ಹುಬ್ಬಳ್ಳಿ –
CM ರಾಜೀನಾಮೆ ನೀಡಿ ತನಿಖೆ ಎದುರಿಸಿ ರಾಜು ನಾಯಕವಾಡಿ – CM ಅವರೇ ನಿಮ್ಮ ಮೇಲೆ ಆರೋಪ ಬಂದಿದೆ ದೂರು ದಾಖಲಾಗಿದೆ ರಾಜು ನಾಯಕವಾಡಿ ಪ್ರಶ್ನೆ ಹೌದು
ಮುಡಾ ಹಗರಣದಲ್ಲಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ದೂರು ದಾಖಲಾ ಗಿದ್ದು ಈ ಒಂದು ವಿಚಾರದಲ್ಲಿ ಕೂಡಲೇ ಮುಖ್ಯಮಂತ್ರಿ ರಾಜೀನಾಮೆಯನ್ನು ನೀಡುವಂತೆ ಯುವ ಮುಖಂಡ ರಾಜು ನಾಯಕವಾಡಿ ಒತ್ತಾಯವನ್ನು ಮಾಡಿದ್ದಾರೆ.
ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ಸಧ್ಯ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯ ವರು 1ನೇ ಆರೋಪಿಯಾಗಿದ್ದು ಇನ್ನೂ ಅವರ ಪತ್ನಿ 2ನೇ ಆರೋಪಿ ಹೀಗೆ ಕುಟುಂಬದವರೆ ಲ್ಲರೂ ಆರೋಪಿಗಳಾಗಿದ್ದು ಹೀಗಾಗಿ ಆರೋಪವು ನಿಮ್ಮ ಮತ್ತು ಕುಟುಂಬದವರ ಮೇಲೆ ಬಂದಿದ್ದು ಹೀಗಾಗಿ ಕೂಡಲೇ ರಾಜೀ ನಾಮೆಯನ್ನು ನೀಡಿ ತನಿಖೆಯನ್ನು ಎದುರಿಸಿ ಎಂದು ರಾಜು ನಾಯಕವಾಡಿ ಆಗ್ರಹಿಸಿದ್ದಾರೆ.
ಇನ್ನೂ ಆರೋಪ ಮುಕ್ತವಾದ ನಂತರ ಮತ್ತೆ ನೀವು ಮುಖ್ಯಂಮಂತ್ರಿಯಾಗಿ ಮುಂದುವರೆ ಯಲು ರಾಜ್ಯದ ಜನತೆಯ ಯಾವುದೇ ಅಭ್ಯಂತ ರವಿಲ್ಲ ಎಂದಿದ್ದಾರೆ ಇನ್ನೂ ಸಮಾಜವಾದಿ ಎಂದು ಹೇಳುವ ನೀವು ನಿಮ್ಮ ಮೇಲೆ ನಿಮ್ಮ ಕುಟುಂಬ ವದರ ಮೇಲೆ ದೂರು ದಾಖಲಾದ ನಂತರ ಆರೋಪ ಬಂದ ಮೇಲೆ ಹೀಗೆ ಇರೋದು ಸರಿಯಲ್ಲ
ಹೀಗಾಗಿ ಈ ಕೂಡಲೇ ತಾವುಗಳು ರಾಜೀನಾಮೆ ಯನ್ನು ನೀಡಬೇಕು ಇಲ್ಲವಾದರೆ ರಾಜ್ಯದ ಜನತೆಯೇ ಹೋರಾಟಕ್ಕೆ ಇಳಿಯಲಿದ್ದು ಇದಕ್ಕಿಂತ ಮುಂಚಿತವಾಗಿ ತಾವು ರಾಜೀನಾಮೆ ಯನ್ನು ನೀಡುವಂತೆ ರಾಜು ನಾಯಕವಾಡಿ ಒತ್ತಾಯಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……