ಬೆಂಗಳೂರು –
ಶಾಲೆ-ಕಾಲೇಜುಗಳಲ್ಲಿ ಯೋಗಶಿಕ್ಷಣ ಅದಕ್ಕಾಗಿ ಯೋಗ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮುಂದಿನ ವರ್ಷದಿಂದ ಯೋಗ ಪಾಠ ಆರಂಭವಾಗಲಿದೆ.ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಮತ್ತು ಯೋಗಾಭ್ಯಾಸ ಪ್ರಾರಂಭಿಸಲಾಗುವುದು.ಮೊದಲು ಪ್ರೌಢಶಾಲೆ,ಕಾಲೇಜುಗಳಲ್ಲಿ ಯೋಗಶಿಕ್ಷಣ,ಯೋಗಭ್ಯಾಸ ಶುರುವಾಗಲಿದೆ ಎಂದರು
ಯೋಗ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಯೋಗಶಿಕ್ಷಣ,ಯೋಗಾ ಭ್ಯಾಸ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಕೊರೋನಾ ನಂತರ ಮಕ್ಕಳು ಬೇರೆ ಬೇರೆ ರೀತಿಯ ಒತ್ತಡಕ್ಕೆ ಒಳಗಾಗಿದ್ದು ಅವರನ್ನು ಹೊರತಂದು ಬಾಲ್ಯ ವನ್ನು ಸಂತೋಷವಾಗಿ ಕಳೆಯುವಂತಾಗಿಸುವ ನಿಟ್ಟಿನಲ್ಲಿ ಯೋಗ ಅಗತ್ಯವಿದೆ.ಮಕ್ಕಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಯೋಗ ಶಿಕ್ಷಣ ಮತ್ತು ಯೋಗಾಭ್ಯಾಸದ ಪಠ್ಯಕ್ರಮ ತಯಾರಿಸುವುದು ಯೋಗ ಶಿಕ್ಷಕರ ನೇಮಕಾತಿ ಸೇರಿದಂತೆ ಎಲ್ಲ ತಯಾರಿ ಮಾಡಿಕೊಂಡು ಮುಂದಿನ ವರ್ಷದಿಂದ ಯೋಗಶಿಕ್ಷಣ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.