ಬೆಂಗಳೂರು –
ನಮ್ಮ ಸರ್ಕಾರಿ ಶಾಲೆಗಳಲ್ಲಿ ಬೀಗ ತಗೆದು ಕಸ ಗೂಡಿಸಿ ಟಾಯ್ಲೇಟ್ ಸ್ವಚ್ಚತೆ ಮಾಡಿ ಸಾಲದಂತೆ ಅಡುಗೆ ತಯಾರಿ ಕೆಗೆ ತರಕಾರಿಗಳನ್ನು ತಗೆದುಕೊಂಡು ಬಂದು ಇದರೊಂದಿಗೆ ಪಠ್ಯಪುಸ್ತಕ,ಸಮವಸ್ತ್ರಗಳನ್ನು ತಗೆದುಕೊಂಡು ವಿತರಣೆ ಮಾಡಿ ಇಷ್ಟೇಲ್ಲ ಕೆಲಸ ಕಾರ್ಯಗಳ ನಡುವೆ ನಮ್ಮ ಶಿಕ್ಷಕ ರಿಗೆ ಪಠ್ಯಗಿಂತ ಪಠ್ಯೇತರ ಚಟುವಟಿಕೆಗಳು ಹೆಚ್ಚಾಗಿದ್ದು ಗುಣಮಟ್ಟದ ಶಿಕ್ಷಣ ಎಲ್ಲಿಂದ ಕೊಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವೇದಿಕೆಯ ಮೇಲೆ ಮಾತನಾಡಿದ ಅವರು ಇಷ್ಟೇಲ್ಲಾ ಕೆಲಸ ಕಾರ್ಯಗಳ ನಡುವೆ ಮಕ್ಕಳ ಕೈಯಲ್ಲಿ ಏನಾದರೂ ಈ ಕೆಲಸಗಳನ್ನು ಮಾಡಿದರೆ ಒಂದು ಪೊಟೊ ಹೊಡೆದು ಬಿಟ್ಟರೆ ಮಾರನೇ ಯ ದಿನ ಡಿಡಿಪಿಐ ಶಿಕ್ಷಕರನ್ನು ಅಮಾನತು ಮಾಡುತ್ತಾರೆ ಎಂದರು. ಹೀಗಾಗಿ ಇವುಗಳನ್ನು ಮಾಡಲು ಯಾವುದೇ ಸಿಬ್ಬಂದಿಗಳಿಲ್ಲ
ಈ ರೀತಿಯ ಕೆಲಸಗಳನ್ನು ಮಾಡುವುದರ ಜೊತೆಯಲ್ಲಿ ಪುಸ್ತಕಗಳನ್ನು ತಗೆದುಕೊಂಡು ಬರಬೇಕು ವಿತರಣೆ ಮಾಡಬೇಕು ಸೈಕಲ್ ತರಬೇಕು ಅಡುಗೆ ಮಾಡಲು ತರಕಾರಿ ತರಬೇಕು ಸಮವಸ್ತ್ರಗಳನ್ನು ತರಬೇಕು ಶಿಕ್ಷಕರಿಗೆ ಶಾಲಾ ಪಠ್ಯ ಚಟುವಟಿಕೆಗಳಿಗಿಂತ ಪಠ್ಯೇತರ ಚಟುವಟಿಕೆ ಗಳು ಹೆಚ್ಚಾಗಿದ್ದು ಹೀಗಾಗಿ ನಮ್ಮ ಶಿಕ್ಷಕರಿಂದ ಗುಣ ಮಟ್ಟದ ಶಿಕ್ಷಣಕ್ಕೆ ಕೊಡುತ್ತಿಲ್ಲ ಹೀಗಾಗಿ ಕಷ್ಟವಾಗುತ್ತಿದೆ.
ಈ ಎಲ್ಲಾ ಕೆಲಸಗಳನ್ನು ಮನುಷ್ಯ ಹೇಗೆ ಮಾಡತಾರೆ ವಿಚಾರ ಮಾಡಿ ನಮ್ಮ ಶಿಕ್ಷಕರು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದಾರೆಂದರು.
ವರದಿ – ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಡೆಸ್ಕ್