ಧಾರವಾಡ –
ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿಯನ್ನು ಧಾರವಾಡದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ನಗರದ ತುಂಬೆಲ್ಲಾ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಡಗರದಿಂದ ಆಚರಣೆ ಮಾಡಲಾಯಿತು.

ಇನ್ನೂ ಜಯಂತಿ ಅಂಗವಾಗಿ ಬಿಜೆಪಿ ಧಾರವಾಡ ನಗರ 71 ಘಟಕದ ವತಿಯಿಂದ ಶಾಸಕರಾದ ಅಮೃತ ದೇಸಾಯಿಯವರು ಶಿವಾಜಿ ವೃತ್ತದಲ್ಲಿನ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನಗಳನ್ನು ಸಲ್ಲಿಸಿದರು.

ಇದೇ ವೇಳೆ ಸಮಸ್ತ ಜನತೆಗೆ ಶಿವಾಜಿ ಮಹಾರಾಜರ 394 ನೇ ಜಯಂತಿಯ ಶುಭಾಶಯಗಳು ಕೋರಿದರು.ಈ ಸಂದರ್ಭದಲ್ಲಿ ಈರೇಶ ಅಂಚಟಗೇರಿ, ತವನಪ್ಪ ಅಷ್ಟಗಿ, ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ. ಶಂಕರ ಶೇಳಕೆ, ಮಂಜು ಕಮ್ಮಾರ, ಶಕ್ತಿ ಹಿರೇಮಠ, ಅರವಿಂದ ಏಗನಗೌಡರ, ಜಗ್ಗು ಚಿಕ್ಕಮಠ, ವಿನಾಯಕ ಗೊಂದಳಿ, ಮುತ್ತು ಬನ್ನೂರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇನ್ನೂ ಇದೇ ವೇಳೆ ವಿವಿಧ ಸಂಘಟನೆಗಳು ಮತ್ತು ಸಮಾಜದವರಿಂದಲೂ ಶಿವಾಜಿ ಮಹಾರಾಜರಿಗೆ ಮಾಲಾರ್ಪಣೆ ಮಾಡಿದ್ದು ಕಂಡು ಬಂದಿತು. ಧಾರವಾಡದ ಮರಾಠಾ ವಿದ್ಯಾಪ್ರಸಾರಕ ಮಂಡಳಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 394 ನೇ ಜಯಂತ್ಯೋತ್ಸವವನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಅಂಗವಾಗಿ ಕಾರ್ಯಾಧ್ಯಕ್ಷರಾದ ಸುಭಾಷ ಶಿಂಧೆ.ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಧ್ಯಕ್ಷರಾದ ಎಮ್.ಎನ್.ಮೋರೆ, ಬಸವಂತಪ್ಪ ಮಾಲನವರ, ಗಣೇಶ ಕದಂ, ರಾಜು.ಬಿರ್ಜೆನವರ, ಮಂಜುನಾಥ ಬೋಸಲೆ, ಯಲಪ್ಪ ಚವ್ಹಾಣ, ರಾಜು ಕಾಳೆ, ಸುನೀಲ ಮೋರೆ ಸೇರಿದಂತೆ ಮಂಡಳದ ನಿರ್ದೇಶಕರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು

ಇದರೊಂದಿಗೆ ಬೇರೆ ಬೇರೆ ಸಂಘಟನೆಗಳಿಂದರೂ ಕೂಡಾ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಣೆ ಮಾಡಲಾಯಿತು.