ಸೋಲಾರಗೊಪ್ಪ ದಲ್ಲಿ ಸಿಟಿ ಒಡೆದ ಛಬ್ಬಿ ಕುಕ್ಕರ್ ಗಳು – ಪತಿಯ ಪರವಾಗಿ ಬೆಂಬಲಿಗರೊಂದಿಗೆ ಮನೆ ಮನೆಗೂ ತೆರಳಿ ಕುಕ್ಕರ್ ವಿತರಣೆ ಮಾಡಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ

Suddi Sante Desk
ಸೋಲಾರಗೊಪ್ಪ ದಲ್ಲಿ ಸಿಟಿ ಒಡೆದ ಛಬ್ಬಿ ಕುಕ್ಕರ್ ಗಳು – ಪತಿಯ ಪರವಾಗಿ ಬೆಂಬಲಿಗರೊಂದಿಗೆ ಮನೆ ಮನೆಗೂ ತೆರಳಿ ಕುಕ್ಕರ್ ವಿತರಣೆ ಮಾಡಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ

ಕಲಘಟಗಿ

ಧಾರವಾಡದ ಕಲಘಟಗಿ ವಿಧಾನ ಸಭಾ ಕ್ಷೇತ್ರ ದಲ್ಲಿ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಈಗಾಗಲೇ ನಾ ಮುಂದು ನೀ ಮುಂದು ಎನ್ನುತ್ತಾ ಕಾಂಗ್ರೇಸ್ ಪಕ್ಷದ ನಾಗರಾಜ ಛಬ್ಬಿ ಅಬ್ಬರದ ಸುತ್ತಾಟವನ್ನು ಮಾಡುತ್ತಿದ್ದಾರೆ. ಈ ನಡುವೆ ಇವರೊಂದಿಗೆ ಈಗಾಗಲೇ ಪತಿಯ ಪರವಾಗಿ ಕಳೆದ ಒಂದು ತಿಂಗಳಿನಿಂದ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡಕ್ಕಿಳಿದಿರುವ ನಾಗರಾಜ ಛಬ್ಬಿ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅಬ್ಬರದ ಮಿಂಚಿನ ಸಂಚಾರ ವನ್ನು ಮಾಡುತ್ತಿದ್ದಾರೆ.

ಪ್ರತಿ ದಿನ ಬೆಳಿಗ್ಗೆ ಒಂದೂರು ಸಂಜೆ ಮತ್ತೊಂದು ಊರು ಎನ್ನುತ್ತಾ ಗ್ರಾಮದಲ್ಲಿ ಸಭೆಯನ್ನು ಮಾಡುತ್ತಾ ಸಮಸ್ಯೆಗಳನ್ನು ಆಲಿಸುವುದ ರೊಂದಿಗೆ ಕುಕ್ಕರ್ ಗಳನ್ನು ವಿತರಣೆ ಮಾಡು ತ್ತಿದ್ದಾರೆ.ಹೌದು ಕಲಘಟಗಿ ಕ್ಷೇತ್ರದ ಸೋಲಾರ ಗೊಪ್ಪ ಗ್ರಾಮದಲ್ಲಿ ಇಂದು ಕುಕ್ಕರ್ ವಿತರಣೆ ಕಾರ್ಯಕ್ರಮ ನಡೆಯಿತು.

ಗ್ರಾಮಕ್ಕೆ ಆಗಮಿಸಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರನ್ನು ಗ್ರಾಮಸ್ಥರು ಗ್ರಾಮದ ಮಹಿಳೆಯರು ಆರತಿ ಮಾಡಿ ಬರಮಾಡಿಕೊಂ ಡರು.ನಂತರ ಗ್ರಾಮ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರೊಂದಿಗೆ ವಿಶೇಷ ಸಭೆಯನ್ನು ಮಾಡಿ ಸಮಸ್ಯೆಗಳನ್ನು ಆಲಿಸಿ ನಂತರ ಕುಕ್ಕರ್ ಗಳ ವಿತರಣೆಗೆ ಚಾಲನ ನೀಡಿದರು.ಇದರೊಂದಿಗೆ ಪತಿಯ ಪರವಾಗಿ ಗ್ರಾಮದಲ್ಲಿ ಸಂಚಾರವನ್ನು ಮಾಡಿದರು.

 

 

ಗ್ರಾಮದ ಮನೆ ಮನೆಗೂ ತೆರಳಿ ಕುಕ್ಕರ್ ಗಳನ್ನು ನೀಡಿ ಈ ಬಾರಿ ಬೆಂಬಲಿಸುವಂತೆ ಬರುವ ದಿನ ಗಳಲ್ಲಿ ತಮ್ಮ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದರು.ಇದೇ ವೇಳೆ ಗ್ರಾಮ ದಲ್ಲಿ ಉತ್ತಮವಾದ ಸ್ಪಂದನೆ ಸಿಕ್ಕಿತು.ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಪವನ ಕುಮಾರ ನಾಡಕರ್ಣಿ,ಬಸಯ್ಯಾ ಚಿಕ್ಕಮಠ, ಚನ್ನಬಸಪ್ಪ ಗೌರಿ,ಪ್ರಕಾಶ ಬಂಡಿವಾಡ,ನಾಗಪ್ಪ ಹರವಿ,ದಾವಲ್ ಸಾಬ ನಧಾಪ್,ಕುಬೇರಪ್ಪ ಸುಬ್ಬಣ್ಣನವರ,ಮೂಗಪ್ಪ ತಡಸ,ಕಾಳಪ್ಪ ಬಡಿಗೇರ,ಮಂಜುನಾಥ ಮೊರಬದ,ಸೇರಿದಂತೆ ಗ್ರಾಮದ ಗುರುಹಿರಿಯರು ಪಕ್ಷದ ಕಾರ್ಯ ಕರ್ತರು ಮಹಿಳೆಯರು ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.