ದೆಹಲಿ –
ಕೋವೀಡ್ ಆಗಿ ಮರಣಹೊಂದಿದ ಶಿಕ್ಷಕರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ದಿಂದ ಕುಟುಂಬಕ್ಕೆ ಒಂದು ಕೋಟಿ ನೆರ ವನ್ನು ನೀಡಿದ್ದಾರೆ.ದೆಹಲಿ ಸರ್ಕಾರದ ಮುಖ್ಯ ಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ಇವರು ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟ ಶಿಕ್ಷಕ ದಿ.ನಿತಿನ್ ರವರ ಮನೆಗೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ತಾವೇ ಖುದ್ದಾಗಿ ಒಂದು ಕೋಟಿ ರೂ.ಪರಿಹಾರದ ಚೆಕ್ ವಿತರಿಸಿದ ಸುದ್ದಿ ತಿಳಿಯಿತು.
ಈ ಹಿನ್ನೆಲೆಯಲ್ಲಿ ಶಿಕ್ಷಕರ ಮೇಲಿನ ಗೌರವ ಆಧ್ಯತೆ ಕರುಣೆ ಅನುಕಂಪಶೀಲವಾಗಿ ಸ್ಪಂದಿಸಿದ ದೆಹಲಿ ಮುಖ್ಯ ಮಂತ್ರಿಗಳನ್ನು ರಾಷ್ಟ್ರ ಮಟ್ಟದ ಅಖಿಲ ಭಾರತ ಗ್ರಾಮೀಣ ಶಿಕ್ಷಕರ ಸಂಘ ಹಾಗೂ ಕ.ಸ. ಗ್ರಾಮೀಣ ಪ್ರಾ.ಶಾ.ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘಗಳು ಸ್ವಾಗತಿಸಿವೆ ಸಂಪುಟದ ಸಚಿವರೊಂದಿ ಶಿಕ್ಷಕರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ ಒಂದು ನಿರ್ಧಾರವನ್ನು ಸ್ವಾಗತಿಸಿದರು
ಇದೇ ರೀತಿ ದೇಶದ ಪ್ರಧಾನ ಮಂತ್ರಿಗಳಿಗೆ ಕೇಂದ್ರ ಶಿಕ್ಷಣ ಸಚಿವರಿಗೆ ಮತ್ತು ದೇಶದ ಎಲ್ಲಾ ಮುಖ್ಯ ಮಂತ್ರಿಗಳವರಿಗೆ ರಾಜ್ಯಾಧ್ಯಕ್ಷ ಅಶೋಕ ಎಮ್. ಸಜ್ಜನ .ಪ್ರ.ಕಾ.ಮಲ್ಲಿಕಾರ್ಜುನ.ಸಿ.ಉಪ್ಪಿನ.ಉಪಾಧ್ಯಕ್ಷರಾದ ಎಲ್.ಆಯ್.ಲಕ್ಕಮ್ಮನವರ ಕೋಶಾಧ್ಯ ಕ್ಷರಾದ ಸಂಗಮೇಶ ಖನ್ನಿನಾಯ್ಕರ ಮತ್ತೊಮ್ಮೆ ಆಗ್ರಹಿಸಿದ್ದಾರೆ.
ಇವರೊಂದಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತು ರಾಜ್ಯ ಘಟಕ ದೆಹಲಿ ಸರ್ಕಾರದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ ರಾಜ್ಯಾದ್ಯಕ್ಷರು ಗುರು ತಿಗಡಿ,ರಾಜ್ಯ ಪ್ರದಾನ ಕಾರ್ಯದರ್ಶಿ ಅಶೋಕ ಸಜ್ಜನ
ರಾಜ್ಯ ಕೋಶಾದ್ಯಕ್ಷ ಶಂಕರ ಘಟ್ಟಿ, ಪದಾಧಿಕಾರಿ ಗಳಾದ ಎಸ್ ವಾಯ್ ಸೊರಟಿ, ಎಸ್ ಎಫ್ ಪಾಟೀಲ,ಶಿವಾನಂದ ಕುಡುಸೋಮಣ್ಣನವರ ಆರ್ ನಾರಾಯಣಸ್ವಾಮಿ ಚಿಂತಾಮಣಿ, ಪವಾಡೆಪ್ಪ ಎಲ್ ಐ ಲಕ್ಕಮ್ಮನವರ,ಸಂಗಮೇಶ ಖನ್ನಿನಾಯ್ಕರ, ಬಿ ವಿ ಪ್ರೇಮಾವತಿ, ಸೇರಿದಂತೆ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯ ಪ್ರಮುಖರು ಮತ್ತು ಅದರ ಅಡಿ ಯಲ್ಲಿ ಬರುವ ಎಲ್ಲಾ ಶಿಕ್ಷಕರ ಸಂಘಗಳು ಈ ದೆಹಲಿ ಸರಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ
..