ಹಾವೇರಿ –
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯ ಕ್ರಮದ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯ ಪ್ರವಾಸ ವನ್ನು ಕೈಗೊಂಡಿದ್ದಾರೆ.ಬೆಂಗಳೂರಿನಿಂದ ಈಗಾಗಲೇ ಬಂದಿರುವ ನಾಡ ದೋರೆ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿಡುವಿಲ್ಲದ ಕೆಲಸ ಕಾರ್ಯಕ್ರಮಗಳ ನಡುವೆ ನಾಡ ದೋರೆ ಈಗಷ್ಟೇ ಆರಂಭವಾಗಿರುವ ಶಾಲೆಗಳ ಹಿನ್ನಲೆಯಲ್ಲಿ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಕೆಲ ಸಮಯ ಕಳೆದರು.
ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅರಟಾಳ ದುಂಡಶಿ ಗ್ರಾಮದ ಸ್ವಾಮಿ ವಿವೇಕಾ ನಂದ ಪ್ರೌಢಶಾಲೆ ಗೆ ಭೇಟಿ ನೀಡಿದರು. ಮುಖ್ಯ ಮಂತ್ರಿ ಶಾಲೆಗೆ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿ ದ್ತಂತೆ ಮಕ್ಕಳೆಲ್ಲರೂ ಹೊರಗಡೆ ಬಂದು ನಿಂತು ಕೊಂಡು ಚಪ್ಪಾಳೆ ಹೊಡೆಯುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಗತ ಮಾಡಿದರು.
ಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಕೆಲವೊತ್ತು ಕಳೆದ ಶಾಲೆ ಆರಂಭ ಕುರಿತಂತೆ ಮಾತನಾಡುತ್ತಾ ಏನಾ ದರೂ ಸಮಸ್ಯೆ ಇದೇನಾ ಅವಶ್ಯಕತೆ ಇದೇನಾ ಬೇಕಾ ಕಾಳಜಿ ವಹಿಸಿಕೊಳ್ಳಿ ಚನ್ನಾಗಿ ಅದ್ಯಯನ ಮಾಡಿ ಏನಾದರೂ ಕುಂದು ಕೊರತೆ ಬೇಕಾದರೆ ಹೇಳಿ ಎಂದರು.
ಸಿಎಮ್ ಮಾತು ಕೇಳುತ್ತಿದ್ತಂತೆ ಮಕ್ಕಳು ಮಾತ ನಾಡುತ್ತಾ ಮಾಹಿತಿಯನ್ನು ಹಂಚಿಕೊಂಡರು.ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಕೆಲಹೊತ್ತು ಕಳೆದ ಸಿಎಂ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.
ಇದೇ ವೇಳೆ ಅಧಿಕಾರಿಗಳಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ತಾಕೀತು ಮಾಡಿದರು.