಮಾಜಿ ಇಬ್ಬರು ಸಚಿವ ರೊಂದಿಗೆ ಸಿಡಿ ಲೇಡಿ ಹಣಕಾಸಿನ ವ್ಯವಹಾರನ್ನು ಕೂಡಾ ಹೊಂದಿದ್ದರು ಎನ್ನುವ ಬಗ್ಗೆ ಎಸ್‌ಐಟಿ ತನಿಖೆಯಲ್ಲಿ ಕಂಡು ಬಂದಿದೆ. ಇದಲ್ಲದೇ ಅನೇಕ ಬಾರಿ ಸಿಡಿ ಲೇಡಿ ಇವರ ನಡುವೆ ಕರೆಗಳ ವಿನಿಮ ಯವಾಗಿ ದ್ದಾವೆ ಎನ್ನಲಾಗಿದೆ. ಇದರೊಂದಿಗೆ ಮೈಸೂರು ಮೂಲದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯೋಗಿಯೊಬ್ಬರ ಜೊತೆಗೆ ಕೂಡಾ ಸಿಡಿ ಲೇಡಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಇನ್ನೂ ಸಿಡಿ ಲೇಡಿ ಜೊತೆಗೆ ಒರ್ವ ಮಾಜಿ ಸಚಿವರಿಗೆ ಇರುವ ಸಂಬಂಧವನ್ನು ತಿಳಿದುಕೊಳ್ಳುವ ಸಲುವಾ ಗಿ ಎಸ್‌ಐಟಿ ಅಧಿಕಾರಿಗಳು ಆ ಮಾಜಿ ಸಚಿವರಿಗೆ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ನೀಡುವ ಸಾಧ್ಯತೆ ಇದ್ದು ತನಿಖೆಗೆ ಸಂಬಂಧಪಟ್ಟಂತೆ ಇಬ್ಬರ ನಡುವಿನ ಸಂಬಂಧ, ಹಣಕಾಸಿನ ವ್ಯವಹಾರ ಇಬ್ಬರು ಎಷ್ಟು ದಿನದಿಂದ ಸಂಬಂಧ ಹೊಂದಿದ್ದಾರೆ ಎಂಬ ಕುರಿತು ತನಿಖೆ ನಡೆಯಲಿದೆ. ಇಬ್ಬರು ಸಚಿವರ ಜೊತೆಯಲ್ಲಿ ಈ ಸಿಡಿ ಲೇಡಿ ನಡುವೆ ಇರುವ ಸಂಬಂಧವಾದ್ರು ಏನು ಸಿಡಿ ಲೇಡಿ ಬೆದರಿಕೆಗೆ ಈಡಾಗಿದ್ದಾರಾ ಎನ್ನುವುದರ ಬಗ್ಗೆ ಎಸ್‌ಐಟಿ ದಳ ತನಿಖೆ ನಡೆಸಲಿದೆ.

‘ಸಿಡಿ ಲೇಡಿ’ ಯೊಂದಿಗೆ ಸಿಡಿ ಹೊರ ಬರುವ ಎರಡು ದಿನ ಸಂಪರ್ಕವನ್ನು ಒರ್ವ ಸಚಿವರು ಅವರು ಸಂಪರ್ಕವನ್ನು ಹೊಂದಿದ್ರು ಎನ್ನಲಾಗಿದ್ದು, ಸಿಡಿ ಲೇಡಿ ಅತಿ ಹೆಚ್ಚು ಕರೆಗಳನ್ನು ಮಾಡಿರುವವರ ಪಟ್ಟಿಯಲ್ಲಿ ಒರ್ವ ಸಚಿವರ ನಂಬರ್ ಇದೇ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೂ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆ ಮಾಜಿ ಸಚಿವರು ಇದು ಸುಳ್ಳಾಗಿದ್ದು, ನಾನು ಯಾರಿಗೂ ಹಣವನ್ನು ಕಳುಹಿಸಿಲ್ಲ, ನನಗೆ ಇದನ್ನು ನೋಡಿ ನಗಬೇಕೋ ಅಳಬೇಕೋ ನನಗೆ ತಿಳಿದಿಲ್ಲ, ಆಕೆಯ ಬಳಿ ನನ್ನ ನಂಬರ್ ಇರಬಹುದು, ನನಗೆ ಪ್ರತಿ ನಿತ್ಯ ನೂರಾರು ಜನ ಕರೆ ಮಾಡುತ್ತಿರುತ್ತಾರೆ, ಅದನ್ನು ನನಗೆ ನೆನಪು ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
