ಚಿಂಚೊಳ್ಳಿ –
ಚಿಂಚೋಳಿ ಪಟ್ಟಣದ ಶಿಖರಕ್ಕೆ ಕಾರ್ಖಾನೆ ಕಳಸವಾಗಲಿದೆ ಸಿದ್ದಸಿರಿ ಎಥೆನಾಲ್ ಹಾಗೂ ಪವರ ಕಾರ್ಖಾನೆ ಕಬ್ಬು ನುರಿಸುವ ಪ್ರಾಯೋಗಿಕ ಹಂಗಾಮಿನ ಪೂಜಾ ಸಮಾರಂಭ ಹೌದು ಸಿದ್ದಸಿರಿ ಎಥೆನಾಲ್ ಹಾಗೂ ಪವರ ಕಾರ್ಖಾನೆ ಕಬ್ಬು ನುರಿಸುವ ಪ್ರಾಯೋಗಿಕ ಹಂಗಾಮಿನ ಪೂಜಾ ಸಮಾರಂಭ ನಡೆಯಿತು.
ಒಳ್ಳೆಯವರ ಸಾಲಿನಲ್ಲಿ ಶ್ರೇಷ್ಟ ಸ್ಥಾನ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಲ್ಲುತ್ತದೆ ಎಂದು ಹಾರಕೋಡ ಸಂಸ್ಥಾನ ಹಿರೇಮಠದ ಡಾ.ಚನ್ನ ವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಚಿಂಚೋಳಿಯಲ್ಲಿ ನಡೆದ ಸಿದ್ದಸಿರಿ ಎಥೆನಾಲ್ ಹಾಗೂ ಪವರ ಕಾರ್ಖಾನೆ ಕಬ್ಬು ನುರಿಸುವ ಪ್ರಾಯೋಗಿಕ ಹಂಗಾಮಿನ ಪೂಜಾ ಸಮಾರಂಭ ದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಚಿಂಚೋಳಿಯಲ್ಲಿ ಆರಂಭಗೊಂಡಿತುವ ಎಥೆನಾಲ್ ಕಾರ್ಖಾನೆ ದೇಶದಲ್ಲಿ ಆದರ್ಶವಾಗ ಲಿದೆ. ಚಿಂಚೋಳಿ ಪಟ್ಟಣ ಇರುವಂತ ಶಿಖರಕ್ಕೆ ಕಾರ್ಖಾನೆ ಕಳಸವಾಗಲಿದೆ. ರೈತರ ಉದ್ದಾರಕ್ಕೆ ಮುಂದಾಗಿರುವ ಬಸನಗೌಡರ ಮೇಲೆ ರೈತರ ಆಶೀರ್ವಾದ ಸದಾ ಇರಲಿದೆ ಎಂದರು.
ನಡೆದಾಡುವ ದೇವರೆಂದ ಪ್ರಖ್ಯಾತಿ ಗಳಿಸಿದ್ದ ಸಿದ್ದೇಶ್ವರ ಶ್ರೀ ಗಳ ಆಶೀರ್ವಾದದ ಪವರ ಬಸನ ಗೌಡರ ಹಿಂದಿದೆ. ಶ್ರೀಗಳ ಆದರ್ಶ ಇಟ್ಟುಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಕೈಗೊಂಡ ಎಲ್ಲ ಕಾರ್ಯಗಳು ಯಶಸ್ವಿ ಆಗುತ್ತಿವೆ ಎಂದು ಹೇಳಿದರು.
ಸುದ್ದಿ ಸಂತೆ ಚಿಂಚೊಳ್ಳಿ…..