ಕಲ್ಲು ಕ್ವಾರಿ ಸ್ಪೋಟಗೊಂಡ ಪ್ರದೇಶಕ್ಕೆ ಮುಖ್ಯಮಂತ್ರಿ ಭೇಟಿ – ಅಧಿಕಾರಗಳೊಂದಿಗೆ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ

Suddi Sante Desk

ಶಿವಮೊಗ್ಗ –

ಜನೇವರಿ 23 ರಂದು ಶಿವಮೊಗ್ಗದ ಹುಣಸೋಡು ಕಲ್ಲು ಕ್ವಾರೆ ಪ್ರದೇಶದಲ್ಲಿ ಸ್ಪೋಟಗೊಂಡ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸ್ಪೋಟಗೊಂಡ ಪ್ರದೇಶವನ್ನು ವೀಕ್ಷಣೆ ಮಾಡಿದ ನಾಡದೋರೆ ಸಂಪೂರ್ಣವಾಗಿ ಪರಿಶೀಲನೆ ಮಾಡಿದರು.

ಇದೇ ವೇಳೆ ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದುಕೊಂಡರು.

ಸ್ಪೋಟ ಹೇಗೆ ಆಯಿತು ಕಾರಣವೇನು ಈವರೆಗೆ ಘಟನೆಯಲ್ಲಿ ಎಷ್ಟು ಜನ ನಿಧನರಾಗಿದ್ದಾರೆ ಹೀಗೆ ಹಲವಾರು ವಿಚಾರಗಳ ಕುರಿತಂತೆ ಸಿಎಮ್ ಮಾಹಿತಿಯನ್ನು ಪಡೆದುಕೊಂಡರು.

ಮುಖ್ಯಮಂತ್ರಿ ಬಿಎಸ್ ವೈ ಅವರೊಂದಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ,

ಶಾಸಕರಾದ ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.