ಬೆಂಗಳೂರು –
7ನೇ ವೇತನ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು.ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ನಂತರ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಯಾಗಿ ಮೊದಲು ಧನ್ಯವಾದಗಳನ್ನು ಸಲ್ಲಿಸಿ ನಂತರ ಕೆಲವೊತ್ತ ಸಭೆಯನ್ನು ಮಾಡಿ ವೇತನ ಆಯೋಗದ ವಿಚಾರ ಕುರಿತಂತೆ ಔಪಚಾರಿಕವಾಗಿ ಮಾತುಕೆತೆಯನ್ನು ಮಾಡಿ ಚರ್ಚೆಯನ್ನು ಮಾಡಿದರು.
ಅರ್ಧ ಗಂಟೆಗೂ ಹೆಚ್ಚು ಕಾಲ ಅಧ್ಯಕ್ಷರು ಈ ಒಂದು 7ನೇ ವೇತನ ಆಯೋಗದ ವಿಚಾರ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಿ ವೇತನ ಆಯೋಗದ ರೂಪರೇಷೆ ಮತ್ತು ಇನ್ನೂ ಕೆಲ ವಿಚಾರಗಳ ಕುರಿತಂತೆ ಹಾಗೇ ವರದಿ ನೀಡುವ ಕುರಿತಂತೆಯೂ ಕೂಡಾ ಮಾತುಕತೆಯನ್ನು ಮಾಡಿದರು.
ಇನ್ನೂ ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷರಿಗೆ ಕೂಡಲೇ ಯಾವುದೇ ಕಾರಣಕ್ಕೂ ವಿಳಂಬವನ್ನು ಮಾಡದೇ ವರದಿಯನ್ನು ನೀಡುವಂತೆ ಹೇಳಿದರು.ವರದಿ ಬಂದ ಕೂಡಲೇ ಈ ಒಂದು ಕುರಿತಂತೆ ಅದನ್ನು ಜಾರಿಗೆ ತರಲಾಗುತ್ತದೆ ಎಂಬ ಮಾತನ್ನು ಕೂಡಾ ಹೇಳಿದರು.ಇನ್ನೂ ಇದರೊಂದಿಗೆ ವೇತನ ಆಯೋಗದ ಸಮಿತಿಗೆ ಅಧ್ಯಕ್ಷರನ್ನು ನೇಮಕಾತಿ ಮಾಡಿದ ಬೆನ್ನಲ್ಲೇ ಚಟುವಟಿಕೆಗಳು ಆರಂಭ ಗೊಂಡಿದ್ದು ಬೇಗನೆ ಅಧ್ಯಕ್ಷರು ವರದಿಯನ್ನು ನೀಡಲಿ ಎಂಬೊದು ನಮ್ಮ ಆಶಯವಾಗಿದೆ.
ವರದಿ – ಚಕ್ರವರ್ತಿ ಜೊತೆ ರವಿ ಗೌಡರ ಸುದ್ದಿ ಸಂತೆ ನ್ಯೂಸ್ ಬೆಂಗಳೂರು,