ನವದೆಹಲಿ –
ಕೇಂದ್ರ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇ.4ರಷ್ಟು ಹೆಚ್ಚಿಸುವುದಾಗಿ ಘೋಷಿಸಲಾಗಿತ್ತು ಇದೀಗ ಸಂಪುಟದ ನಿರ್ಧಾರ ವನ್ನ ಅನುಷ್ಠಾನಗೊಳಿಸಿ ಆದೇಶವನ್ನು ಮಾಡ ಲಾಗಿದೆ.ಹೌದು ತುಟ್ಟಿಭತ್ಯೆಯನ್ನು ಶೇ.34ರಿಂದ ಶೇ.38ಕ್ಕೆ ಹೆಚ್ಚಿಸಲಾಗಿದೆ ತುಟ್ಟಿಭತ್ಯೆಯನ್ನು ಹೆಚ್ಚಿಸುವ ಅಧಿಸೂಚನೆಯನ್ನು ಹಣಕಾಸು ಸಚಿವಾಲಯವು ಆದೇಶ ಹೊರಡಿಸಿದೆ.
ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯಲ್ಲಿ ತುಟ್ಟಿಭತ್ಯೆಯ ಪರಿಷ್ಕೃತ ದರಗಳನ್ನು ಜುಲೈ 1, 2022 ರಿಂದ ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ ಶೀಘ್ರದಲ್ಲಿಯೇ ನೌಕರರ ಖಾತೆಗೆ ಹಣ ಬರಲಿದೆ ತುಟ್ಟಿಭತ್ಯೆ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ 50 ಲಕ್ಷ ಕೇಂದ್ರ ನೌಕರರು ಮತ್ತು 62 ಲಕ್ಷ ಪಿಂಚಣಿದಾರರಿಗೆ ದೊಡ್ಡ ಪರಿಹಾರ ಸಿಗಲಿದೆ ಈ ಹಿಂದೆ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟವು 3% ತುಟ್ಟಿಭತ್ಯೆಯನ್ನು ಹೆಚ್ಚಿಸಿತ್ತು
ಆಗ ಡಿಎ ಶೇ.31ರಿಂದ ಶೇ.34ಕ್ಕೆ ಏರಿಕೆಯಾ ಗಿತ್ತು.ಕೇಂದ್ರ ನೌಕರರಿಗೆ ಶೇ.34ರ ಬದಲಾಗಿ ಶೇ.38ರಷ್ಟು ತುಟ್ಟಿಭತ್ಯೆ ನೀಡಲಾಗುವುದು ಈ ಭತ್ಯೆ ಮೂಲ ವೇತನದ ಆಧಾರದ ಮೇಲೆ ಇರುತ್ತದೆ ಪರಿಷ್ಕೃತ ದರವು ಜುಲೈ 1, 2022 ರಿಂದ ಅನ್ವಯವಾಗುತ್ತದೆ. ಏಳನೇ ವೇತನ ಆಯೋಗದ ಅಡಿಯಲ್ಲಿ ‘ಬೇಸಿಕ್ ಪೇ’ ಅನ್ನು ವಿವಿಧ ಹಂತಗಳ ಆಧಾರದ ಮೇಲೆ ನಿಗದಿಪಡಿ ಸಲಾಗಿದೆ. ಈ ಪರಿಷ್ಕೃತ ವೇತನ ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಮೂಲ ವೇತನ ದಲ್ಲಿ ವಿಶೇಷ ಭತ್ಯೆ ಇಲ್ಲ.
ಮೂಲ ವೇತನವು ಯಾವುದೇ ಕೇಂದ್ರ ಉದ್ಯೋಗಿಯ ಸಂಬಳದ ಅತ್ಯಗತ್ಯ ಭಾಗ ವಾಗಿದೆ. ಇದನ್ನು FR9(21) ಅಡಿಯಲ್ಲಿ ಸಂಬಳ ಎಂದು ಪರಿಗಣಿಸಲಾಗುತ್ತದೆ.ವೆಚ್ಚ ಇಲಾಖೆಯ ಅಧಿಸೂಚನೆಯಲ್ಲಿ ತುಟ್ಟಿಭತ್ಯೆಯ ಪಾವತಿಯಲ್ಲಿ 50 ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪೂರ್ಣ ರೂಪಾಯಿ ಎಂದು ಪರಿಗಣಿಸಲಾಗು ತ್ತದೆ ಎಂದು ಹೇಳಲಾಗಿದೆ ಅದಕ್ಕಿಂತ ಕಡಿಮೆ ಮೊತ್ತವನ್ನು ನಿರ್ಲಕ್ಷಿಸಬಹುದು.
ಅಧಿಸೂಚನೆಯ ಪ್ರಕಾರ ಪರಿಷ್ಕೃತ ಡಿಎಯ ಪ್ರಯೋಜನವು ರಕ್ಷಣಾ ಸೇವೆಗಳ ನಾಗರಿಕ ಉದ್ಯೋಗಿಗಳಿಗೆ ಲಭ್ಯವಿರುತ್ತದೆ.ಈ ವೆಚ್ಚವು ನಿರ್ದಿಷ್ಟ ರಕ್ಷಣಾ ಸೇವಾ ಅಂದಾಜಿನ ಅಡಿಯಲ್ಲಿ ಬರುತ್ತದೆ.ಅಧಿಸೂಚನೆ ಹೊರಬಿದ್ದ ಬಳಿಕ ಇದೀಗ ಸರ್ಕಾರದಿಂದ ಬಾಕಿ ಇರುವ ಡಿಎ ಬಿಡು ಗಡೆ ಮಾಡಲಾಗುವುದು ಇದರ ಹಣ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗೆ ಶೀಘ್ರ ದಲ್ಲೇ ಬರಲಿದೆ ಎಂದು ಹಣಕಾಸು ಸಚವಾಲಯ ಹೊರಡಿಸಿರೋ ಅಧಿಸೂಚನೆಯಲ್ಲಿ ಹೇಳಿದೆ.