ಧಾರವಾಡದ ಸೇಂಟ್ ಜೊಸೆಫ್ಸ್ ಹೈಸ್ಕೂಲ ನಲ್ಲಿ ಸಂಭ್ರಮದ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ – SSLC ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಹೊಸದೊಂದು ಕಾರ್ಯಕ್ರಮ ಹುಟ್ಟು ಹಾಕಿದ ಪಾಪು ಧಾರೆ…..

Suddi Sante Desk
ಧಾರವಾಡದ ಸೇಂಟ್ ಜೊಸೆಫ್ಸ್ ಹೈಸ್ಕೂಲ ನಲ್ಲಿ ಸಂಭ್ರಮದ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ – SSLC ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಹೊಸದೊಂದು ಕಾರ್ಯಕ್ರಮ ಹುಟ್ಟು ಹಾಕಿದ ಪಾಪು ಧಾರೆ…..

ಧಾರವಾಡ  –

ಧಾರವಾಡದ ಸೇಂಟ್ ಜೊಸೆಫ್ಸ್ ಹೈಸ್ಕೂಲ ನಲ್ಲಿ
ಸಂಭ್ರಮದ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ.ಹೌದು ಧಾರವಾಡದ ಪ್ರತಿಷ್ಠಿತ ಸೇಂಟ್ ಜೊಸೆಫ್ ಹೈಸ್ಕೂಲಿನಲ್ಲಿ ಸಂಭ್ರಮದ 68ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ಶಾಲೆಯ ಪ್ರಿನ್ಸಿಪಾಲರಾದ ಫಾದರ್ ರಿವರೆಂಡ ಡಾ|| ಮೈಕಲ್ ಸೋಜಾ ಹಾಗೂ ಸೇಂಟ್ ಜೊಸೆಫ್ಸ್ ಚರ್ಚ್ ಫಾದರ್ ರೆ. ಫಿಡಿಲಿನೊ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದರು.

ಶಾಲೆಯಲ್ಲಿ ಜರುಗಿದ ಈ ರಾಜ್ಯೋತ್ಸವದ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ ರಾದ ರಿವರೆಂಡ ಫಾದರ್ ಡಾ|| ಮೈಕಲ್ ಸೋಜಾ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ   ಪಾಪು ಧಾರೆಯವರು ಆಗಮಿಸಿದ್ದರು.

ಯುಸೈಬಿಯೋ ಡಿಸೋಜಾ, ಶಾಮ್ ಮಲ್ಲನಗೌ ಡರ್,ಶರ್ಮಿಳಾ ಪೀಸ್ ಹಾಗೂ ಲೂಸಿ ಕ್ರೇಸ್ಟಾ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕರ ಪರವಾಗಿ ವೇದಿಕೆ ಅಲಂಕರಿಸಿದ್ದರು.ಶಾಲೆಯ ಪ್ರಾಂಶುಪಾಲರು, ಶಾಲಾ ಶಿಕ್ಷಕ ವೃಂದದವರು ಮತ್ತು ಶಾಲಾ ಸಿಬ್ಬಂದಿಗಳು ಕರ್ನಾಟಕಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದರಲ್ಲಿ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಯರು ಕನ್ನಡ ನಾಡ ಭಕ್ತಿ ಗೀತೆಗಳನ್ನು ಹಾಡಿದರು ಹಾಗೂ ಕನ್ನಡ ನಾಡು ನುಡಿಯ ಗೀತೆಗೆ ನೃತ್ಯ ಮಾಡಿದರು.ಹಾಗೂ ಶಾಲಾ ವಿದ್ಯಾರ್ಥಿಗಳು ನಾಡಿನ ಮಹಾನ ವ್ಯಕ್ತಿಗಳ ವೇಷ ಧರಿಸಿ, ಅವರ ನಡೆ – ನುಡಿಗಳನ್ನು ಹೇಳಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು.

ಇದೆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಶ್ರೀ ಪಾಪು ಧಾರೆಯವರು, ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಯಾರು ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಸುತ್ತಾರೋ ಅವರಿಗೆ 5,000 ನಗದು ಬಹುಮಾನ ನೀಡುವಂತೆ ತಿಳಿಸಿ ಹಣವನ್ನು ಶಾಲಾ ಆಡಳಿತ ಮಂಡಳಿಗೆ ನೀಡಿದರು.

ಪ್ರಿನ್ಸಿಪಾಲರಾದ ರಿವರೆಂಡ ಫಾದರ್ ಡಾ|| ಮೈಕಲ್ ಸೋಜಾ ಅವರು ಮಕ್ಕಳಿಗೆ ಕರ್ನಾಟಕ ಏಕೀಕರಣದ ಪ್ರಾರಂಭದಿಂದ ಇವತ್ತಿನ 68ನೇ ಕರ್ನಾಟಕ ರಾಜ್ಯೋತ್ಸವ ನಡೆದು ಬಂದ ಹಾದಿ ಯನ್ನು ಸವಿಸ್ತಾರವಾಗಿ ಹೇಳಿದರು.ಈ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವೀಣಾ ಉಡುಪಿ, ನಿರೂಪಿಸಿದರು ವಂದನಾರ್ಪಣೆ ತಿಳಿಸಿದರು.

ಯೂಸುಫ್ ಅಲಿ ಕಲಾಸಿ, ಪ್ರಮೋದ್ ಮಾನೆ, ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಮತ್ತು ಪಾಲಕರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರ ಮದಲ್ಲಿ ಭಾಗವಹಿಸಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.