ಹುಬ್ಬಳ್ಳಿ –
ರಸ್ತೆ ಮಧ್ಯದಲ್ಲಿ ನಿಂತುಕೊಂಡಿದ್ದ ಯುವಕನಿಗೆ ಸೈಡ್ ನಿಂತುಕೊಳ್ಳಿ ಎಂದು ಹೇಳಿದ ಚಿಗರಿ ಬಸ್ ಚಾಲಕ ನಿಗೆ ಯುವಕನೊರ್ವ ಹಲ್ಲೆ ಮಾಡಿದ ಘಟನೆ ಬೈರಿದೇವರ ಕೊಪ್ಪದಲ್ಲಿ ನಡೆದಿದೆ.ಬೈರಿದೇವರಕೊಪ್ಪದ ಸಿಗ್ನಲ್ ನಲ್ಲಿ ಈ ಒಂದು ಘಟನೆ ನಡೆದಿದೆ.ಚಿಗರಿ ಬಸ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿತವನ್ನು ಮಾಡಲಾಗಿದೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪ ಸಿಗ್ನಲ್ ನಲ್ಲಿ ಯುವಕನಿಂದ ಹಲ್ಲೆಯಾಗಿದೆ.ರಸ್ತೆ ಮಧ್ಯದಲ್ಲಿ ನಿಂತುಕೊಂಡ ಬೈಕ್ ಸವಾರ ಮಣಿಕಂಠ ನಿಗೆ ಪಕ್ಕಕ್ಕೆ ನಿಂತುಕೊಳ್ಳಿ ಎಂದು ಹೇಳಿದ್ದಾನೆ ಚಾಲಕ ಮಹಾಂತೇಶ ಗುರಿಕಾರ ಮೇಲೆ ಹಲ್ಲೆಯನ್ನು ಮಾಡಿದ್ದಾನೆ
ಮುಖಕ್ಕೆ ಕಣ್ಣಿಗೆ ಹಿಗ್ಗಾ ಮುಗ್ಗಾ ಥಳಿತವನ್ನು ಮಾಡಿದ್ದು ರಕ್ತ ಬರುವಂತೆ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ ಯುವಕ. ಚಿಗರಿ ಬಸ್ ಚಾಲಕ ಮಹಾಂತೇಶ ಗುರಿಕಾರ ಹಲ್ಲೆ ಗೊಳಗಾದ ಡ್ರೈವರ್ ಆಗಿದ್ದು ರಕ್ತ ಬರುವಂತೆ ಕಣ್ಣು ಮತ್ತು ಮುಖದ ಭಾಗಕ್ಕೆ ಹೊಡೆದಿದ್ದು ಹಲ್ಲೆ ಮಾಡಿದ ಯುವಕನೊಂದಿಗೆ ರಕ್ತ ಸುರಿಸಿಕೊಳ್ಳುತ್ತಾ ಪೊಲೀಸ್ ಠಾಣೆ ಗೆ ತೆರಳಿದ್ದಾನೆ ಡ್ರೈವರ್
ಬೈರಿದೇವರಕೊಪ್ಪದ ಮಣಿಕಂಠ ನಿಂದ ಹಲ್ಲೆ ಯಾಗಿದ್ದು ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇನ್ನೂ ಪದೇ ಪದೇ ಇಂತಹ ಘಟನೆ ಗಳು ಟ್ರ್ಯಾಕ್ ನಲ್ಲಿ ನಡೆಯುತ್ತಿದ್ದು ಡಿಸಿ ಯವರೇ ಚಾಲಕರಿಗೆ ರಕ್ಷಣೆ ಇದೆನಾ ಎಂಬ ಮಾತುಗಳು ಡ್ರೈವರ್ ವಲಯದಲ್ಲಿ ಕೇಳಿ ಬರುತ್ತಿವೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……