ಗದಗ –
ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಸಿ ಬರಲು ಅವಕಾಶ ನೀಡಿದ ಹಿನ್ನಲೆಯಲ್ಲಿ ಗದಗ ನಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಬದಲಾವಣೆ ಮಾಡಿ ಆದೇಶವನ್ನು ಮಾಡಲಾಗಿದೆ
ಗದಗ ಸಿಎಸ್ ಪಾಟೀಲ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಬದಲಾವಣೆ ಮಾಡಿ ಡಿಡಿಪಿಐ ಬಸವಲಿಂಗಪ್ಪ ಆದೇಶ ಹೊರಡಿಸಿದ್ದಾರೆ.ನಿನ್ನೆ ನಡೆದ SSLC ಪರೀಕ್ಷೆಗೆ ಹಿಜಾಬ್ ಧರಿಸಿ ಬರಲು ಅಧಿಕಾರಿಗಳು ಅವಕಾಶ ನೀಡಿ ದ್ದರು.ಪರೀಕ್ಷೆ ಆರಂಭವಾಗುತ್ತಿದ್ದಂತೆ ಎಚ್ಚೆತ್ತು ಹಿಜಾಬ್ ತೆಗೆಸಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು.ಪರೀಕ್ಷಾ ಸಮ ಯದಲ್ಲಿ ಲೋಪ ಎಸಗಿದ ಪರೀಕ್ಷಾ ಮುಖ್ಯಸ್ಥ ಕೆವಿ ಭಜಂತ್ರಿ,ಬಿ ಎಸ್ ಹೊನಗುಡಿ ಅವರನ್ನು ಬದಲಾವಣೆ ಮಾಡಲಾಗಿದೆ.ಅವರ ಜಾಗದಲ್ಲಿ ಎಸ್ ಕೆ ಹವಾಲ್ದಾರ್, ಕೆ.ವೈ.ವಿಭೂತಿ ಅವರ ನಿಯೋಜನೆ ಮಾಡಿ ಆದೇಶಿಸಲಾ ಗಿದ್ದು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಕೆಲವರಿಗೆ ನೋಟೀಸ್ ನೀಡಲಾಗಿದ್ದು ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.