ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಘೋಷಣೆ…. – ವೈರಲ್ ಆಗಿದೆ ರಾಜ್ಯ ಸರ್ಕಾರಿ ನೌಕರರ ಸಂಘದ ವೇತನ ಘೋಷಣೆಯ ಕೃತಜ್ಞತೆಯ ಪೊಟೊ

Suddi Sante Desk
ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಘೋಷಣೆ…. – ವೈರಲ್ ಆಗಿದೆ ರಾಜ್ಯ ಸರ್ಕಾರಿ ನೌಕರರ ಸಂಘದ ವೇತನ ಘೋಷಣೆಯ ಕೃತಜ್ಞತೆಯ ಪೊಟೊ

ಬೆಂಗಳೂರು

ಕೊನೆಗೂ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ಆಯೋಗ ಘೋಷಣೆ ಯಾಗಿದೆಯಾ ಕಳೆದ ಕೆಲ ದಿನಗಳಿಂದ ಈಗ ನಾಳೆ ನಾಡಿದ್ದು ಇನ್ನೇರೆಡು ದಿನಗಳಲ್ಲಿ ಘೋಷಣೆ ಎಂದುಕೊಳ್ಳುತ್ತಿದ್ದ ಮಾತುಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೃತಜ್ಞತೆಯ ಪೊಟೊ ವೊಂದು ವೈರಲ್ ಆಗಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಒಂದು ವಿಚಾರವನ್ನು ಸದ್ದಿಲ್ಲದೇ ರಾಜ್ಯ ಸರ್ಕಾರ ಮುಖ್ಯಮಂತ್ರಿ ಅವರು ಕರ್ನಾಟಕ ರಾಜ್ಯೋತ್ಸವ ದಿನದಂದ ಘೋಷಣೆ ಮಾಡಿ ದ್ದಾರೆಯೇ ಎಂಬ ಅನುಮಾನದ ಮಾತುಗಳು ಹುಟ್ಟಿಕೊಂಡಿದ್ದು ರಾಜ್ಯದ ಸರ್ಕಾರಿ ನೌಕರರ ಸಂಘಟನೆಯ ಈ ಒಂದು ಪೊಟೊ ವೊಂದು ಮತ್ತಷ್ಟು ಪುಷ್ಠಿಯನ್ನು ನೀಡಿದೆ

ಕಳೆದ ಕೆಲ ದಿನಗಳಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಬಹು ವರ್ಷಗಳ ಕನಸು ನನಸಾಗುವ ಸಮಯ ಎಂದುಕೊಂಡು ಹಗಲಿ ರುಳು ಕಾಯುತ್ತಿದ್ದು ರಾಜ್ಯದ 6 ಲಕ್ಷ ಸರ್ಕಾರಿ ನೌಕರರಿಗೆ ಮತ್ತು ಕುಟುಂಬಕ್ಕೆ ರಾಜ್ಯ ಸರ್ಕಾರ ಕೊನೆಗೂ ಗುಡ್ ನ್ಯೂಸ್ ನ್ನು ಎರಡು ದಿನಗಳಲ್ಲಿ ಸಿಗಲಿದ್ದು ಇದನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ತುದಿಗಾಲಲ್ಲಿ ನಿಂತುಕೊಂಡು ಕಾಯು ತ್ತಿದ್ದು ಇನ್ನೂ ಯಾರೋ ಕೆಲವರು ಈ ಹಿಂದೆ ಮುಖ್ಯಮಂತ್ರಿ ಪಾಲ್ಗೊಂಡು ಕಾರ್ಯಕ್ರಮವೊಂ ದರಲ್ಲಿ ಘೋಷಣೆ ಮಾಡಿದ್ದ ವೇತನ ಘೋಷ ಣೆಯ ನಂತರ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಸಂಘಟನೆಯಿಂದ ಈ ಒಂದು ಪೊಟೊ ವನ್ನು ಕೃತಜ್ಞತೆಯಿಂದ ಹಾಕಲಾಗಿತ್ತು

ಇದನ್ನೇ ಕೆಲವರು ಈಗ ಮತ್ತೆ ವೈರಲ್ ಮಾಡಿದ್ದು ಇದು ರಾಜ್ಯದ ಸರ್ಕಾರಿ ನೌಕರರ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದ್ದು ಇನ್ನೂ ಈ ಒಂದು ವಿಚಾರ ಕುರಿತಂತೆ ರಾಜ್ಯಾಧ್ಯಕ್ಷರು ಮಾತನಾಡಿ ಇನ್ನೇರೆಡು ದಿನಗಳಲ್ಲಿ ಈ ಕುರಿತಂತೆ ಸ್ಪಷ್ಟವಾದ ಆದೇಶವೊಂದು ಹೊರ ಬರಲಿದ್ದು ಸಿಕ್ಕೆ ಸಿಗುತ್ತದೆ ಯಾವುದೇ ಅನುಮಾನವಿಲ್ಲ ಸಧ್ಯ ಹಾಕಿರುವ ಪೊಟೊ ಹಳೆಯದಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.