ಮೈಸೂರು –
ಮೈಸೂರಿನಲ್ಲಿ ದಂಡ ವಸೂಲಿ ವೇಳೆ ಬೈಕ್ ಸವಾರ ಸಾವಿಗೀಡಾದ್ದಾನೆಂದುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಪೆಟ್ಟು ತಿಂದ ಪೊಲೀಸ ರಿಗೆ ಪ್ರಶಂಸನಾ ಪತ್ರಗಳನ್ನು ನೀಡಲಾಯಿತು.
ಪೊಲೀಸ್ ಆಯುಕ್ತರಿಂದ ಪ್ರಶಂಸನಾ ಪತ್ರಗಳನ್ನು ವಿತರಣೆ ಮಾಡಲಾಯಿತು.ಅಪಘಾತ ಸಮಯದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ ಸಂಚಾರ ಪೊಲೀಸರು. ತಕ್ಷಣ ಸ್ಥಳಕ್ಕೆ ಬಂದಿದ್ದ 112 ತುರ್ತು ಸ್ಪಂದನ ವಾಹನ ಸಿಬ್ಬಂದಿಗಳು ಹೀಗೆ ಪೊಲೀಸರು ಬಂದಿದ್ದ ರೂ ಕೂಡಾ ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು.
ಶೀಘ್ರದಲ್ಲಿ ಮೃತನ ದೇಹವನ್ನು ಶವಾಗಾರಕ್ಕೆ ತಲುಪಿಸಿದ್ದರು.ಅಪಘಾತಗೊಂಡಿದ್ದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸುವಲ್ಲಿ ಉತ್ತಮ ಕಾರ್ಯ ವನ್ನು ಸಂಚಾರಿ ಪೊಲೀಸರು ನಿರ್ವಹಿಸಿದ್ದರು.
ಇವೆಲ್ಲದರ ನಡುವೆ ಸಾರ್ವಜನಿಕರು ಕೂಡಾ ಆಕ್ರೋಶಗೊಂಡು ಸಿಬ್ಬಂದಿಗಳ ಮೇಲೆ ಹಲ್ಲೆಯನ್ನು ಮಾಡಿದ್ದರು.ಇಂಥಹ ಪರಸ್ಥಿತಿಯ ನಡುವೆ ಉತ್ತಮ ಕಾರ್ಯವನ್ನು ಮಾಡಿದ ಸಿಬ್ಬಂದಿಗಳಿಗೆ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಪ್ರಶಂಸನಾ ಪತ್ರವನ್ನು ನೀಡಿದ್ದಾರೆ.
ಪ್ರಶಂಸನಾ ಪತ್ರ ಪಡೆದುಕೊಂಡ ಸಿಬ್ಬಂದಿ
01 ಸ್ವಾಮಿನಾಯಕ, ಎ.ಎಸ್.ಐ, ವಿ.ವಿ.ಪುರಂ ಸಂಚಾರ ಠಾಣೆ
02 ಮಾದೇಗೌಡ, ಎ.ಎಸ್.ಐ. ವಿ.ವಿ.ಪುರಂ ಸಂಚಾರ ಠಾಣೆ
03 ಲೋಕೇಶ್. ಎ.ಎಂ. ಸಿ.ಹೆಚ್.ಸಿ. 416, ವಿ.ವಿ.ಪುರಂ ಸಂಚಾರ ಠಾಣೆ
04 ಶಿವನಾಗ, ಸಿ.ಪಿ.ಸಿ. 948, ವಿ.ವಿ.ಪುರಂ ಸಂಚಾರ ಠಾಣೆ
05 ರಮೇಶ್, ಸಿ.ಪಿ.ಸಿ. 602, ವಿ.ವಿ.ಪುರಂ ಸಂಚಾರ ಠಾಣೆ
06 ಗಣೇಶ್, ಹೆಚ್.ಆರ್., ಸಿ.ಹೆಚ್.ಸಿ. 603, ವಿಜಯನಗರ ಠಾಣೆ
07 ಭಾಸ್ಕರ್, ಎ..ಪಿ.ಸಿ 133, ಸಂಜೀವಿನಿ ತುರ್ತು ಚಿಕಿತ್ಸಾ ವಾಹನ ಚಾಲಕ
08 ಪಿ. ಮಂಜು, ಎ.ಪಿ.ಸಿ. 123, 112 ವಾಹನ ಚಾಲಕ
ಇವರೊಂದಿಗೆ ಸಾರ್ವಜನಿಕ ಸಂಪರ್ಕಾಧಿಕಾರಿ ಯನ್ನು ಕೂಡಾ ಪ್ರಶಂಸಿಸಿ ಗೌರವಿಸಿದ್ದಾರೆ ಪೊಲೀಸ್ ಆಯುಕ್ತರು