CM ಅರವಿಂದ ಕೇಜ್ರಿವಾಲ್ ಬಂಧನ – ವಿಚಾರಣೆಯ ನಂತರ ದೇಶದಲ್ಲಿ ಮತ್ತೊರ್ವ ಮುಖ್ಯಮಂತ್ರಿಯನ್ನು ಬಂಧನ ಮಾಡಿದ ED ಅಧಿಕಾರಿಗಳು…..

Suddi Sante Desk
CM ಅರವಿಂದ ಕೇಜ್ರಿವಾಲ್ ಬಂಧನ – ವಿಚಾರಣೆಯ ನಂತರ ದೇಶದಲ್ಲಿ ಮತ್ತೊರ್ವ ಮುಖ್ಯಮಂತ್ರಿಯನ್ನು ಬಂಧನ ಮಾಡಿದ ED ಅಧಿಕಾರಿಗಳು…..

ನವದೆಹಲಿ

CM ಅರವಿಂದ ಕೇಜ್ರಿವಾಲ್ ಬಂಧನ ವಿಚಾರಣೆ ಯ ನಂತರ ದೇಶದಲ್ಲಿ ಮತ್ತೊರ್ವ ಮುಖ್ಯ ಮಂತ್ರಿಯನ್ನು ಬಂಧನ ಮಾಡಿದ ED ಅಧಿಕಾರಿಗಳು ಹೌದು

ಪ್ರಕರಣವೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಇಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.ಅಬಕಾರಿ ನೀತಿಗೆ ಸಂಬಂ ಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.

ದೆಹಲಿ ಸಿಎಂ ನಿವಾಸದ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ವಿಚಾರಣೆಯ ಬಳಿಕ ಅವರನ್ನು ಬಂಧಿಸಿದ್ದಾರೆ.ಜಾರಿ ನಿರ್ದೇಶನಾಲ ಯ ತಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತಲುಪಿದ್ದರು. ಈ ಪ್ರಕರಣದಲ್ಲಿ ಅವರಿಗೆ ಸಮನ್ಸ್ ನೀಡಲು ತನಿಖಾ ಸಂಸ್ಥೆಯ ತಂಡವು ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದ್ದರು.

ಶೋಧ ವಾರಂಟ್ ಇದೆ ಎಂದು ತಂಡವು ಮುಖ್ಯಮಂತ್ರಿ ನಿವಾಸದ ಸಿಬ್ಬಂದಿಗೆ ಮಾಹಿತಿ ನೀಡಿತ್ತು.ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ಈ ಹಿಂದೆ ಈ ಪ್ರಕರಣದಲ್ಲಿ ಏಜೆನ್ಸಿಯ ಅನೇಕ ಸಮನ್ಸ್ ಗಳನ್ನು ತಪ್ಪಿಸಿ ಕೊಂಡಿದ್ದರು. ಇದಕ್ಕೂ ಮುನ್ನ ನ್ಯಾಯಮೂರ್ತಿ ಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ಪೀಠವು ಕೇಜ್ರಿವಾಲ್ ಅವರಿಗೆ ಈ ಪ್ರಕರಣದಲ್ಲಿ ಬಲವಂತದ ಕ್ರಮದಿಂದ ಯಾವುದೇ ರಕ್ಷಣೆ ನೀಡಲು ನಿರಾಕರಿಸಿತು.

ಸಮನ್ಸ್ ಪ್ರಶ್ನಿಸಿ ಎಎಪಿ ನಾಯಕನ ಮುಖ್ಯ ಅರ್ಜಿ ವಿಚಾರಣೆಗೆ ನಿಗದಿಯಾದಾಗ ಏಪ್ರಿಲ್ 22 ರಂದು ಹೆಚ್ಚಿನ ಪರಿಗಣನೆಗಾಗಿ ನ್ಯಾಯಪೀಠ ಅವರ ಅರ್ಜಿಯನ್ನು ಪಟ್ಟಿ ಮಾಡಿತು ಮತ್ತು ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಜಾರಿ ನಿರ್ದೇ ಶನಾಲಯಕ್ಕೆ ಸೂಚಿಸಿತು.ಈ ನಡುವೆ ಇಂದು ಜಾರಿ ನಿರ್ದೇಶನಾಲದಯ ಅಧಿಕಾರಿಗಳು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ನವದೆಹಲಿ : ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ ದ್ದಾರೆ.ದೆಹಲಿಯ ನಿವಾಸದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿ ದ್ದಾರೆ.

ಈ ಪ್ರಕರಣದಲ್ಲಿ ಮಾರ್ಚ್ 15ರಂದು ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ, ಎಂಎಲ್ಸಿ ಕವಿತಾ ಅವರನ್ನು ಅರೆಸ್ಟ್ ಮಾಡ ಲಾಗಿತ್ತು.ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಇಡಿ ಬಂಧನದಿಂದ ವಿನಾಯಿತಿ ನೀಡುವಂತೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.ಎಎಪಿ ಸರ್ಕಾರವು 2021ರಲ್ಲಿ ಹೊಸ ಮಧ್ಯ ನೀತಿಯನ್ನು ಜಾರಿಗೆ ತಂದಿತ್ತು.

ದೆಹಲಿ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಮದ್ಯ ಮಾರಾಟವನ್ನು ಖಾಸಗಿ ಕಂಪನಿಗಳಿಗೆ ವಹಿಸಿ ಈ ನೀತಿಯನ್ನು ರಚಿಸಲಾಗಿತ್ತು. 2022 ರಲ್ಲಿ ಬಂದ ನೂತನ ಮುಖ್ಯ ಕಾರ್ಯದರ್ಶಿ ಹಗರಣ ನಡೆದಿದೆ ಎಂದು ವರದಿಯನ್ನು ಲೆಫ್ಟಿನೆಂಟ್ ಗವರ್ನರ್ಗೆ ಹಸ್ತಾಂತರಿಸಿದ್ದರು.

ಬಳಿಕ ಅವರು ಸಿಬಿಐ ತನಿಖೆಗೆ ಆದೇಶಿ ಸಿದ್ದರು.ದೆಹಲಿ ಮದ್ಯ ಹಗರಣದಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಸಂಸದ ಸಂಜಯ್ ಸಿಂಗ್ ಈಗಾಗಲೇ ಜೈಲಿನಲ್ಲಿದ್ದಾರೆ ಕಳೆದ ವರ್ಷ ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು.ಇಡಿ ದಾಖಲಿಸಿರುವ ಪ್ರಕರಣದಲ್ಲಿ ಸತತವಾಗಿ ಸಮನ್ಸ್ಗಳು ನೀಡಲಾಗಿತ್ತು. 9 ಬಾರಿ ಸಮನ್ಸ್ ನೀಡಿದರೂ ಅರವಿಂದ್ ಕೇಜ್ರೀವಾಲ್ ಮಾತ್ರ ವಿಚಾರಣೆಗೆ ಹಾಜರಾಗಿರಲಿಲ್ಲ.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.