ವಿಜಯನಗರ –
ಒಂದು ಕಡೆ ಬ್ಲಾಕ್ ಫಂಗಸ್ ನಿಂದಾಗಿ ಮೃತಪಟ್ಟ ತಂದೆ ಮತ್ತೊಂದು ಕಡೆಗೆ SSLC ಪರೀಕ್ಷೆ ಇಂತಹ ದುಃಖದ ನಡುವೆ ವಿದ್ಯಾರ್ಥಿ ಯೊಬ್ಬಳು ಪರೀಕ್ಷೆ ಬರೆದಿದ್ದಾರೆ. ಹೌದು ಎಲ್ಲ ಮಕ್ಕಳಿಗೆ ಕರೊನಾ ಟೆನ್ಷನ್ ಒಂದೆಡೆಯಾದರೆ ಈ ಒಂದು ಬಾಲಕಿಗೆ ತಂದೆ ಸಾವಿನ ದುಃಖವೂ ಸೇರಿಕೊಂಡಿದೆ. ಅದಾ ಗ್ಯೂ ಕೂಡಾ ತಂದೆಯ ಅಗಲಿಕೆಯ ನೋವಿನಲ್ಲೂ SSLC ಪರೀಕ್ಷೆ ಬರೆಯುವ ಮೂಲಕ ಈ ವಿದ್ಯಾರ್ಥಿ ನಿ ಗಮನ ಸೆಳೆದಿದ್ದಾಳೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹಿರೇಮಠ ವಿದ್ಯಾಪೀಠದ ಪದವಿಪೂರ್ವ ಕಾಲೇಜಿ ನಲ್ಲಿ ಚಂದನಾ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿ ದ್ದಾಳೆ.ಈಕೆಯ ತಂದೆ ಸಣ್ಣ ಓಬಯ್ಯ (51) ಬುಧವಾರ ರಾತ್ರಿ ಬ್ಲ್ಯಾಕ್ ಫಂಗಸ್ ನಿಂದಾಗಿ ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಧಚಿಕ್ಕಮ್ಮ ಗಿರಿಜಾ ಹಾಗೂ ಚಿಕ್ಕಪ್ಪ ಅಂಜಿನಪ್ಪ ಅವರು ಚಂದನಾಳನ್ನು ಸಮಾಧಾನಪಡಿಸಿ, ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದ್ದರು.