ಹುಬ್ಬಳ್ಳಿ –
ಮೂಲ ಉದ್ದೇಶವನ್ನು ಮರೆತ ಚಿಗರಿ ಪ್ರತ್ಯೇಕ ರಸ್ತೆಯಲ್ಲಿ ಹೆಚ್ಚುತ್ತಿವೆ ಅಪಘಾತಗಳು ಬೇಕಾ ಬಿಟ್ಟಿಯಾಗಿ ತಿರುಗಾಡುತ್ತಿರುವ ವಾಹನಗಳಿಗೆ ಕಡಿವಾಣ ಹಾಕಿ ಚಿಗರಿ ಬಸ್ ಅಪಘಾತ ತಪ್ಪಿಸಿ DCಯವರೇ…..ಇದು ನಿಮ್ಮ ಗಮನಕ್ಕೆ ಇಲ್ವಾ
ತುರ್ತು ಸಾರಿಗೆ ಸಂಪರ್ಕದ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಧ್ಯೆ ಚಿಗರಿ ಸಾರಿಗೆ ಯನ್ನು ಆರಂಭ ಮಾಡಲಾಗಿದೆ.ಅವಳಿ ನಗರದ ಮಧ್ಯದ ಈ ಒಂದು ಸಾರಿಗೆಗಾಗಿ ಪ್ರತ್ಯೇಕವಾದ ರಸ್ತೆಯೊಂ ದಿಗೆ ಬಸ್ ನಿಲ್ದಾಣಗಳನ್ನು ಕೂಡಾ ಮಾಡಲಾ ಗಿದೆ.ಚಿಗರಿ ಬಸ್ ಗಳಿಗಾಗಿ ಬೇರೆ ರಸ್ತೆಗಳಿದ್ದರೂ ಕೂಡಾ ಅಪಘಾತ ಗಳು ಹೆಚ್ಚಾಗುತ್ತಿವೆ.ಇದಕ್ಕೆ ಮೇಲಿಂದ ಮೇಲೆ ಟ್ರ್ಯಾಕ್ ನಲ್ಲಿ ಕಂಡು ಬರುತ್ತಿ ರುವ ಅಪಘಾತಗಳೇ ಸಾಕ್ಷಿಯಾಗಿದ್ದು ಮತ್ತೆ ಎರಡು ಬಸ್ ಗಳು ಕೂಡಾ ಇಂದು ಅಪಘಾತ ವಾಗಿವೆ.
ಹೀಗಿರುವಾಗ ಈ ಒಂದು ರಸ್ತೆಯಲ್ಲಿ ಚಿಗರಿ ಬಸ್ ಮತ್ತು ಅಂಬ್ಯೂಲೆನ್ಸ್ ಮಾತ್ರ ಸಂಚಾರ ಮಾಡ ಬೇಕು ಎಂಬ ಆದೇಶವನ್ನು ಪೊಲೀಸ್ ಆಯುಕ್ತರು ಈ ಹಿಂದೆ ಮಾಡಿದ್ದಾರೆ ಇದು ಚಿಗರಿ ರಸ್ತೆಯ ಮೂಲ ಉದ್ದೇಶ ಆದರೆ ಇದನ್ನು ಇಂದು ಮರೆತಂತೆ ಕಾಣುತ್ತಿದೆ.ಇಲ್ಲಿ 80 ಚಿಗರಿ ಬಸ್ ಮಾತ್ರ ಸುತ್ತಾಡುತ್ತಿದ್ದರೆ ಅದಕ್ಕಿಂತ ಹೆಚ್ಚು ಜನಪ್ರತಿನಿಧಿಗಳ,ಸರ್ಕಾರಿ ಇಲಾಖೆಗಳ, ಪೊಲೀಸ್ ಇಲಾಖೆಗಳ,ಇದರೊಂದಿಗೆ ಖಾಸಗಿ ಕಾರುಗಳು ವಾಹನಗಳು ಹೀಗೆ ಬೇಕಾಬಿಟ್ಟಿ ಯಾಗಿ ಸಂಚಾರವನ್ನು ಮಾಡುತ್ತಿದ್ದು
ಇದನ್ನೇಲ್ಲವನ್ನು ನೋಡಿದರೆ ಮೂಲ ಉದ್ದೇಶ ವನ್ನು ಮರೆತಂತೆ ಕಾಣುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದ ಡಿಸಿ ಯವರು ಚಾಲಕರ ಮೇಲೆ ಶಿಸ್ತು ಕ್ರಮದ ಕಡಿವಾಣವನ್ನು ಹಾಕುತ್ತಿರುವುದು ಕಂಡು ಬರುತ್ತಿದೆ.ಬೇಕಾ ಬಿಟ್ಟಿಯಾಗಿ ಇಲ್ಲಿ ತಿರುಗಾಡುತ್ತಿರುವ ವಾಹನಗಳಿಗೆ ಕಡಿವಾಣ ಹಾಕಿ ಇದರಿಂದಲೇ ಇಲ್ಲಿ ಅಪಘಾತಗಳು ಹೆಚ್ಚುತ್ತಿದ್ದು ಇದೇಲ್ಲ ಗೊತ್ತಿದ್ದರು ಗೊತ್ತಿಲ್ಲದಂತೆ ಇರುವ ಅಧಿಕಾರಿಗಳೇ ಒಮ್ಮೆ ಈ ಒಂದು ವ್ಯವಸ್ಥೆಯನ್ನು ನೋಡಿ.
ಅಪಘಾತಕ್ಕೆ ಬೇರೆಯವರೇ ಕಾರಣವಾಗಿರುವ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಚಾಲಕರನ್ನು ಬಲಿ ಪಶು ಮಾಡಬೇಡಿ ಇನ್ನಾದರು ಇದು ನಿಮ್ಮ ಗಮನಕ್ಕೆ ಇರಲಿಲ್ಲ ಅಂದರೆ ದಯಮಾಡಿ ನೋಡಿ ಅಪಘಾತಗಳನ್ನು ತಡೆಗಟ್ಟಿ ಚಾಲಕರಿಗೆ ನೆಮ್ಮದಿ ಯಾಗಿ ಕರ್ತವ್ಯವನ್ನು ಮಾಡುವ ವಾತಾವರ ಣವನ್ನುಂಟು ಮಾಡಿ ಈ ಒಂದು ನಿರೀಕ್ಷೆಯಲ್ಲಿ ಹುಬ್ಬಳ್ಳಿ ಧಾರವಾಡ ಚಿಗರಿ ಚಾಲಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..