ಬೆಂಗಳೂರು –
CM ಜನತಾ ದರ್ಶನ ಕಾರ್ಯಕ್ರಮ ಘೋಷಣೆ ಬೆನ್ನಲ್ಲೇ ಎಚ್ಚೇತ್ತುಕೊಂಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ – ಜನತಾ ದರ್ಶನದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ಇತ್ಯರ್ಥಪಡಿಸಿ ವರದಿ ನೀಡಲು ಸೂಚನೆ…..
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ನವಂಬರ್ 27 ರಂದು ಜನತಾ ದರ್ಶನವನ್ನು ಮಾಡುತ್ತಿದ್ದಾರೆ.ಈ ಒಂದು ಕಾರ್ಯಕ್ರಮದ ಘೋಷಣೆಯ ಬೆನ್ನಲ್ಲೇ ಇತ್ತ ಈ ಹಿಂದೆ ಮುಖ್ಯಮಂತ್ರಿಯವರ ಜನತಾ ದರ್ಶನ ದಲ್ಲಿ ಸಲ್ಲಿಕೆಯಾಗಿರುವ ಅಹವಾಲುಗಳ ಮಾಹಿತಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೇಳಿದೆ.
ಸಲ್ಲಿಕೆಯಾಗಿರುವ ಅರ್ಜಿಗಳು ಎಷ್ಟು ಈವರೆಗೆ ಅವುಗಳು ಯಾವ ಹಂತದಲ್ಲಿವೆ ಎಷ್ಟು ಅರ್ಜಿಗ ಳನ್ನು ವಿಲೇವಾರಿ ಮಾಡಲಾಗಿದೆ ಇನ್ನೂ ಎಷ್ಟು ಅರ್ಜಿಗಳು ಬಾಕಿ ಇವೆ ಈ ಎಲ್ಲಾ ಮಾಹಿತಿಯನ್ನು ಇಲಾಖೆಯ ಆಯುಕ್ತರು ಮಾಹಿತಿಯನ್ನು ಕೇಳಿ ದ್ದಾರೆ.ಅಲ್ಲದೇ ಈ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ನೀಡಿ ಜೊತೆಗೆ ಜನತಾ ದರ್ಶನ ದೊಳಲಾಗಿ ಅವುಗಳನ್ನು ಇತ್ಯರ್ಥ ಮಾಡಿ ವಿಳಂಬ ಮಾಡಿದರೆ ಗಂಭೀರವಾಗಿ ಪರಿಗಣಿಸ ಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ಆಯುಕ್ತರು ನೀಡಿದ್ದಾರೆ.
ಇನ್ನೂ ಈವರೆಗೆ ಈ ಹಿಂದೆ ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತಂತೆ ತಲೆ ಕೇಡಿ ಸಿಕೊಳ್ಳದ ಇಲಾಖೆಯ ಮೇಲಾಧಿಕಾರಿಗಳು ಸಧ್ಯ ಎಚ್ಚೇತ್ತುಕೊಂಡು ಮತ್ತೊಂದು ಜನತಾ ದರ್ಶನ ದಿನಾಂಕ ನಿಗದಿಯಾಗುತ್ತಿದ್ದಂತೆ ಹಿಂದಿನ ಅರ್ಜಿಗಳ ಕುರಿತಂತೆ ಮಾಹಿತಿ ಯನ್ನು ಸಧ್ಯ ಕೇಳುತ್ತಿದ್ದಾರೆ ಇಧನ್ನು ನೋಡಿದರೆ ಸಾರ್ವಜನಿ ಕರ ಸಮಸ್ಯೆಗಳಿಗೆ ಅಧಿಕಾರಿಗಳು ಹೇಗೆ ಸ್ಪಂದಿಸು ತ್ತಾರೆ ಹೇಗೆ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂಬೊದು ಈ ಒಂದು ಸುತ್ತೋಲೆಯಿಂದ ಕಂಡು ಬರುತ್ತಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..