ಹುಬ್ಬಳ್ಳಿ ಧಾರವಾಡ –
ಛೋಟು ಮಾಲೆ ನಾಲ್ಕು ನಿಂಬೆಹಣ್ಣು,ಎರಡು ಉದಿನಕಡ್ಡಿ, ಇಷ್ಟಕ್ಕೆ 250 ರೂಪಾಯಿ – ಲೆಕ್ಕ ಹಾಕಿದರೆ 50 ರೂಪಾಯಿ ಉಳಿದ ಹಣ ಏನು ಮಾಡಿದ್ರಿ DC ಯವರೇ …..ಇದು ಚಿಗರಿ ಬಸ್ ದಸರಾ ಪೂಜಾ ಲೆಕ್ಕ ಹೇಳೊರಿಲ್ಲ ಕೇಳೊರಿಲ್ಲ
ಎಲ್ಲೇಡೆ ನಾಡಹಬ್ಬ ದಸರಾ ಸಡಗರ ಸಂಭ್ರಮ ಮನೆ ಮಾಡಿದ್ದು ಇನ್ನೂ ಈ ಒಂದು ಹಬ್ಬದಲ್ಲಿ ಬಸ್ ಪೂಜೆ ಗಾಗಿ ಪ್ರತಿ ವರ್ಷ ಇರುತ್ತಿದ್ದ 100 ರೂಪಾಯಿ ಹಣವನ್ನು ಈ ಬಾರಿ 250 ರೂಪಾಯಿ ಗೆ ಹೆಚ್ಚಿಸಲಾಗಿದೆ. ಈ ಒಂದು ಕುರಿತಂತೆ ಸ್ವತಃ ಸಾರಿಗೆ ಸಚಿವರೇ ಹೇಳಿದ್ದಾರೆ ಹೀಗಿರುವಾಗ ಹುಬ್ಬಳ್ಳಿಯ BRTS ನ ಚಿಗರಿ ಬಸ್ ಪೂಜೆಯನ್ನು ನೋಡಿದರೆ ವಿಚಿತ್ರ ಏನಿಸುತ್ತದೆ.
ಹೌದು ಪೂಜೆಗಾಗಿ ಹಣವನ್ನು ಹೆಚ್ಚಿಗೆ ನೀಡಿದ್ದರು ಕೂಡಾ ಮಾಲೆ ಕೊಟ್ಟಿದ್ದನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಒಂದು ಗೇಣು ಮಾಲೆ ಹತ್ತರಿಂದ ಹದಿನೈದು ಹೂಗಳಿಂದ ಕೂಡಿದ ಛೋಟು ಮಾಲೆ,ಇದರೊಂದಿಗೆ ಒಂದು ಟೆಂಗಿನಕಾಯಿ,ಎರಡು ಉದಿನಕಡ್ಡಿ ಇಷ್ಟೇ. ಇದನ್ನೇಲ್ಲವನ್ನು ಕೊಟ್ಟು ಕಾಟಾಚಾರಕ್ಕೆ ಬಸ್ ಗಳ ಪೂಜೆಯನ್ನು ಅಧಿಕಾರಿಗಳು ಮಾಡಿಸಿದ್ದಾರೆ ಪೂಜೆ ಮಾಡಿಸಬೇಕಾ ಮಾಡಿಸಿದ್ದಾರೆ ಕೊಟ್ಟ ಅನುದಾನವನ್ನು ಹಣವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಒಳ್ಳೇಯ ಮಾಲೆಯನ್ನು ತರಿಸಿ ಕೊಟ್ಟರೆ ಚಾಲಕರು ಕೂಡಾ ಮತ್ತಷ್ಟು ಉತ್ಸಾಹದಿಂದ ಪೂಜೆಯನ್ನು ಮಾಡುತ್ತಾರೆ
ಕಾಟಾಚಾರಕ್ಕೆ ಎಂಬಂತೆ ಛೋಟು ಮಾಲೆ ಕೊಟ್ಟು ಕೋಟಿ ಕೋಟಿ ಬಸ್ ಗಳಿಗೆ ಇಲಾಖೆಯ ಅಧಿಕಾರಿಗಳು ತುಂಬಾ ಅವಮಾನವನ್ನು ಮಾಡಿದ್ದಾರೆ ಈ ಒಂದು ಕುರಿತಂತೆ ಬಸ್ ನಲ್ಲಿ ಮಾಲೆಯನ್ನು ನೋಡಿದ ಪ್ರಯಾಣಿಕರು ನೀವು ಪೂಜೆಯನ್ನು ಮಾಡಿಲ್ವಾ ಮಾಲೆಯನ್ನು ಯಾಕೆ ಹಾಕಿಲ್ಲ ಎಂದು ಕೇಳುತ್ತಿದ್ದಾರೆ ಇನ್ನೂ ಕೆಲ ಸಾರ್ವಜನಿಕರು ಮಾಲೆಯನ್ನು ನೋಡಿ ಇದೇನಿದು ಎಂದು ಕೇಳುತ್ತಿದ್ದಾರೆ.
ಇದರ ನಡುವೆ ಬಹುತೇಕ ಚಾಲಕರು ತಾವೇ ನಾಲ್ಕು ಐದು ನೂರು ರೂಪಾಯಿ ಕೊಟ್ಟು ಅನ್ನ ಹಾಕುವ ಬಸ್ ಗೆ ಒಳ್ಳೆಯ ಗುಣಮಟ್ಟದ ಮಾಲೆಯನ್ನು ಹಾಕಿದ್ದಾರೆ ಇತ್ತ ನಾಲ್ಕು ಲಿಂಬೆಹಣ್ಣು,ಛೋಟು ಮಾಲೆ,ಎರಡು ಉದಿನಕಡ್ಡಿ,ಒಂದು ಕಾಯಿ ಈ ಒಂದು ವಸ್ತುಗಳ ಲೆಕ್ಕ ಹಾಕಿದರೆ 50 ರಿಂದ 60 ರೂಪಾಯಿ ಆಗುತ್ತದೆ
250 ರೂಪಾಯಿಯಲ್ಲಿ ಇನ್ನೂಳಿದ ಹಣವನ್ನು ಏನು ಮಾಡಿದ್ರಿ ಡಿಸಿ ಸಾಹೇಬ್ರೆ ಇದು ನಿಮ್ಮ ಗಮನಕ್ಕೆ ಇದೇನಾ ಅಥವಾ ಇಲ್ವಾ ನೋಡಿ.ಚಾಲಕರು ಏನೇ ಮಾಡಿದರು ಕೂಡಾ ಲೆಕ್ಕ ಹಾಕುವ ನಿಮಗೆ ಈ ಒಂದು ಪೂಜೆಯ ಲೆಕ್ಕ ಇರಬೇಕು ಅಲ್ವಾ ಧಾರವಾಡ ಡಿಪೋ ದಲ್ಲಿ ಬಸ್ ಗಳಿಗೆ ಕಾಣುವಂತೆ ಮಾಲೆಯನ್ನು ಹಾಕಿದ್ದಾರೆ
ಆದರೆ ಹುಬ್ಬಳ್ಳಿಯ ಯಾವುದೇ ಬಸ್ ಗೆ ಮಾಲೆ ಇಲ್ಲ ದಿರುವುದು ದಸರಾ ಹಬ್ಬದಲ್ಲಿ ದೊಡ್ಡ ದುರಂತವಾಗಿದೆ ಹಬ್ಬದ ಹಣದಲ್ಲೂ ಕತ್ತರಿ ಹಾಕಲಾಗಿದ್ದು ಯಾರು ಯಾರು ಎಲ್ಲಿ ಕತ್ತರಿ ಹಾಕಿದ್ದಾರೆ ಒಮ್ಮೆ ನೋಡಿ ಮಾಲೆ ಹೇಗೆ ಇದ್ದವು ಒಮ್ಮೆ ನೋಡಿ ವ್ಯವಸ್ಥೆಯನ್ನು ಸುಧಾರಣೆ ಮಾಡಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..