This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ
WhatsApp Group Join Now
Telegram Group Join Now

ಹುಬ್ಬಳ್ಳಿ –

ಹುಬ್ಬಳ್ಖಿ ಧಾರವಾಡ ಮಹಾನಗರಪಾಲಿಕೆಯಿಂದ ಪೌರಸನ್ಮಾನ

ಆತ್ಮನಿರ್ಭರ ಭಾರತ ಸಂಕಲ್ಪದ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅರ್ಥಪೂರ್ಣಗೊಳಿಸೋಣ

ಪೌರಸನ್ಮಾನ ದೇಶದ ಸಮಸ್ತ ಮಹಿಳೆಯರಿಗೆ ಸಂದ ಗೌರವ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ಹೌದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ ಓರಿಸ್ಸಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಮಹಿಳೆಯನ್ನು ಗೌರವಿಸುವ ಮೂಲಕ ಹುಬ್ಬಳ್ಳಿ ಧಾರವಾಡದ ಜನತೆ ದೇಶದ ಸಮಸ್ತ ಮಹಿಳೆಯರನ್ನು ಗೌರವಿಸಿದ್ದಾರೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹೇಳಿದರು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಇಲ್ಲಿನ ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಸನ್ಮಾನ ಸ್ವೀಕರಿಸಿ ಮಾತನಾಡಿದರು

ಹುಬ್ಬಳ್ಳಿ ಧಾರವಾಡ ಅವಳಿನಗರಗಳು ಕರ್ನಾಟಕ ಮಾತ್ರವಲ್ಲ ಸಮಗ್ರ ಭಾರತದ ಸಾಂಸ್ಕೃತಿಕ,ಐತಿಹಾಸಿಕ ನಗರಗಳಾಗಿವೆ ಉತ್ತರ ಕರ್ನಾಟಕದ ಈ ನಗರಗಳಲ್ಲಿ ಕನ್ನಡ,ಮರಾಠಿ ಭಾಷೆ ಗಳ ಅದ್ಭುತ ಸಂಗಮವಿದೆ.ಆಧ್ಯಾತ್ಮ,ಸಾಂಸ್ಕೃತಿಕ,ಶೈಕ್ಷಣಿಕ ಮಾತ್ರವಲ್ಲ,ಆಧುನಿಕವಾಗಿಯೂ ಈ ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ.ಉತ್ತರ ಕರ್ನಾಟಕವು ಸಾಂಸ್ಕೃತಿಕ, ಅಧ್ಯಾತ್ಮಿಕತೆ ಹಾಗೂ ಶೈಕ್ಷಣಿಕ ಸಾಧನೆ ಹಾಗೂ ಆಧುನಿಕ ಸೌಲಭ್ಯಗಳಿಂದ ದೇಶದಲ್ಲಿ ‌ಹೆಸರುವಾಸಿಯಾಗಿದೆ.ಪ್ರಾಚೀನ ಸಾಧನೆಯ ಜೊತೆಗೆ ಅಧುನಿಕತೆಯ ಅಭಿವೃದ್ದಿಗೆ ತೆರೆದುಕೊಂಡಿದೆ ಎಂದರು

ಇಡೀ‌ ಮಹಿಳಾ ವರ್ಗಕ್ಕೆ ಸಂದ ಸನ್ಮಾನ

ಹೌದು ಹುಬ್ಬಳ್ಳಿ-ಧಾರವಾಡ ಜನರ ಪ್ರೀತಿಯು ನನ್ನನ್ನು ಪುಳಕಿತಗೊಳಿಸಿದೆ ಇದು ಭಾರತದ ರಾಷ್ಟ್ರಪತಿಗೆ ಸಂದ ಸನ್ಮಾನ ಮಾತ್ರವಲ್ಲ ಇದು ಇಡೀ ದೇಶದ ಮಹಿಳೆಯರಿಗೆ ಸಂದ ಸನ್ಮಾನ ವಾಗಿದೆ ಎಂದು ರಾಷ್ಟ್ರಪತಿ ಮುರ್ಮು ಅವರು ಅಭಿಮಾನವನ್ನು ವ್ಯಕ್ತಪಡಿಸಿದರು.

ಇಡೀ ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಉಲ್ಲೇಖನೀಯ ವಾಗಿದೆ ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮವಾಗಿರುವ ಹುಬ್ಬಳ್ಳಿ-ಧಾರವಾಡ ಶಿಕ್ಷಣ ಸಂಸ್ಥೆಗಳ‌ ಮೂಲಕ ವಿದ್ಯಾದಾನ ಮಾಡುವ ಮೂಲಕ ವಿದ್ಯಾಕಾಶಿಯಾಗಿ ಹೊರಹೊಮ್ಮಿದೆ ಎಂದರು

ಸಾಹಿತ್ಯ ಕ್ಷೇತ್ರದಲ್ಲಿ ದ.ರಾ.ಬೇಂದ್ರೆ ವಿ.ಕೃ.ಗೋಕಾಕ ಅವರ ಕೊಡುಗೆಯನ್ನು ಸ್ಮರಿಸಿದ ಅವರು ಸಂಗೀತ ಕ್ಷೇತ್ರದಲ್ಲಿ ಭೀಮಸೇನ್ ಜೋಶಿ,ಪಂಡಿತ ಬಸವರಾಜ ರಾಜಗುರು ಮತ್ತಿತರರ ಸಾಧನೆಯನ್ನು ಉಲ್ಲೇಖಿಸಿದರು ಸಂತ‌ ಬಸವೇಶ್ವರ, ಸಿದ್ಧಾರೂಢ ಮಹಾರಾಜರ ಆಧ್ಯಾತ್ಮಿಕ ಮಾರ್ಗದಿಂದ ಈ‌ ಕ್ಷೇತ್ರವು ಧನ್ಯವಾಗಿದೆ ಎಂದರು

ಕಿತ್ತೂರು ಚೆನ್ನಮ್ಮ,ನರಗುಂದ ಬಾಬಾಸಾಹೇಬ್ ಸ್ವಾತಂತ್ರ್ಯ ಹೋರಾಟ,ತ್ಯಾಗ ಬಲಿದಾನವನ್ನು ಸ್ಮರಿಸಿದ ಗೌರವಾನ್ವಿತ ರಾಷ್ಟ್ರಪತಿಯವರು ಈ ಭಾಗದಲ್ಲಿ ಶಿಕ್ಷಣ ಹಾಗೂ‌ ಲೋಕ ಕಲ್ಯಾಣದ ಕಾರ್ಯ ಹೀಗೆ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಕೂಡ ಇಲ್ಲಿಯೇ ಹುಬ್ಬಳ್ಳಿ-ಧಾರವಾಡದಲ್ಲಿ ಆಡಿ‌ ಬೆಳೆದವರು ಅವರ ನೇತೃತ್ವದಲ್ಲಿ ಅಭಿವೃದ್ಧಿಯಡೆಗೆ ಸಾಗಲಿ ಎಂದು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಮಾತನಾಡಿ ಬಹಳ ವರ್ಷಗಳ‌ ನಂತರ ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ದೇಶದ ರಾಷ್ಟ್ರ ಪತಿಯವರು ಆಗಮಿಸಿರುವುದು ಸಂತಸ ತಂದಿದೆ.ಧಾರವಾಡ ಜಿಲ್ಲೆಯ ಇತಿಹಾಸ ಐದನೇ ಶತಮಾನದಿಂದ ಪ್ರಾರಂಭವಾ ಗುತ್ತದೆ,ಚಾಲುಕ್ಯರು,ರಾಷ್ಟ್ರಕೂಟರು,ವಿಜಯನಗರ ಅರಸರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು,ಸ್ವಾತಂತ್ರ್ಯ ಚಳುವಳಿಗೂ ಈ ಜಿಲ್ಲೆ ಗಮನಾರ್ಹ ಕೊಡುಗೆ ನೀಡಿದೆ‌‌.ಸಂಗೀತ,ಸಾಹಿತ್ಯಕ್ಕೆ ಈ ಭಾಗದ ಕೊಡುಗೆ ಮಹತ್ವದ್ದು,ಭಾರತರತ್ನ ಪಂಡಿತ ಭೀಮಸೇನ ಜೋಷಿ,ಮಲ್ಲಿಕಾರ್ಜುನ‌ ಮನಸೂರ ಮತ್ತಿತರ ಮೇಧಾವಿ ಸಂಗೀತಗಾರರು ಇಲ್ಲಿಂದ ಹೊರಹೊಮ್ಮಿದ್ದಾರೆ.

ಕನ್ನಡಕ್ಕೆ ಬಂದಿರುವ ಎಂಟು ಜ್ಞಾನಪೀಠಗ ಪ್ರಶಸ್ತಿಗಳಲ್ಲಿ ಜಿಲ್ಲೆ ಬಹುಪಾಲು ಹೊಂದಿದೆ.ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ದ್ರೌಪದಿ ಮುರ್ಮು ಅವರು,ಗ್ರಾಮ ಪಂಚಾಯತಿ ಸದಸ್ಯರಾಗಿ,ಉತ್ತಮ ಶಾಸಕರಾಗಿ,ಸಚಿವರಾಗಿ,ರಾಜ್ಯಪಾಲರಾಗಿ ಇದೀಗ ರಾಷ್ಟ್ರಪತಿಯಾಗಿ ಉನ್ನತ ಹುದ್ದೆಗೆ ಏರಿದ್ದರೂ ಕೂಡ ಸರಳ ನಡೆ,ನುಡಿಗೆ ಹೆಸರಾಗಿದ್ದಾರೆ.ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡ ಜಿಲ್ಲೆಗೆ ಐಐಐಟಿ ಉದ್ಘಾಟಿಸಲು ಆಗಮಿಸಿರುವುದು ಹೆಮ್ಮೆಯ ಸಂದರ್ಭವಾಗಿದೆ ಎಂದರು.

ಪೌರಸನ್ಮಾನ

ದೇಶದ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಶ್ರೀಸಿದ್ಧಾರೂಢರ ಬೆಳ್ಳಿ ಪ್ರತಿಮೆ,ಬಿನ್ನವತ್ತಳೆ,ಯಾಲಕ್ಕಿ ಹಾರ ಶ್ರೀಸಿದ್ಧಾರೂಢರ ಮಹಾತ್ಮೆ ಕುರಿತ ಗ್ರಂಥಗಳು,ಧಾರವಾಡ ಪೇಡೆಯನ್ನು ಮಹಾನಗರಪಾಲಿಕೆ ನೀಡಿ ಪೌರಸನ್ಮಾನ ನೀಡಿ,ಗೌರವಿಸಲಾಯಿತು

ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಗಣಿ,ಭೂವಿಜ್ಞಾನ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್,ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಶಾಸಕರಾದ ಪ್ರಸಾದ ಅಬ್ಬಯ್ಯ,ಅರವಿಂದ ಬೆಲ್ಲದ,ಅಮೃತ ದೇಸಾಯಿ ಮತ್ತಿತರರು ವೇದಿಕೆಯಲ್ಲಿದ್ದರು.

ಮಹಾಪೌರ ಈರೇಶ ಅಂಚಟಗೇರಿ ಸ್ವಾಗತಿಸಿದರು.
ಪೊಲೀಸ್ ವಾದ್ಯವೃಂದ ತಂಡವು ರಾಷ್ಟ್ರಗೀತೆ ಪ್ರಸ್ತುತಪಡಿಸಿತು‌.

ಬುಡಕಟ್ಟು ಜನರ ಸಂಭ್ರಮ

ಬುಡಕಟ್ಟು ಮಹಿಳೆಯೊಬ್ಬರು ದೇಶದ ಪ್ರಥಮ ಪ್ರಜೆಯಂತಹ ಅತ್ಯುನ್ನತ ಸ್ಥಾನಕ್ಕೇರಿರುವ ಗೌರವ ಸಂಭ್ರಮಿಸಲು,ಅಳ್ನಾವರ ತಾಲೂಕಿನಮಡಕಿಕೊಪ್ಪ,ಲಿಂಗನಕೊಪ್ಪ,ಶಿವನಗರ,ಚಂದ್ರಗಿರಿ, ಸಿಂಗನಕೊಪ್ಪದ ಧನಗರ ಗೌಳಿ ಬುಡಕಟ್ಟು, ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಾಂಸ್ಕೃತಿಕ‌ ಕಲೆಗಳನ್ನು ಪ್ರದರ್ಶಿಸಿ ಅಭಿಮಾನ ಮೆರೆದರು.


WhatsApp Group Join Now
Telegram Group Join Now
Suddi Sante Desk