ವಿಜಯಪುರ –
ಹಿರೇರೂಗಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು ಸ್ವಚ್ಛತಾ ಜಾಗೃತಿ ಅಭಿಯಾನ ಸ್ವಚ್ಚತೆ ಕುರಿತು ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಜಾಗೃತಿ ಕಾರ್ಯಕ್ರಮ ಹೌದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೈ ಕಾಲು ತೊಳೆಯುವ ಪರಿ ಪಾಠವಿದೆ.
ವೈಯಕ್ತಿಕ ಹಾಗೂ ಸುತ್ತಲಿನ ಸ್ಥಳವನ್ನು ಸ್ವಚ್ಛವಾ ಗಿಟ್ಟುಕೊಂಡಲ್ಲಿ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಲು ಸಾಧ್ಯ. ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ಸ್ವಚ್ಛತೆಯ ಮಹತ್ವ ತಿಳಿದು ಮುನ್ನಡೆಯಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು
ತಾಲ್ಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಿಂದ ಹಮ್ಮಿ ಕೊಂಡಿದ್ದ ಕೈ ತೊಳೆಯುವ ಹಾಗೂ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತ ನಾಡಿದರು.
ಮುಖ್ಯ ಶಿಕ್ಷಕಿ ವಿ.ವೈ. ಪತ್ತಾರ, ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿದರು. ಶಿಕ್ಷಕರಾದ ಎಸ್.ಎಂ. ಪಂಚಮುಖಿ, ಎಸ್.ಡಿ. ಬಿರಾದಾರ, ಎಸ್.ಪಿ. ಪೂಜಾರಿ, ಎನ್.ಬಿ. ಚೌಧರಿ, ಜೆ.ಸಿ. ಗುಣಕಿ,ಎಸ್.ಎನ್. ಡಂಗಿ, ಯಲ್ಲಮ್ಮ ಸಾಲೋಟಗಿ, ಪ್ರಜ್ವಲ ಕುಲಕರ್ಣಿ ಇದ್ದರು.
ಸುದ್ದಿ ಸಂತೆ ನ್ಯೂಸ್ ಇಂಡಿ…..